ನವದೆಹಲಿ: ಶುಕ್ರವಾರ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವೀಕ್ ಅಂತಾ ಟೀಕಿಸಿದರೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಳೆಯ ಭಾಷಣವನ್ನು ಮೋದಿ ರಿಪೀಟ್ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದರು.
ಶುಕ್ರವಾರ ಟಿಡಿಪಿ (ತೆಲಗು ದೇಶಂ ಪಕ್ಷ) ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೀರ್ಘ ಭಾಷಣ ಮಾಡುವ ಮೂಲಕ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಹಲವು ಆರೋಪಗಳ ಸುರಿಮಳೆಗೈದಿದ್ದರು. ಕೊನೆಗೆ ಪ್ರಧಾನಿ ಮೋದಿ ಎಲ್ಲ ಆರೋಪಗಳಿಗೂ ತಮ್ಮ ಮೊನಚು ಮಾತುಗಳಿಂದ ವಿರೋಧ ಪಕ್ಷದ ನಾಯಕರೆಲ್ಲರಿಗೂ ತಿರುಗೇಟು ನೀಡಿದ್ದರು.
Advertisement
Advertisement
ರಾಹುಲ್ ಗಾಂಧಿ ತಮ್ಮ ಭಾಷಣದ ಕೊನಗೆ ಮೋದಿಯವರನ್ನು ಆಲಿಂಗನ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ರಾಹುಲ್ ಆಲಿಂಗನಕ್ಕೆ ಪ್ರತಿಕ್ರಿಯಿಸಿದ ಮೋದಿ, ನನ್ನ ಬಳಿ ಬಂದವರೇ ಎದ್ದೇಳಿ, ಮೇಲೆ ಎದ್ದೇಳಿ ಅಂದ್ರು, ನಾನು ಏಳಿಲಿಲ್ಲ, ಕೊನೆಗ ಕೂತಲ್ಲಿಯ ತಬ್ಬಿಕೊಂಡರು. ಪ್ರಧಾನಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ರಾಹುಲ್ ಗಾಂಧಿ ಕಾತುರರಾಗಿದ್ದಾರೆ. ನನ್ನನ್ನು ಈ ಸ್ಥಾನದಿಂದ ಎಬ್ಬಿಸಲು ಕೇವಲ ದೇಶದ 125 ಕೋಟಿ ಜನರಿಂದ ಸಾಧ್ಯ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
Advertisement
ಮೋದಿಯವರು ನಗುತ್ತಿರುವುದು ಎಲ್ಲರಿಗೂ ಕಾಣುತ್ತಿದೆ. ಆದರೆ, ಅವರು ಒಳಗೊಳಗೆ ಭಯ ಪಡುತ್ತಿದ್ದಾರೆ. ಮೋದಿಯವರಿಗೆ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗುತ್ತಿಲ್ಲ. ಮೋದಿ ಸತ್ಯಕ್ಕೆ ಸೂಕ್ತ ವ್ಯಕ್ತಿಯಲ್ಲ. ಮೋದಿ ತಮ್ಮ ಸೀಟಿನಿಂದ ಎದ್ದೇಳಬೇಕು ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಹೌದು, ನನಗೆ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಿಲ್ಲ. ನಾನು ಬಡ ತಾಯಿಯ ಮಗ. ನಾನು ಕಾಮ್‍ದಾರ್, ನಿಮ್ಮಂತೆ ನಾಮ್‍ದಾರ್ ಅಲ್ಲ. ನಿಮ್ಮ ಕಣ್ಣಿನಲ್ಲಿ ಕಣ್ಣಿಟ್ಟವರನ್ನು ನೀವು ಯಾವ ರೀತಿ ಮಾಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ನಾನು ಕಣ್ಣಿನಲ್ಲಿ ಕಣ್ಣಿಡುವುದಿಲ್ಲ. ನೀವು ಕಣ್ಣು ಮಿಟಿಕಿಸುವ ಆಟವನ್ನು ಇಡೀ ದೇಶ ನೋಡಿದೆ ಎಂದು ತಿರುಗೇಟು ನೀಡಿದರು.
Advertisement
ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಯೋತ್ಪದಕರನ್ನು ಹೊಡೆದುರುಳಿಸಿದರು. ಇದು ನಕಲಿ ಸರ್ಜಿಕಲ್ ಸ್ಟ್ರೈಕ್. ಸುದು ಜುಮ್ಲಾ ಸ್ಟ್ರೈಕ್ ಎಂಬ ರಾಹುಲ್ ಆರೋಪಕ್ಕೆ ನಿಮ್ಮ ಮಾತನ್ನು ದೇಶ ಕ್ಷಮಿಸಲ್ಲ. ನಿಮ್ಮ ನಿಂದನೆ ಕೇಳಲು ನಾನು ತಯಾರಿದ್ದೇನೆ. ನಮ್ಮ ಬಳಿ ಸಂಖ್ಯೆ ಇಲ್ಲ ಅಂದವರು ಯಾರು ಅಂತ ಕೇಳ್ತಾರೆ..? ನೀವು ದೇಶದ ಯೋಧರನ್ನು ಟೀಕಿಸುವುದನ್ನು ನಿಲ್ಲಿಸಿ. ಸ್ಪಷ್ಟ ಬಹುಮತದಿಂದ ಬಂದ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಿರಾ..? ದೇವೇಗೌಡರು, ಐಕೆ ಗುಜ್ರಾಲ್‍ಗೂ ಇದೇ ರೀತಿ ಮೋಸ ಆಗಿದೆ. ದೇವೇಗೌಡರನ್ನು ಪ್ರಧಾನಿ ಖುರ್ಚಿಯಿಂದ ಕೆಳಗಿಳಿಸಿದ್ದೇ ಕಾಂಗ್ರೆಸ್. ಕಾಂಗ್ರೆಸ್ ಪಕ್ಷವನ್ನು ನಂಬಬೇಡಿ ಎಂದು ಕಿಡಿಕಾರಿದರು.