ರಹೀಂ ಶವ ಮೆರವಣಿಗೆ| ಶೋರೂಂ ಮೇಲೆ ಕಲ್ಲು – ಬಲವಂತವಾಗಿ ಬಂದ್‌ ಮಾಡಿಸಿದ ಕಿಡಿಗೇಡಿಗಳು

Public TV
1 Min Read
Abdul Rahims funeral procession stones thrown at showroom bc road kaikamba

– ಸುರತ್ಕಲ್‌ನಲ್ಲಿ ಬಸ್ಸು ಮೇಲೆ ಕಲ್ಲು

ಮಂಗಳೂರು: ಬಂಟ್ವಾಳದಲ್ಲಿ ಹತ್ಯೆಯಾದ ಅಬ್ದುಲ್ ರಹೀಂ (Abdul Rahim) ಶವ ಮೆರವಣಿಗೆ ವೇಳೆ ಬಲವಂತವಾಗಿ ಬೈಕ್‌ ಶೋರೂಂ (Bike Showroom) ಬಂದ್‌ ಮಾಡಿದ ಘಟನೆ ಕೈಕಂಬದಲ್ಲಿ ನಡೆದಿದೆ.

ಎಂದಿನಂತೆ ರಸ್ತೆ ಬದಿ ಇರುವ ಶೋರೂಂ ತೆರೆಯಲಾಗಿತ್ತು. ಶವ ಮೆರವಣಿಗೆಯ ಸಂದರ್ಭದಲ್ಲಿ ಶೋರೂಂ ತೆರೆದಿರುವುನ್ನು ನೋಡಿ ಕೆಲ ಮುಸ್ಲಿಮ್‌ ಯುವಕರು(Muslim Youth) ಬಂದ್‌ ಮಾಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಹೀಂ ಹತ್ಯೆ| ಸಾಮೂಹಿಕ ರಾಜೀನಾಮೆ ನೀಡಿ: ಕಾಂಗ್ರೆಸ್‌ ವಿರುದ್ಧ ಮುಸ್ಲಿಮರ ಆಕ್ರೋಶ

ಈ ವೇಳೆ ಬಂದ್ ಮಾಡಲು ಶೋರೂಂ ಸಿಬ್ಬಂದಿ ಒಪ್ಪಿಗೆ ನೀಡಿರಲಿಲ್ಲ. ಈ ವೇಳೆ ಅಲ್ಲಿಗೆ ಇಬ್ಬರು ಪೊಲೀಸರು ಬಂದಿದ್ದಾರೆ. ಪೊಲೀಸರು ಸ್ಥಳದಲ್ಲಿ ಇದ್ದರೂ ಕ್ಯಾರೇ ಎನ್ನದೇ ಅವರ ಜೊತೆಗೂ ಗಲಾಟೆ ಮಾಡಿದ್ದಾರೆ. ನಂತರ ಸಿಟ್ಟಾದ ಯುವಕರು ಶೋ ರೂಂನ ಮುಂದೆ ಅಳವಡಿಸಿದ್ದ ಗಾಜಿನ ಮೇಲೆ ಕಲ್ಲು ಎಸೆದು ದಾಂಧಲೆ ಮಾಡಿದ್ದಾರೆ. ಬಳಿಕ ಒತ್ತಾಯ ಪೂರ್ವಕವಾಗಿ ಶಟರ್ ಹಾಕಿಸಿದ್ದಾರೆ. ಕಿಡಿಗೇಡಿಗಳು ಶೋರೂಂ ಮುಂದೆ ಗಲಾಟೆ ಮಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಸ್ಸಿಗೆ ಕಲ್ಲು:
ಮಂಗಳೂರಿನಲ್ಲಿ ಕೆಲವು ಸಿಟಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ. ಸುರತ್ಕಲ್ ಮಂಗಳೂರು ಸುರತ್ಕಲ್‌, ಮುಕ್ಕ ಹಳೆಯಂಗಡಿ, ಕಿನ್ನಿಗೋಳಿ ಮಾರ್ಗವಾಗಿ ಕಟೀಲಿಗೆ ಸಂಚರಿಸುವ ನಂದಿನಿ ಬಸ್‌ಗೆ ಸುರತ್ಕಲ್‌ನಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಆ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಬೇರೆ ಬಸ್‌ನಲ್ಲಿ ತೆರಳಿದ್ದಾರೆ.

 

Share This Article