– ಸರ್ಕಾರದ ಸೂಚನೆ ಮೇರೆಗೆ ಟ್ವಿಟ್ಟರ್‌ನಿಂದ ಕ್ರಮ
– ಕಳೆದ ಅಗಸ್ಟ್‌ನಿಂದ ಫಾಲೋವರ್ಸ್ ಸಂಖ್ಯೆ ಭಾರೀ ಇಳಿಕೆ
ನವದೆಹಲಿ: ನನ್ನ ವಾಕ್ ಸ್ವಾಂತಂತ್ರ್ಯವನ್ನು ಹತ್ತಿಕ್ಕಲು ಸರ್ಕಾರದ ಒತ್ತಡದ ಮೇರೆಗೆ ಹಿಂಬಾಲಕರ ಸಂಖ್ಯೆ ಮೇಲೂ ಟ್ವಿಟ್ಟರ್ ನಿರ್ಬಂಧ ಹೇರಿದೆ ಎಂದು ಆರೋಪಿಸಿ ಟ್ವಿಟ್ಟರ್ ಸಿಇಒ ಪರಾಗ್ ಅಗರ್‍ವಾಲ್‍ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಡಿಸೆಂಬರ್ 27 ರಿಂದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರೊಂದಿಗಿನ ತಮ್ಮ ಟ್ವಿಟ್ಟರ್ ಖಾತೆಯ ಡೇಟಾದ ವಿಶ್ಲೇಷಣೆಯನ್ನು ಹೋಲಿಕೆ ಮಾಡಿ ಪತ್ರದಲ್ಲಿ ದೂರು ನೀಡಿದ್ದಾರೆ.
Advertisement
Advertisement
ಪತ್ರದಲ್ಲಿ ಏನಿದೆ?
ನಾನು ಹತ್ತಿರ ಹತ್ತಿರ 2 ಕೋಟಿ ಹಿಂಬಾಲಕರನ್ನು ಹೊಂದಿದ್ದೇನೆ. ಆದರೆ ಹಿಂಬಾಲಕರ ಸಂಖ್ಯೆಯನ್ನು ಇದ್ದಕ್ಕಿದ್ದಂತೆ ನಿಬರ್ಂಧಿಸಲಾಗಿದೆ. ನನ್ನ ಟ್ವಿಟ್ಟರ್ ಖಾತೆಯು ಸಕ್ರಿಯವಾಗಿದೆ. ಪ್ರತಿದಿನ ಸುಮಾರು ಎಂಟರಿಂದ ಹತ್ತು ಸಾವಿರದವರೆಗೆ ಹೊಸ ಹಿಂಬಾಲಕರು ಸೇರ್ಪಡೆಗೊಳ್ಳುತ್ತಿದ್ದರು. ಕಳೆದ ಜುಲೈವರೆಗೆ ಈ ರೀತಿಯೇ ಇತ್ತು. ಆದರೆ ಅಗಸ್ಟ್‌ನಿಂದ ಸಂಖ್ಯೆ ಕಡಿಮೆಯಾಗುತ್ತಿದೆ.
Advertisement
ಕಳೆದ ಅಗಸ್ಟ್ ತಿಂಗಳಿನಲ್ಲಿ ದೆಹಲಿಯ ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಪರ ಧ್ವನಿ ಎತ್ತಿದ್ದೆ. ರೈತರೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದೇನೆ ಮತ್ತು ಹಲವು ಮಾನವ ಹಕ್ಕುಗಳ ವಿಷಯಗಳಲ್ಲಿ ಸರ್ಕಾರದ ವಿರುದ್ಧ ಹೋರಾಡಿದ್ದೆ. ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ರೈತರು ಮಾಡುತ್ತಿದ್ದ ಪ್ರತಿಭಟನೆಯ ಪರ ನಾನು ಮಾಡಿದ್ದ ವೀಡಿಯೋ ಅತಿ ಹೆಚ್ಚು ವಿಕ್ಷಣೆಯಾಗಿತ್ತು.
Advertisement
ಕಳೆದ ವರ್ಷ ಅಗಸ್ಟ್‌ನಲ್ಲಿ ಎಂಟು ದಿನಗಳ ಕಾಲ ಖಾತೆ ಅಮಾನತುಗೊಳಿಸಿದ ನಂತರ ಹಲವಾರು ತಿಂಗಳುಗಳವರೆಗೆ ಸ್ಥಗಿತಗೊಂಡಿತ್ತು. ಆ ನಂತರದಲ್ಲಿ ಟ್ವಿಟ್ಟರ್‌ನಲ್ಲಿ ಹೊಸ ಅನುಯಾಯಿಗಳನ್ನು ಪಡೆಯುವುದನ್ನು ನಿರ್ಬಂಧಿಸಿದೆ. ಆದರೆ ಅದೇ ಅವಧಿಯಲ್ಲಿ, ಇತರ ರಾಜಕಾರಣಿಗಳು ತಮ್ಮ ಹೊಸ ಅನುಯಾಯಿಗಳ ಸಂಖ್ಯೆಯನ್ನು ಪಡೆಯುತ್ತಿದ್ದಾರೆ. ಅಗಸ್ಟ್‌ನಿಂದ ತಮ್ಮ ಟ್ವಿಟ್ಟರ್ ಖಾತೆಯನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಅವರು ಸಿದ್ದರಾಮಯ್ಯರ ಬಗ್ಗೆ ಮಾತನಾಡಬಾರದು: ಶಿವರಾಮೇಗೌಡ
ನನ್ನ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಸರ್ಕಾರದಿಂದ ಒತ್ತಡವಿದೆ. ಯಾವುದೇ ಕಾನೂನುಬದ್ಧ ಕಾರಣವಿಲ್ಲದೆ ನನ್ನ ಖಾತೆಯನ್ನು ಕೆಲವು ದಿನಗಳವರೆಗೆ ನಿರ್ಬಂಧಿಸಲಾಗಿದೆ. ಇನ್ನೂ ಅನೇಕ ಟ್ವಿಟರ್ ಖಾತೆಗಳಿವೆ. ಅವು ಕಾನೂನಿನ ವಿರುದ್ಧ ಯಾವುದೇ ಫೋಟೋವನ್ನು ಪೋಸ್ಟ್ ಮಾಡಿದರೂ ಆ ಖಾತೆಗಳನ್ನು ನಿರ್ಬಂಧಿಸಲಾಗಿಲ್ಲ. ನನ್ನ ಖಾತೆಯ ಮೇಲೆ ಕ್ರಮ ಯಾಕೆ ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣೆ: ನವಜೋತ್ ಸಿಂಗ್ ಸಿಧು ವಿರುದ್ಧ ಬಿಕ್ರಮ್ ಸಿಂಗ್ ಕಣಕ್ಕೆ