ಬೆಂಗಳೂರು: ಮಾಜಿ ಕ್ರಿಕೆಟಿಗ, ಹಾಲಿ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಪುತ್ರ ಸಮಿತ್ ದ್ರಾವಿಡ್ (Samit Dravid) ಕರ್ನಾಟಕ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿನೂ ಮಂಕಡ್ ಟೂರ್ನಿಗಾಗಿ ಆಯ್ಕೆ ಮಾಡಲಾದ ಕರ್ನಾಟಕದ (Karnataka) 15 ಸದಸ್ಯರ ತಂಡದಲ್ಲಿ 17 ವರ್ಷದ ಸಮಿತ್ ಸ್ಥಾನ ಪಡೆದಿದ್ದಾರೆ.
ದ್ರಾವಿಡ್ ಅವರ ಇಬ್ಬರು ಮಕ್ಕಳು ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಹಿರಿಯ ಮಗ ಸಮಿತ್ ಹಾಗೂ ಕಿರಿಯ ಮಗ ಅನ್ವಯ್ ಕ್ರಿಕೆಟನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಮಿತ್ ಈ ಹಿಂದೆ ಅಂಡರ್-14 ತಂಡದಲ್ಲಿ ಸ್ಥಾನ ಪಡೆದಿದ್ದರು.
Advertisement
Advertisement
Advertisement
Advertisement
ಈ ವರ್ಷ ಜನವರಿಯಲ್ಲಿ ನಡೆದ 14 ವರ್ಷದೊಳಗಿನವರ ಅಂತರ ವಲಯ ಟೂರ್ನಿಯಲ್ಲಿ ಅನ್ವಯ್ ದ್ರಾವಿಡ್ ಅಂಡರ್ 14 ಕರ್ನಾಟಕ ತಂಡದ ನಾಯಕರಾಗಿದ್ದರು. 2019-20ರ ಅಂತರ ವಲಯ ಪಂದ್ಯಗಳಲ್ಲಿ ಅನ್ವಯ್ 2 ದ್ವಿಶತಕ ಹೊಡೆದಿದ್ದರು. ಇದನ್ನೂ ಓದಿ: ಏಷ್ಯನ್ ಗೇಮ್ಸ್ – ರೋಯಿಂಗ್‌ನಲ್ಲಿ ಭಾರತಕ್ಕೆ ಮೂರು ಪದಕ – ಕ್ರಿಕೆಟ್‌ನಲ್ಲಿ ಫೈನಲ್ ಪ್ರವೇಶಿಸಿದ ಮಹಿಳೆಯರು
ಷಈ ಬಾರಿಯ ವಿನೂ ಮಂಕಡ್ (Vinoo Mankad) ಟೂರ್ನಿಯು ಅಕ್ಟೋಬರ್ 12 ರಿಂದ ಶುರುವಾಗಲಿದ್ದು, ಕರ್ನಾಟಕ ಅಂಡರ್ 19 (Under 19 Karnataka) ತಂಡವನ್ನು ಧೀರಜ್ ಗೌಡ ಮುನ್ನಡೆಸಲಿದ್ದು, ಧ್ರುವ್ ಪ್ರಭಾಕರ್ ಉಪನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಕರ್ನಾಟಕ ಅಂಡರ್ 19 ತಂಡ: ಧೀರಜ್ ಜೆ. ಗೌಡ (ನಾಯಕ), ಧ್ರುವ್ ಪ್ರಭಾಕರ್ (ಉಪನಾಯಕ), ಕಾರ್ತಿಕ್ ಎಸ್ಯು, ಶಿವಂ ಸಿಂಗ್, ಹರ್ಷಿಲ್ ಧರ್ಮಾನಿ (ವಿಕೆಟ್ ಕೀಪರ್), ಸಮಿತ್ ದ್ರಾವಿಡ್, ಯುವರಾಜ್ ಅರೋರಾ (ವಿಕೆಟ್ ಕೀಪರ್), ಹಾರ್ದಿಕ್ ರಾಜ್, ಆರವ್ ಮಹೇಶ್, ಆದಿತ್ಯ ನಾಯರ್, ಧನುಷ್ ಗೌಡ, ಶಿಖರ್ ಶೆಟ್ಟಿ, ಸಮರ್ಥ್ ನಾಗರಾಜ್, ಕಾರ್ತಿಕೇಯ ಕೆ.ಪಿ, ನಿಶ್ಚಿತ್ ಪೈ.
Web Stories