ಬೆಂಗಳೂರು: ರಾಜಸ್ಥಾನ ರಾಯಲ್ಸ್ (Rajasthan Royals) ತಂಡಕ್ಕೆ ರಾಹುಲ್ ದ್ರಾವಿಡ್ (Rahul Dravid) ಮರಳಿದ್ದಾರೆ. ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದ ಸುದ್ದಿ ನಿಜವಾಗಿದ್ದು ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ (Head Coach) ಆಗಿ ದ್ರಾವಿಡ್ ನೇಮಕವಾಗಿದ್ದಾರೆ.
ರಾಹುಲ್ ದ್ರಾವಿಡ್ ಹಲವು ವರ್ಷಗಳ ಒಪ್ಪಂದಕ್ಕೆ ದ್ರಾವಿಡ್ ಸಹಿ ಹಾಕಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಆರ್ ಆರ್, ಭಾರತದ ದಂತಕಥೆ ವಿಶ್ವಕಪ್ ವಿಜೇತ ಕೋಚ್ ರಾಹುಲ್ ದ್ರಾವಿಡ್ ರಾಜಸ್ಥಾನ ರಾಯಲ್ಸ್‌ಗೆ ಮರಳಲು ಸಿದ್ಧರಾಗಿದ್ದಾರೆ ಎಂದು ಬರೆದುಕೊಂಡಿದೆ.
Advertisement
Rahul Dravid, India’s legendary World Cup-winning coach, is set for a sensational return to Rajasthan Royals! 🇮🇳🤝
The cricket icon was captured receiving his Pink jersey from the Royals Sports Group CEO Jake Lush McCrum. It is believed that the RR Admin was present too,… pic.twitter.com/C6Q8KRDFgW
— Rajasthan Royals (@rajasthanroyals) September 6, 2024
Advertisement
ಬೆಂಗಳೂರಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಸಿಇಒ ಜೇಕ್ ಲುಶ್ ಮೆಕ್‌ಕ್ರಂ ಅವರಿಂದ ದ್ರಾವಿಡ್ ಪಿಂಕ್ ಜೆರ್ಸಿ ಸ್ವೀಕರಿಸಿದ್ದಾರೆ.
Advertisement
ಆರ್‌ಆರ್ ತಂಡವನ್ನು ಸೇರಿದ ನಂತರ ಮಾತನಾಡಿದ ದ್ರಾವಿಡ್, ವಿಶ್ವಕಪ್ ಬಳಿಕ ಮತ್ತೊಂದು ಸವಾಲು ಸ್ವೀಕರಿಸಲು ಇದು ಸರಿಯಾದ ಸಮಯ ಎಂದು ನನಗೆ ಅನಿಸುತ್ತದೆ. ಈ ಸವಾಲು ಸ್ವೀಕಾರಕ್ಕೆ ರಾಜಸ್ಥಾನ ರಾಯಲ್ಸ್ ಸೂಕ್ತ ತಂಡ ಎಂದು ಹೇಳಿದ್ದಾರೆ.
Advertisement
ಟೀಂ ಇಂಡಿಯಾ (Team India) ವಿಶ್ವಕಪ್ ಗೆಲ್ಲುವುದರೊಂದಿಗೆ ದ್ರಾವಿಡ್ ಅವರ ಕೋಚ್ ಅವಧಿಯೂ ಅಂತ್ಯವಾಗಿತ್ತು. ಸದ್ಯ ದ್ರಾವಿಡ್ ಕಿರು ವಿರಾಮದಲ್ಲಿದ್ದು ಹಲವು ಐಪಿಎಲ್ (IPL) ತಂಡಗಳು ದ್ರಾವಿಡ್ ಅವರನ್ನು ಸಂಪರ್ಕಿಸಿದ್ದವು.
aaj khush toh bohot hoge tum? 💗 pic.twitter.com/vp5uRbm91n
— Rajasthan Royals (@rajasthanroyals) September 6, 2024
ದ್ರಾವಿಡ್ 2011 ಮತ್ತು 2013ರ ಅವಧಿಯಲ್ಲಿ ರಾಯಲ್ಸ್ ಪರ ಆಡಿದ್ದ ದ್ರಾವಿಡ್ 2014ರಲ್ಲಿ ತಂಡದ ಮೆಂಟರ್ ಆಗಿ ಆಯ್ಕೆ ಆಗಿದ್ದರು. ನಂತರ ಭಾರತ A ಮತ್ತು U-19 ತಂಡಗಳಿಗೆ ತರಬೇತುದಾರರಾಗಿ ದ್ರಾವಿಡ್ ಆಯ್ಕೆಯಾಗಿದ್ದರು. ರವಿಶಾಸ್ತ್ರಿ ಅವಧಿ ಅಂತ್ಯವಾದ ನಂತರ 2021ರಲ್ಲಿ ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದರು.
ಶೇನ್ ವಾರ್ನ್ ನೇತೃತ್ವದಲ್ಲಿ 2008ರ ಟೂರ್ನಿಮೆಂಟ್‌ನ ಉದ್ಘಾಟನಾ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿದ ನಂತರ ರಾಜಸ್ಥಾನ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. 2022 ರಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ತಂಡ ಫೈನಲ್ ಪ್ರವೇಶಿಸಿತ್ತು. ಆದರೆ ಗುಜರಾತ್ ವಿರುದ್ಧ ಸೋತು ರನ್ನರ್ ಅಪ್ ಸ್ಥಾನ ಪಡೆದುಕೊಂಡಿತ್ತು.