ಬೆಂಗಳೂರು: ಭಾರತ ಕ್ರಿಕೆಟ್ (Team India) ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಮಗ ಸಮಿತ್ ದ್ರಾವಿಡ್ ಸಿಕ್ಸ್ (Six) ಬಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಮಿತ್, ಕೆಎಸ್‌ಸಿಎ ಆಯೋಜಿಸುತ್ತಿರುವ ಮಹಾರಾಜ ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಬೆಂಗಳೂರು ಬ್ಲಾಸ್ಟರ್ ವಿರುದ್ಧದ ಪಂದ್ಯದಲ್ಲಿ ಅವರು ಬಾರಿಸಿದ ಸಿಕ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದ್ದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ದ್ರಾವಿಡ್ ಸರ್ ಮಗ ಗುರು ಇವ್ರು..????????
ಈ ಸಿಕ್ಸ್ ಗೆ ಒಂದು ಚಪ್ಪಾಳೆ ಬರ್ಲೇಬೇಕು..????????
???? ನೋಡಿರಿ Maharaja Trophy KSCA T20 | ಬೆಂಗಳೂರು vs ಮೈಸೂರು | LIVE NOW #StarSportsKannada ದಲ್ಲಿ#MaharajaTrophyOnStar@maharaja_t20 pic.twitter.com/ROsXMQhtwO
— Star Sports Kannada (@StarSportsKan) August 16, 2024
ವಿಡಿಯೋ ನೋಡಿದ ಎಲ್ಲರೂ ದ್ರಾವಿಡ್ ಮತ್ತು ಸಮಿತ್ (Samit Dravid) ನಡುವೆ ಹೋಲಿಕೆ ಮಾಡುತ್ತಿದ್ದಾರೆ. ಸಮಿತ್‌ರನ್ನು ಜೂನಿಯರ್ ರಾಹುಲ್ ದ್ರಾವಿಡ್ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ.
ಮೈಸೂರು ವಾರಿಯರ್ಸ್ ತಂಡ ದೊಡ್ಡ ಮೊತ್ತದ ರನ್ ಗಳಿಸಿದರೂ 4 ರನ್‌ಗಳಿಂದ ಸೋಲು ಕಂಡಿತು. ಪಂದ್ಯಕ್ಕೆ ಸ್ವಲ್ಪ ಹೊತ್ತು ಮಳೆಯೂ ಅಡ್ಡಿಪಡಿಸಿತು.
ಕಳೆದ ಜೂನ್ ತಿಂಗಳಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ (T20 World Cup) ಗೆದ್ದ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.