ದುಬಾರಿ ಕಾರಿನ ಒಡೆಯನಾದ ರಾಹುಲ್ ದ್ರಾವಿಡ್

Public TV
1 Min Read
rahul dravid

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಟೀಂ ಇಂಡಿಯಾದ ಅಂಡರ್ 19 ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ದುಬಾರಿ ಮರ್ಸಿಡೀಸ್ ಬೆಂಝ್ ಜಿಎಲ್‍ಇ ಕಾರನ್ನು ಖರೀದಿಸಿದ್ದಾರೆ.

ರಾಹುಲ್ ದ್ರಾವಿಡ್ ಅವರು ಕಪ್ಪು ಬಣ್ಣದ ಮರ್ಸಿಡೀಸ್ ಕಾರು ಖರೀದಿಸಿದ್ದು, ಈ ಕಾರಿನ ಮುಂದೆ ನಿಂತು ಪೋಸ್ ನೀಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ರಾಹುಲ್ ಅವರು ಕಾರಿನೊಳಗೆ ಕುಳಿತು ಕೇಕ್ ಕೂಡ ಕಟ್ ಮಾಡಿದ್ದಾರೆ.

rahul dravid 2

ಮರ್ಸಿಡೀಸ್ ಬೆಂಝ್ ಜಿಎಲ್‍ಇ ಬೇಸ್ ವೆರಿಯೆಂಟ್ 250ಡಿರ ಆರಂಭಿಕ ಬೆಲೆ 61.75 ಲಕ್ಷ ರೂ. ಆಗಿದ್ದು, ಟಾಪ್ ಎಂಡ್ 350ಜಿ ವೆರಿಯೆಂಟ್‍ಗೆ 77.82 ಲಕ್ಷ ರೂ. ಇದೆ. ಇದು ರಾಹುಲ್ ಅವರ ಮೊದಲ ಕಾರು ಅಲ್ಲ. ಈ ಮೊದಲು ಅವರು ಮ್ಯಾನ್ ಆಫ್ ದಿ ಮ್ಯಾಚ್ ಗೆದ್ದಾಗ ಹುಂಡೈ ಟಕ್ಸನ್ ಪ್ರಶಸ್ತಿಯನ್ನಾಗಿ ಪಡೆದಿದ್ದಾರೆ.

rahul dravid 1

ಇದಲ್ಲದೇ ರಾಹುಲ್ ಅವರ ಬಳಿ ಆಡಿ ಕೂ5, ಬಿಎಂಡಬ್ಲೂ 5 ಸೀರಿಸ್ ಕಾರುಗಳಿದ್ದು, ಈಗ ಅವರು ಮೊದಲ ಬಾರಿಗೆ ಮರ್ಸಿಡೀಸ್ ಬೆಂಝ್ ಕಾರಿಗೆ ಒಡೆಯರಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಮರ್ಸಿಡೀಸ್ ಬೆಂಝ್ ಜಿಎಲ್‍ಇ ಕಾರನ್ನು ಖರೀದಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *