ನವದೆಹಲಿ: ವಿಶ್ವ ಕ್ರಿಕೆಟ್ ಅಲ್ ಟೈಮ್ ಗ್ರೇಟ್ ಕ್ರಿಕೆಟರ್ ಎಂಬ ಹೆಗ್ಗಳಿಕೆ ಪಡೆದಿರುವ ರಾಹುಲ್ ದ್ರಾವಿಡ್ ಕ್ರಿಕೆಟ್ ಅಲ್ಲದೇ ಇತರೇ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದಾರೆ.
ಭಾರತದ ಗ್ರಾಮೀಣ ಯುವ ಸಮೂಹದಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸಹಾಯ ಮಾಡಲು ಗೋ ಸ್ಪೋರ್ಟ್ಸ್ ಮತ್ತು ದ್ರಾವಿಡ್ ಅಥ್ಲೀಟ್ ಮೆಂಟರ್ ಶಿಪ್ ಪ್ರೋಗ್ರಾಮ್ ಮೂಲಕ ಆರ್ಥಿಕ ಸಹಾಯ ನೀಡುತ್ತಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೆ ಇತರೆ ಕ್ರೀಡೆಗಳಿಗೂ ರಾಹುಲ್ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ.
Advertisement
Advertisement
ಹೆಪ್ಟಾಥ್ಲಾನ್‍ನಲ್ಲಿ ಚಿನ್ನದ ಪದಕ ಗೆದ್ದ ಸ್ವಪ್ನಾ ಬರ್ಮನ್ ಅವರ ಸಾಧನೆಯ ಹಿಂದೆಯೂ ರಾಹುಲ್ ಯೋಜನೆಯ ಆರ್ಥಿಕ ಸಹಾಯ ಮಾಡಿದ್ದು, 2017-18 ರಲ್ಲಿ 19 ಕ್ರೀಡಾಪಟುಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಏಷ್ಯನ್ ಗೇಮ್ಸ್‍ನ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತ ಮಹಿಳೆ ಎಂಬ ಐತಿಹಾಸಿಕ ದಾಖಲೆಯನ್ನು ಸ್ವಪ್ನಾ ಪಡೆದಿದ್ದು, ರಾಹುಲ್ ಅಥ್ಲೀಟ್ ಯೋಜನೆಯ ಕುರಿತು ಮಾಧ್ಯಮವೊಂದು ವರದಿ ಮಾಡಿದೆ.
Advertisement
ಕ್ರಿಕೆಟ್ ವೃತಿ ಜೀವನದಿಂದ ನಿವೃತ್ತಿ ಪಡೆದ ಬಳಿಕ ರಾಹುಲ್ ದ್ರಾವಿಡ್ ಅಂಡರ್ 19 ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ಟೀಂ ಇಂಡಿಯಾ `ಎ’ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಇವರ ಗರಡಿಯಲ್ಲಿ ಪಳಗಿದ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಸದ್ಯ ಇಂಗ್ಲೆಂಡ್ ಟೆಸ್ಟ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.
Advertisement
ಉಳಿದಂತೆ ಟೀಂ ಇಂಡಿಯಾ ಸಾಕಷ್ಟು ಯುವ ಆಟಗಾರರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯವನ್ನು ರಾಹುಲ್ ಮಾಡುತ್ತಿದ್ದು, ಹಲವು ಆಟಗಾರರು ಬಹಿರಂಗವಾಗಿ ರಾಹುಲ್‍ರ ವ್ಯಕ್ತಿತ್ವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2020ರ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿರುವ ಕ್ರೀಡಾಪಟುಗಳಿಗೂ ರಾಹುಲ್ ಮುಂದಾಳತ್ವದಲ್ಲಿ ನೆರವು ನೀಡಲಾಗುತ್ತಿದೆ. ಇದನ್ನು ಓದಿ: ಹೆಪ್ಟಾಥ್ಲಾನ್ ಚಿನ್ನದ ಹುಡುಗಿ ಸ್ವಪ್ನಾ ತಾಯಿಯ ಆನಂದಭಾಷ್ಪ ವಿಡಿಯೋ ವೈರಲ್
ಸದ್ಯ ಏಷ್ಯನ್ ಗೇಮ್ಸ್ ಹೆಪ್ಟಾಥ್ಲಾನ್‍ನಲ್ಲಿ ಚಿನ್ನದ ಪದಕ ಗೆದ್ದ ಸ್ವಪ್ನಾ ಬರ್ಮನ್ ಅವರಿಗೆ ಪಶ್ಚಿಮ ಬಂಗಾಳ ಸರ್ಕಾರ 10 ಲಕ್ಷ ರೂ. ಬಹುಮಾನ ಹಾಗೂ ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Family members of Swapna Barman celebrate at their residence in Jalpaiguri after she won gold medal in Women's Heptathlon at #AsianGames. Her mother says,"We're very happy. Me & Swapna's dad toiled hard to help her in her journey. Today all our dreams came true." #WestBengal pic.twitter.com/oXMvTwornT
— ANI (@ANI) August 29, 2018