ಗುಜರಾತ್‌ನಲ್ಲಿ ಹೆಸರೇ ಕೇಳದ ಪಕ್ಷಗಳಿಗೆ 4,300 ಕೋಟಿ ದೇಣಿಗೆ – ರಾಗಾ ಮತ್ತೊಂದು ಬಾಂಬ್‌

Public TV
1 Min Read
Rahul Gandhi 3

ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ಮತಗಳವು ಆರೋಪ ಮಾಡಿರುವ ರಾಹುಲ್ ಗಾಂಧಿ (Rahul Gandhi) ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಗುಜರಾತ್‌ನ ಪರಿಚಯವಿಲ್ಲದ 10 ರಾಜಕೀಯ ಪಕ್ಷಗಳು (Anonymous Parties In Gujarat) 5 ವರ್ಷಗಳಲ್ಲಿ 4,300 ಕೋಟಿ ರೂ. ದೇಣಿಗೆ ಪಡೆದುಕೊಂಡಿವೆ. ಈ ಪಕ್ಷಗಳು ಕಡಿಮೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಕಡಿಮೆ ಮತಗಳನ್ನು ಗಳಿಸಿದ್ದರೂ, ಲೆಕ್ಕಪರಿಶೋಧನಾ ವರದಿಗಳಲ್ಲಿ ದೊಡ್ಡ ಮೊತ್ತದ ವೆಚ್ಚವನ್ನು ತೋರಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸುತ್ತಾ? ಈ ಬಗ್ಗೆಯೂ ಅಫಿಡವಿಟ್ ಕೇಳ್ತಿರಾ? ಅಂತ ಎಕ್ಸ್‌ ಖಾತೆಯಲ್ಲಿ ರಾಗಾ ಆಯೋಗಕ್ಕೆ (Election Commission) ಸವಾಲ್‌ ಹಾಕಿದ್ದಾರೆ. ಇದನ್ನೂ ಓದಿ: ಟ್ರಂಪ್‌ ಸೂಚಿಸಿದ 5 ಗಂಟೆಗಳೊಳಗೆ ಪಾಕ್‌ ವಿರುದ್ಧ ಮೋದಿ ಯುದ್ಧ ನಿಲ್ಲಿಸಿದ್ರು: ರಾಹುಲ್‌ ಗಾಂಧಿ ಕಿಡಿ

ELECTION COMMISSION OF INDIA

3 ಪ್ರಮುಖ ಚುನಾವಣೆಗಳಲ್ಲಿ (Elections) ಈ ಪಕ್ಷಗಳು ಒಟ್ಟಾಗಿ ಕಣಕ್ಕಿಳಿಸಿದ್ದು ಕೇವಲ 43 ಅಭ್ಯರ್ಥಿಗಳನ್ನು ಮಾತ್ರ. ಈ ಎಲ್ಲಾ ಅಭ್ಯರ್ಥಿಗಳು ಸೇರಿ ಗಳಿಸಿದ್ದು ಕೇವಲ 54,069 ಮತಗಳು ಅಂದಿದ್ದಾರೆ. ಇದನ್ನೂ ಓದಿ: ಭಾರತೀಯ ನೌಕಾಪಡೆಗೆ ಬಲ; 2 ನೀಲಗಿರಿ ವರ್ಗದ ಯುದ್ಧನೌಕೆಗಳ ನಿಯೋಜನೆ

ಇನ್ನು, ಬಿಹಾರದಲ್ಲಿ ರಾಹುಲ್ ಮತದಾನ ಅಧಿಕಾರ ಯಾತ್ರೆಯಲ್ಲಿ ಮಾತಾಡಿ `ಗುಜರಾತ್ ಮಾಡೆಲ್’ ಅಂದ್ರೆ ಮತಗಳ್ಳತನ ಅಂತ ವಾಗ್ದಾಳಿ ನಡೆಸಿದ್ದಾರೆ. ರ‍್ಯಾಲಿಯಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ ಭಾಗಿಯಾಗಿರೋದಕ್ಕೆ ತಮಿಳುನಾಡು ಬಿಜೆಪಿ ಕಿಡಿಕಾರಿದೆ. ಸನಾತನ ಧರ್ಮ ನಾಶ, ಬಿಹಾರಿಗಳ ಬಗ್ಗೆ ನಿಮ್ಮ ಮಗ, ಸಚಿವರ ಟೀಕೆಗೆ ಧಮ್ ಇದ್ರೆ ಉತ್ತರ ಕೊಡಿ ಅಂತ ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಾರುತಿ ಸುಜುಕಿಯ ಮೊದಲ ಇವಿ ವಾಹನ ಇ-ವಿಟಾರ ರಫ್ತಿಗೆ ಪ್ರಧಾನಿ ಮೋದಿ ಚಾಲನೆ

[object Object]

Share This Article