ಮುಂಬೈ : ಭಾರತದ ಹಿರಿಯರ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗೆ ಮಾಜಿ ನಾಯಕ ರಾಹುಲ್ ದ್ರಾವಿಡ್ ನಿನ್ನೆ ಅರ್ಜಿ ಸಲ್ಲಿಸಿದ್ದಾರೆ.
ರವಿ ಶಾಸ್ತ್ರಿ ಬಳಿಕ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆ ದಿನವಾದ ನಿನ್ನೆ ದ್ರಾವಿಡ್ ಅರ್ಜಿ ಸಲ್ಲಿಸಿದ್ದಾರೆ.
Advertisement
Advertisement
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‍ಸಿಎ) ನಿರ್ದೇಶಕರಾಗಿರುವ ದ್ರಾವಿಡ್ ಆ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ದ್ರಾವಿಡ್ ಕೋಚ್ ಹುದ್ದೆಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗಿದ್ದರೂ, ದಿನಗಳ ಹಿಂದಷ್ಟೇ ದ್ರಾವಿಡ್ ಇದಕ್ಕೆ ಇನ್ನೂ ಒಪ್ಪಿಕೊಂಡಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಚ್ಚರಿಯ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ
Advertisement
ಪ್ರಧಾನ ಕೋಚ್ ಹುದ್ದೆಯ ಆಯ್ಕೆಯ ಬಗ್ಗೆ ಗೊಂದಲ ಸೇಷ್ಟಿಯಾಗಿತ್ತು. ನಿನ್ನೆ ಕೋಚ್ ಹುದ್ದೆಗೆ ಅಧಿಕೃತವಾಗಿ ಅರ್ಜಿ ಸಲ್ಲಿಸುವ ಮೂಲಕ ರಾಹುಲ್ ದ್ರಾವಿಡ್ ಗೊಂದಗಳಿಗೆ ತೆರೆ ಎಳೆದಿದ್ದಾರೆ.
Advertisement
ಭಾರತದ ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರಾ, ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ದೇಸೀ ಕ್ರಿಕೆಟ್ ತಂಡಗಳಿಗೆ ಕೋಚ್ ಆಗಿ ಸೇವೆಸಲ್ಲಿಸಿರುವ 39 ವರ್ಷದ ಅಜಯ್, ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾರ್ಯನಿರ್ವಹಿಸಿದ್ದರು. ಭಾರತ ಮಹಿಳಾ ತಂಡದಲ್ಲೂ ರಾತ್ರಾ ಕೆಲಸ ಮಾಡಿದ್ದರು. ಅಜಯ್ ರಾತ್ರಾ ಹಾಗೂ ಅಭಯ್ ಶರ್ಮಾ ನಡುವೆ ಫೀಲ್ಡಿಂಗ್ ಕೋಚ್ ಹುದ್ದೆಗೆ ಪೈಪೋಟಿ ಏರ್ಪಡಲಿದೆ. ಇದನ್ನೂ ಓದಿ: ಚಿನ್ನದ ಮೊಟ್ಟೆ ಇಟ್ಟ ಐಪಿಎಲ್ – 2008ರಲ್ಲಿ ಬಿಡ್ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?
ಎನ್‍ಸಿಎಗೆ ಲಕ್ಷ್ಮಣ್ ಹೊಸ ನಿದೇಶಕ:
ದ್ರಾವಿಡ್ ರಾಜೀನಾಮೆ ನೀಡಿದರೆ ತೆರವಾಗಲಿರುವ ಎನ್‍ಸಿಎ ನಿರ್ದೇಶಕ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ನೇಮಕವಾಗುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಲಕ್ಷ್ಮಣ್ ಎನ್‍ಸಿಎ ನಿರ್ದೇಶಕ ಹುದ್ದೆಯನ್ನು ನಿರ್ವಹಿಸಲಿ ಆಸಕ್ತಿ ಹೊದಿಲ್ಲ, ಬಿಸಿಸಿಐ ಪ್ರಸ್ತಾಪವನ್ನು ಅವರು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿತ್ತು. ಲಕ್ಷ್ಮಣ್ ನಿರ್ದೇಶಕ ಹುದ್ದೆ ಅಲಂಕರಿಸಿದರೆ ಅವರು ಐಪಿಎಲ್‍ನಲ್ಲಿ ಮೆಂಟರ್, ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬೇಕಿದೆ. ಜೊತೆಗೆ ಮಾಧ್ಯಮಗಳಲ್ಲಿ ಲೇಖನ ಬರೆಯುವುದಕ್ಕೂ ಅವಕಾಶವಿರುವುದಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅವ ವೇತನ ನಿಗದಿಯಾಗಲಿದೆ.