ಮಾಲಿವುಡ್‌ನಲ್ಲಿ (Mollywood) ಹೇಮಾ ಸಮಿತಿ ವರದಿ ದೊಡ್ಡ ಸಂಚಲನವನ್ನೇ ಮೂಡಿಸಿದೆ. ಚಿತ್ರರಂಗದಲ್ಲಿ ತಮಗಾದ ಕೆಟ್ಟ ಅನುಭವಗಳ ಬಗ್ಗೆ ನಟಿಯರು ಮಾತನಾಡುತ್ತಿದ್ದಾರೆ. ಇದರ ನಡುವೆ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ (Sunny Leone) ಕಾಸ್ಟಿಂಗ್ ಕೌಚ್ (Casting Couch) ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಒಂದು ಅವಕಾಶ ಕಳೆದು ಹೋದರೆ, ನೂರಾರು ಅವಕಾಶಗಳು ಬರುತ್ತವೆ ಎಂದು ನಟಿ ಮಾತನಾಡಿದ್ದಾರೆ.
ಇತ್ತೀಚೆಗೆ ಸಿನಿಮಾ ಪ್ರಚಾರವೊಂದರಲ್ಲಿ ಭಾಗಿಯಾಗಿದ್ದ ವೇಳೆ, ಹೇಮಾ ಸಮಿತಿಯ ವರದಿಗೆ ಸನ್ನಿ ಲಿಯೋನ್ ರಿಯಾಕ್ಟ್ ಮಾಡಿದರು. ಸಿನಿಮಾದಲ್ಲಿ ನಟಿಸುವಾಗ ನನಗೆ ಯಾವುದೇ ಕೆಟ್ಟ ಅನುಭವ ಆಗಿಲ್ಲ. ಯಾರಾದರೂ ಅನುಚಿತವಾಗಿ ವರ್ತಿಸಿದರೆ ನೋ ಎಂದು ಹೇಳಿ ಹೊರಟು ಹೋಗುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ಸೆ.10ರಂದು ರಿಲೀಸ್ ಆಗಲಿದೆ ಜ್ಯೂ.ಎನ್‌ಟಿಆರ್ ನಟನೆಯ ‘ದೇವರ’ ಚಿತ್ರದ ಟ್ರೈಲರ್
ವೃತ್ತಿರಂಗದಲ್ಲಿ ಹಂಚಿಕೊಳ್ಳಲು ನನಗೆ ಯಾವುದೇ ಕಹಿ ಅನುಭವಗಳಾಗಿಲ್ಲ. ನಾನು ವ್ಯಕ್ತಿತ್ವ ಮತ್ತು ವೃತ್ತಿಪರತೆಯನ್ನು ನಂಬುತ್ತೇನೆ. ನಾನು ಅರ್ಹಳು ಎಂದು ಅನಿಸಿದರೆ ಹೆಚ್ಚಿನ ಸಂಭಾವನೆಗೆ ಡಿಮ್ಯಾಂಡ್ ಮಾಡುತ್ತೇನೆ. ಅವಕಾಶಕ್ಕಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ನನ್ನ ಮುಂದೆ ಅನೇಕ ಬಾಗಿಲುಗಳು ಮುಚ್ಚಲ್ಪಟ್ಟಿವೆ. ಆದರೆ ಅದರಿಂದ ನನಗೆ ತೊಂದರೆಯಾಗಿಲ್ಲ. ಒಂದು ಅವಕಾಶ ಕಳೆದುಹೋದರೆ, ನಮ್ಮ ದಾರಿಯಲ್ಲಿ ನೂರು ಅವಕಾಶಗಳು ಬರುತ್ತವೆ ಎಂದು ನಟಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.