ಮುಂಬೈ: ಟೀಂ ಇಂಡಿಯಾ ಅಂಡರ್ 19 ತಂಡವನ್ನು ಮತ್ತಷ್ಟು ಬಲಗೊಳಿಸಲು ಕೋಚ್ ರಾಹುಲ್ ದ್ರಾವಿಡ್ ಆಯ್ಕೆ ಸಮಿತಿಗೆ ಕೆಲ ಸಲಹೆಗಳನ್ನು ನೀಡಿದ್ದು, ಈ ಹಿಂದೆ ತಾವು ಮಾಡಿದ್ದ ವಾದಕ್ಕೆ ವಿರುದ್ಧವಾಗಿ ಸಲಹೆ ನೀಡಿದ್ದಾರೆ.
ದ್ರಾವಿಡ್ ಕೋಚ್ ಆಗಿ ನೇಮಕವಾದ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಆಟಗಾರರು ಟೀಂ ಇಂಡಿಯಾ `ಎ’ ತಂಡದಲ್ಲಿ ಕಡ್ಡಾಯವಾಗಿ ಆಡಲೇಬೇಕು ಅಷ್ಟೇ ಅಲ್ಲದೇ ವಿಶ್ವ ಕಪ್ ಆಡಿದ ಆಟಗಾರರು ನಂತರ ಆಯೋಜನೆಗೊಳ್ಳಲಿರುವ ಟೂರ್ನಿಗಳಲ್ಲಿ ಅವರಿಗೆ ಅವಕಾಶ ನೀಡಬಾರದು. ಇದು ಅಂಡರ್ 19 ತಂಡಕ್ಕೆ ಆಯ್ಕೆ ಆಗುವ ಆಟಗಾರರ ವಯಸ್ಸಿನ ಕುರಿತು ಉಂಟಾಗುವ ಗೊಂದಲಗಳ ನಿವಾರಣೆಗೆ ಸಹಕಾರಿ ಆಗಲಿದೆ ಎಂದು ಸಲಹೆ ನೀಡಿದ್ದರು.
Advertisement
Advertisement
ಆದರೆ ಈಗ ದ್ರಾವಿಡ್ ಸಲಹೆ ಮೇರೆಗೆ ಮುಂದಿನ ಶ್ರೀಲಂಕಾ ವಿರುದ್ಧದ 4 ದಿನ ಹಾಗೂ ಏಕದಿನ ಪಂದ್ಯ ಟೂರ್ನಿ ಬಿಸಿಸಿಐ ತಂಡವನ್ನು ಆಯ್ಕೆ ಮಾಡಿದೆ. ಈ ಬಾರಿಯ ಅಂಡರ್ 19 ವಿಶ್ವಕಪ್ ಟೂರ್ನಿಯ ಮೂಲಕ ತಮ್ಮ ಜರ್ನಿಯನ್ನು ಆರಂಭಿಸಿದ್ದ ವಿಕೆಟ್ ಕೀಪರ್ ಆರ್ಯನ್ ಜುಯಾಲ್ ರನ್ನು ಏಕದಿನ ತಂಡದ ನಾಯಕರಾಗಿ ಆಯ್ಕೆ ಮಾಡಲಾಗಿದ್ದು, ನಾಲ್ಕು ದಿನಗಳ ಪಂದ್ಯದ ಟೂರ್ನಿಗೆ ಅನುಜ್ ರಾವತ್ ರನ್ನು ಆಯ್ಕೆ ಮಾಡಲಾಗಿದೆ. ಅಂದಹಾಗೇ ರಾವತ್ ಸಹ ವಿಕೆಟ್ ಕೀಪರ್ ಆಗಿದ್ದು, ಅಂಡರ್ 19 ವಿಶ್ವಕಪ್ ತಂಡದಲ್ಲಿ ಆಡಿದ್ದರು.
Advertisement
ರಾಹುಲ್ ದ್ರಾವಿಡ್ ಹಾಗೂ ಆಯ್ಕೆ ಸಮಿತಿ ಸದಸ್ಯರು ಜಂಟಿಯಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದರ ಪರಿಣಾಮವಾಗಿ ಕಿರಿಯ ಆಟಗಾರರು ಬಹುಬೇಗ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ಆದರೆ ಅಂಡರ್ 19 ವಿಶ್ವಕಪ್ ಗೆ ಮರು ಆಯ್ಕೆ ಮಾಡಬಾರದು ಎಂಬ ಯಾವುದೇ ಕಠಿಣ ನಿಯಮಗಳು ಇಲ್ಲ. ಇನ್ನು ತಂಡದ ಕೆಲ ಆಟಗಾರರು ತಮ್ಮಷ್ಟು ತರಬೇತಿ ಪಡೆಯುವ ಅಗತ್ಯವಿದ್ದು ಅವರನ್ನು ಹಿರಿಯ ತಂಡಕ್ಕೆ ಆಯ್ಕೆ ಮಾಡುವ ಮುನ್ನ ಮತ್ತಷ್ಟು ಶಕ್ತಿ ತುಂಬಬೇಕಿದೆ ಎಂಬ ಅಭಿಪ್ರಾಯ ಸಮಿತಿ ವ್ಯಕ್ತಪಡಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
Advertisement
ರಾಹುಲ್ ಈ ಹಿಂದೆ ಒಮ್ಮೆ ಆಟಗಾರರ ರಾಜ್ಯ ತಂಡಿಂದ ಬ್ರೇಕಪ್ ಆದರೆ ಆತ ಕಿರಿಯ ತಂಡವನ್ನು ಕಡಿಮೆ ಪ್ರಮಾಣದಲ್ಲಿ ಆಡಬೇಕಿದೆ ಎಂದು ತಿಳಿಸಿದ್ದರು. 2016 ರಲ್ಲಿ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದ ಲೆಗ್ ಸ್ಪಿನರ್ ಝೀಶನ್ ಅನ್ಸಾರಿ, ಮುಂಬೈ ಬ್ಯಾಟ್ಸ್ ಮನ್ ಅರ್ಮಾನ್ ಜಾಫರ್, ರಾಜಸ್ಥಾನದ ಅಲ್‍ರೌಂಡರ್ ಮಹಿಪಾಲ್, ತಮಿಳುನಾಡಿನ ವಾಷಿಂಗ್ಟನ್ ಸುಂದರ್ ಮುಂದಿನ ಟೂರ್ನಿಯನ್ನು ಆಡಲು ಆರ್ಹರಾಗಿದ್ದಾರೆ. ಅಲ್ಲದೇ ಈ ಎಲ್ಲಾ ಆಟಗಾರರು ರಾಜ್ಯ ತಂಡದಲ್ಲಿ ಸ್ಥಾನ ಪಡೆಯಲು ಕೆಲ ಅವಧಿಯನ್ನು ತೆಗೆದುಕೊಂಡರು.
ಸದ್ಯ ಗಾಯದ ಸಮಸ್ಯೆಯಿಂದ ಅಫ್ಘಾನಿಸ್ತಾನದ ಐತಿಹಾಸಿಕ ಬೆಂಗಳೂರು ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ನಾಯಕರ ಕೊಹ್ಲಿ ಅವರ ಸ್ಥಾನಕ್ಕೆ ಕರಣ್ ನಾಯರ್ ರನ್ನು ಆಯ್ಕೆ ಮಾಡಲಾಗಿದೆ.