ಬೆಂಗಳೂರು: ಕಸ ಆಯುವ ಮಹಿಳೆಯೊಬ್ಬರು ತನ್ನ ಧ್ವನಿ ಹಾಗೂ ಪರ್ಫೆಕ್ಟ್ ಇಂಗ್ಲಿಷ್ ಮಾತನಾಡುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಬೆಂಗಳೂರಿನ ಸದಾಶಿವನಗರದಲ್ಲಿ ಪೇಪರ್ ಆಯುವ ಸಿಸಿಲಿಯಾ ಮಾರ್ಗರೆಟ್ ಲಾರೆನ್ಸ್ ಇಂಗ್ಲಿಷ್ ಮಾತನಾಡುವ ವೀಡಿಯೋವನ್ನು ಶಚಿನಾ ಹೆಗ್ಗರ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಮಹಿಳೆ ಬಹಳ ಸಲಿಸಾಗಿ ಇಂಗ್ಲಿಷ್ ಮಾತನಾಡಿದ್ದು, ಜಪಾನಿನಲ್ಲಿ 7 ವರ್ಷಗಳ ಕಾಲ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಕಾಂಗ್ರೆಸ್‍ನವರಿಗೆ ಬಾರ್ ಗೊತ್ತಿಲ್ವಾ? ಯಾರೂ ಹೋಗೋದೇ ಇಲ್ವಾ- ಬಿಸಿ ಪಾಟೀಲ್ ಪ್ರಶ್ನೆ
Advertisement
View this post on Instagram
Advertisement
ವೀಡಿಯೋ ಜೊತೆಗೆ ಶಚಿನಾ ಹೆಗ್ಗರ್ ನಿಮ್ಮ ಸುತ್ತಲು ಅನೇಕ ಕಥೆಗಳಿರುತ್ತದೆ. ನೀವು ಮಾಡಬೇಕಾಗಿರುವುದನ್ನು ನಿಲ್ಲಿಸಿ ಸುತ್ತಲೂ ನೋಡಿ. ಕೆಲವು ಸುಂದರ ಮತ್ತೆ ಕೆಲವು ನೋವಿನದು. ಆದರೆ ಕೆಲವು ಹೂಗಳಿಲ್ಲದೇ ಇರುವ ಜೀವನ ಯಾವುದು? ಈ ಅದ್ಭುತ ಚೈತನ್ಯವನ್ನು ಹೊಂದಿರುವ ಮಹಿಳೆಯನ್ನು ಸಂಪರ್ಕಿಸಲು ಬಯಸುತ್ತೀರಾ. ನಿಮ್ಮಲ್ಲಿ ಯಾರಾದರೂ ಆಕೆಯನ್ನು ನೋಡಿದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
Advertisement
View this post on Instagram
ಸದ್ಯ ಈ ವೀಡಿಯೋ ನೋಡಿದ ನೆಟ್ಟಿಗರು ಮಹಿಳೆಯ ಜೀವನೋತ್ಸಹ ನೋಡಿ ಅಚ್ಚರಿಗೊಂಡಿದ್ದಾರೆ. ಅಲ್ಲದೇ ಅನೇಕರು ಸಿಸಿಲಿಯಾ ಭಾನುವಾರ ಹೋಲಿ ಘೋಸ್ಟ್ ಚರ್ಚ್‍ನಲ್ಲಿ ಯಾವಾಗಲೂ ಇರುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಕೊರೊನಾಗೆ ಹೆದರಿ ದಂಪತಿ ಆತ್ಮಹತ್ಯೆ ಪ್ರಕರಣ- ಇಬ್ಬರ ಕೋವಿಡ್ ವರದಿ ನೆಗೆಟಿವ್
View this post on Instagram