ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ, ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಅಪ್ಪನಂತೆ ಬ್ಯಾಟಿಂಗ್‍ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬೌಲಿಂಗ್‍ನಲ್ಲೂ ಅದ್ಭುತ ಪ್ರದರ್ಶನ ನೀಡಿ ಅಂಡರ್ 14 ಕ್ರಿಕೆಟ್‍ನಲ್ಲಿ ಭರ್ಜರಿ ಮಿಂಚಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಬೆಂಗಳೂರಿನಲ್ಲಿ ನಡೆಸುತ್ತಿರುವ 14 ವರ್ಷದೊಳಗಿನ ಟೂರ್ನಿಯಲ್ಲಿ ವೈಸ್ ಪ್ರೆಸಿಡೆಂಟ್ಸ್ ಇಲೆವೆನ್ ಪರ ಆಡುತ್ತಿರುವ ಸಮಿತ್ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಮಿಂಚಿದ್ದಾರೆ. ಧಾರವಾಡ ವಲಯದ ವಿರುದ್ಧ ನಡೆದ ಪಂದ್ಯದಲ್ಲಿ ಸಮಿತ್ ದ್ವಿಶತಕ ಬಾರಿಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಜೂನಿಯರ್ ದ್ರಾವಿಡ್ 201 ರನ್ (256 ಎಸೆತ, 22 ಬೌಂಡರಿ) ಬಾರಿಸಿದರು. ಎರಡನೇ ಇನ್ನಿಂಗ್ಸ್ ನಲ್ಲಿ ಸಮೀತ್ 95 ರನ್ ಗಳಿಸಿದರು. ಜೊತೆಗೆ ಬೌಲಿಂಗ್ ಮಾಡಿದ ಅವರು 26 ರನ್ ನೀಡಿ, 3 ವಿಕೆಟ್ ಪಡೆದಿದ್ದಾರೆ.
Advertisement
Advertisement
ಈ ಪಂದ್ಯದಲ್ಲಿ ಎದುರಾಳಿ ಧಾರವಾಡ ತಂಡಕ್ಕೆ ಒಮ್ಮೆ ಮಾತ್ರ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಧಾರವಾಡ ತಂಡವು 124 ರನ್‍ಗಳಿಗೆ ಆಲೌಟ್ ಆಗಿತ್ತು. ಅದೇ ಸಮಯದಲ್ಲಿ ವೈಸ್ ಪ್ರೆಸಿಡೆಂಟ್ಸ್ ಇಲೆವೆನ್ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್‍ಗಳ ನಷ್ಟಕ್ಕೆ 372 ರನ್ ಗಳಿಸಿತು, ಬಳಿಕ ಎರಡನೇ ಇನ್ನಿಂಗ್ಸ್ ನಲ್ಲಿ 1 ವಿಕೆಟ್ ಕಳೆದುಕೊಂಡಯ 180 ರನ್ ಗಳಿಸಿತು. ಆದರೆ ಪಂದ್ಯವೂ ಡ್ರಾ ಆಗಿದೆ.
Advertisement
ಜೂನಿಯರ್ ದ್ರಾವಿಡ್ ಸಮಿತ್ 14 ವರ್ಷ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಜೂನಿಯರ್ ಲೀಗ್‍ನಲ್ಲಿ ಆಡುತ್ತಿದ್ದಾರೆ. ಸಮಿತ್ ತಮ್ಮ ಭರ್ಜರಿ ಬ್ಯಾಟಿಂಗ್‍ನಿಂದ ಸುದ್ದಿಯಾಗುತಿರುವುದು ಇದೇ ಮೊದಲಲ್ಲ. ಅವರು 4 ವರ್ಷಗಳ ಹಿಂದೆ ತಮ್ಮ ಶಾಲೆಗಾಗಿ ಆಡುತ್ತಿದ್ದಾಗ ಅಂಡರ್ -12 ಡಿವಿಷನ್ ಲೀಗ್ ಪಂದ್ಯಗಳಲ್ಲಿ 3 ಅರ್ಧಶತಕಗಳನ್ನು ಗಳಿಸಿದ್ದರು ಮತ್ತು ಅವರ ತಂಡವು ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿತ್ತು.