ಬೆಂಗಳೂರು: ರಾಜ್ಯದ ಮೊಟ್ಟಮೊದಲ ಕ್ರಿಕೆಟ್ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್(ಬಿಯುಸಿಸಿ) ರಾಜ್ಯ ಮತ್ತು ದೇಶದ ಕ್ರಿಕೆಟ್‍ಗೆ ಉತ್ತಮ ಆಟಗಾರರನ್ನ ಕೊಡುಗೆಯಾಗಿ ನೀಡಿದೆ. ನಾನು ಇಲ್ಲಿ ಸಾಕಷ್ಟು ಕ್ರಿಕೆಟ್ ಕಲಿತಿದ್ದೇನೆ. ನನ್ನ ಕೆರಿಯರ್ ಬಿಲ್ಡ್ ಮಾಡಿದ್ದು ಈ ಕ್ಲಬ್ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಶತಮಾನದ ಸಂಭ್ರಮಾಚರಣೆಯಲ್ಲಿರುವ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ ಭಾಗವಾಗಿ ಇಂದು ಪತ್ರಿಕಾಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ರಾಹುಲ್ ದ್ರಾವಿಡ್, ಕ್ಲಬ್ ನೂರು ವರ್ಷ ಪೂರೈಸಿರುವುದು ಸಂತಸ ತಂದಿದೆ. ಬಿಯುಸಿಸಿ ಕ್ಲಬ್ ಮತ್ತಷ್ಟು ಉತ್ತಮ ಪಡಿಸಲು ನಾವು ಮುಂದಾಗಿದ್ದೇವೆ. ನಾನು ಸಹ ಇದೇ ಕ್ಲಬ್ ಮೂಲಕ ಕ್ರಿಕೆಟ್ ಪಾಠ ಕಲಿತ್ತಿದ್ದು, ಕ್ಲಬ್ ರಾಜ್ಯ ಮತ್ತು ದೇಶದ ಕ್ರಿಕೆಟ್‍ಗೆ ಉತ್ತಮ ಆಟಗಾರರನ್ನ ಕೊಡುಗೆಯಾಗಿ ನೀಡಿದೆ. ನಾನು ಇಲ್ಲಿ ಸಾಕಷ್ಟು ಕ್ರಿಕೆಟ್ ಕಲಿತ್ತಿದ್ದೇನೆ. ನನ್ನ ಕೆರಿಯರ್ ಬಿಲ್ಡ್ ಮಾಡಿದ್ದು ಈ ಕ್ಲಬ್ ಎಂದು ಹೇಳಿ ಧನ್ಯವಾದ ತಿಳಿಸಿದರು.
Advertisement
Advertisement
ಶತಮಾನದ ಸಂಭ್ರಮದಲ್ಲಿದೆ ಬಿಯುಸಿಸಿ: ಕ್ರಿಕೆಟ್‍ಗಾಗಿಯೇ ರಾಜ್ಯದಲ್ಲಿ ನೂರು ವರ್ಷಗಳ ಹಿಂದೆ ಬಿಯುಸಿಸಿ ಕ್ಲಬ್ ತೆರೆಯಲಾಗಿತ್ತು. ಈ ಕ್ಲಬ್ ನಲ್ಲಿ ಬ್ಯಾಟ್, ಬಾಲ್ ಹಿಡಿದ ಎಷ್ಟೋ ಮಂದಿ ರಾಜ್ಯ ಹಾಗೂ ದೇಶಕ್ಕಾಗಿ ಕ್ರಿಕೆಟ್ ಆಡಿರುವುದು ಕ್ಲಬ್‍ಗೆ ಹೆಮ್ಮೆ ಸಾಧನೆ. ಶತಮಾನದ ಸಂಭ್ರಮಾಚರಣೆಯ ಪ್ರಯುಕ್ತ ಕರ್ನಾಟಕ ಗಲ್ಫ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುಬಿಸಿಸಿ ಕ್ಲಬ್ ಹಾಲಿ ಅಧ್ಯಕ್ಷ ರಾಹುಲ್ ದ್ರಾವಿಡ್, ಕಿರ್ಮಾನಿ, ರೋಜರ್ ಬಿನ್ನಿ ಹಾಗೂ ಮತ್ತಿತರ ಕ್ಲಬ್ ನ ಆಟಗಾರರರು ಭಾಗವಹಿಸಿದ್ದರು.
Advertisement
ಕರ್ನಾಟಕದ ಹೆಮ್ಮೆಯ ಆಟಗಾರರಾದ ಡಾ. ಕೆ. ತಿಮ್ಮಪ್ಪಯ್ಯ ಹಾಗೂ ಕೆಕಿ ತಾರಾಪೊರ್ ಅವರು ಕ್ಲಬ್ ಸ್ಥಾಪಿಸಿದ್ದರು. ರೋಜರ್ ಬಿನ್ನಿ, ಸೈಯದ್ ಕಿರ್ಮಾನಿ, ಸದಾನಂದ ವಿಶ್ವನಾಥ್, ದೊಡ್ಡ ಗಣೇಶ್, ಸ್ಟುವರ್ಟ್ ಬಿನ್ನಿ, ಕೆ ಎಲ್ ರಾಹುಲ್ ಹಾಗೂ `ದಿ ಗ್ರೇಟ್ ವಾಲ್’ ರಾಹುಲ್ ದ್ರಾವಿಡ್ ತಮ್ಮ ಕ್ರಿಕೆಟ್ ಆಟವನ್ನ ಇದೇ ಕ್ಲಬ್ ಮೂಲಕ ಆರಂಭಿಸಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv