ಪ್ರತಿ ವರ್ಷದಂತೆ ಈ ವರ್ಷವೂ ನಟಿ ರಾಗಿಣಿ ದ್ವಿವೇದಿ ದಸರಾ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ವಿಡಿಯೋಗಳನ್ನು ಇದೀತ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪಂಜಾಬ್ ಮೂಲದವರಾದ ಅವರ ಕುಟುಂಬದ ಸಂಪ್ರದಾಯದ ಪ್ರಕಾರ ನವರಾತ್ರಿ ಹಬ್ಬದಲ್ಲಿ ಕನ್ಯೆಯರ ಪೂಜೆ ವಿಶೇಷ. ಹೀಗಾಗಿ ಪ್ರತಿ ವರ್ಷ ಮನೆಗೆ ಬಡ ಕುಟುಂಬದ ಹೆಣ್ಣುಮಕ್ಕಳನ್ನ ಕರೆದು ಹೂ ಮುಡಿಸಿ, ಬಳೆ ತೊಡಿಸಿ, ಊಟ ತಿಂಡಿ ಕೊಟ್ಟು ಗಿಫ್ಟ್ ಕೊಟ್ಟು ಕಳಿಸುತ್ತಾರೆ. ಈ ಪದ್ಧತಿಯನ್ನ ಕಣಜಕ್ ಪೂಜೆ ಎಂದು ಕರೆಯಲಾಗುತ್ತೆ. ಇದನ್ನೂ ಓದಿ: BBK 12| ಬಂದ ದಿನವೇ ಔಟಾಗಿದ್ದ ರಕ್ಷಿತಾ ಶೆಟ್ಟಿ ವಾಪಸ್ – ಕಿಚ್ಚಿನೊಂದಿಗೆ ರೀ ಎಂಟ್ರಿ ಕೊಟ್ಟ ಕರಾವಳಿ ಬೆಡಗಿ
ನವರಾತ್ರಿ ಉಪವಾಸದ 9ನೇ ದಿನ 9 ಕನ್ಯೆಯರು ಹಾಗೂ 9 ಮುತೈದೆಯರಿಗೆ ಬಳೆ ಕೊಟ್ಟು ಉಡುಗೊರೆ ನೀಡಿ ಊಟ ಬಡಿಸಿ ಅವರು ಊಟ ಮಾಡಿದ ಬಳಿಕವೇ ಉಪವಾಸ ತೊರೆಯುವ ಪದ್ಧತಿ ಇರುತ್ತೆ. ಹೀಗಾಗಿ ಕುಟುಂಬದ ಸಂಪ್ರದಾಯಂತೆ ಈ ಬಾರಿಯೂ ರಾಗಿಣಿ ತಮ್ಮ ನಿವಾಸದಲ್ಲಿ 9 ಬಡ ಕುಟುಂಬದ ಹೆಣ್ಣುಮಕ್ಕಳನ್ನ ಕರೆದು ಕಣಜಕ್ ಪೂಜಾ ಕಾರ್ಯ ಪೂರೈಸಿದ್ದಾರೆ. ಇದನ್ನೂ ಓದಿ: ‘ಕಾಂತಾರ’ಗೆ ಟಿಕೆಟ್ ಸಿಗದ ಕಾರ್ಯಕರ್ತರಿಗೆ ಸೋಮವಾರ ವ್ಯವಸ್ಥೆ ಮಾಡುತ್ತೇನೆ: ಪ್ರತಾಪ್ ಸಿಂಹ