ಕೆಂಪೇಗೌಡ, ವೀರ ಮದಕರಿ (Veeramadakari) ಅಂತಹ ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ರಾಗಿಣಿ 15 ವರ್ಷಗಳಲ್ಲಿ 40 ಸಿನಿಮಾಗಳನ್ನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದೀಗ ರಾಗಿಣಿ (Ragini Dwivedi) ಬದುಕಿನ ಕರಾಳ ದಿನಗಳ ಕಥೆಯನ್ನ ಪುಸ್ತಕದ (Book) ಮೂಲಕ ಬಿಚ್ಚಿಡಲು ಸಜ್ಜಾಗಿದ್ದಾರೆ. ಜೈಲಿನಲ್ಲಿ 90 ದಿನ ಏನಾಯ್ತು ಎಂಬುದನ್ನ ಹೇಳಲಿದ್ದಾರೆ.
Advertisement
ತುಪ್ಪದ ಬೆಡಗಿ ರಾಗಿಣಿ ನಟಿಸಿದ 40 ಸಿನಿಮಾಗಳು ಒಂದು ತೂಕವಾದ್ರೆ, 90 ದಿನಗಳು ಜೈಲಿನಲ್ಲಿ ರಾಗಿಣಿ ಕಳೆದಿದ್ದು, ಒಂದು ಕರಾಳ ನೆನಪು. ಆ 90 ದಿನಗಳು ಹೇಗಿತ್ತು.? ಅವರ ಭಾವನೆ, ಸಂಕಷ್ಟ ಎದುರಿದ ದಿನಗಳ ಬಗ್ಗೆ ನಟಿ ಹೇಳಲಿದ್ದಾರೆ. ಸದ್ಯ ನೆಗೆಟಿವ್ ಎನರ್ಜಿ, ಮಹಿಳೆಯರು ಯಾಕೆ ಮತ್ತೊಬ್ಬ ಮಹಿಳೆಯನ್ನ ಬೆಂಬಲಿಸೋದಿಲ್ಲ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ರಾಗಿಣಿ ಮಾತನಾಡಿದ್ದಾರೆ. ಇದನ್ನೂ ಓದಿ:ನಾಳೆ ಸುದೀಪ್ ಎಲ್ಲೆಲ್ಲಿ ಸಿಗ್ತಾರೆ? ಪ್ರಚಾರದ ರೂಟ್ ಮ್ಯಾಪ್ ರಿಲೀಸ್
Advertisement
Advertisement
ಹೇಳಿಕೊಳ್ಳುವುದಕ್ಕೆ ಬೇಸರವಾಗುತ್ತದೆ ಆದರೆ ಎಲ್ಲೆಡೆ ನೆಗೆಟಿವ್ ಎನರ್ಜಿ ತುಂಬಾನೇ ಇದೆ. ನಾನು ಸೋಲೋ ಸಿನಿಮಾ ಮಾಡಲು ಆರಂಭಿಸಿದಾಗ ಅನೇಕ ನಟರಿಗೆ ಅಭದ್ರ ಫೀಲ್ ಆಯ್ತು. ಸ್ವಲ್ಪನೂ ಸಪೋರ್ಟ್ ಮಾಡುತ್ತಿರಲಿಲ್ಲ. ನನ್ನ ನಿರ್ಮಾಪಕರಿಗೆ ಕರೆ ಮಾಡಿದ ಅನೇಕರು ಪ್ರಶ್ನೆ ಮಾಡಿದ್ದಾರೆ ಯಾಕೆ ನೀವು ಮಹಿಳಾ ಪ್ರಧಾನ ಸಿನಿಮಾ ಮಾಡುತ್ತಿರುವುದು ಈ ನಾಯಕಿಯನ್ನು ಹೀರೋ ಆಗಿ ತೋರಿಸುತ್ತಿರುವುದು ಎಂದು. ಅವರ ಮಾತುಗಳನ್ನು ಕೇಳಿ ಮತ್ತಷ್ಟು ಬೆಳೆಯಬೇಕು ಅನಿಸುತ್ತದೆ. ನನ್ನ ಜರ್ನಿ ಬಗ್ಗೆ ಇವತ್ತು ಪ್ರಶ್ನೆ ಮಾಡಿದರೆ ಅದರ ಹಿಂದಿರುವ ಸೀಕ್ರೆಟ್ ಏನೆಂದು ಕೇಳುತ್ತಾರೆ. ಪಾಸಿಟಿವ್ ಆಗಿರಬೇಕು ಮತ್ತು ಧೈರ್ಯವಾಗಿರಬೇಕು. ಜನರು ನಮ್ಮನ್ನು ಕೆಳಗೆ ಹಾಕಲು ಕಾಯುತ್ತಾರೆ. ಮತ್ತೊಬ್ಬರನ್ನು ಕೆಳಗೆ ಹಾಕುವುದೇ ಕೆಲವರ ಕೆಲಸ. ಈ ರೀತಿ ನೆಗೆಟಿವಿಟಿ ನನಗೆ ಅರ್ಥ ಆಗುವುದಿಲ್ಲ. ಆದರೆ ಎಂದೂ ಒಬ್ಬರಿಗೆ ಕೆಟ್ಟದನ್ನು ಬಯಸಿಲ್ಲ. ದಿನದಲ್ಲಿ 24 ಗಂಟೆ ಮಾತ್ರ ಇರುವುದು ಯಾಕೆ ನೆಗೆಟಿವ್ ಯೋಚನೆ ಮಾಡಿ ವೇಸ್ಟ್ ಮಾಡಬೇಕು.
Advertisement
ನಾನು ತುಂಬಾ ಸೆನ್ಸಿಟಿವ್ ವ್ಯಕ್ತಿ. ನಾನು ಅನುಭವಿಸಿರುವ ಕ್ಷಣಗಳಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಕೆಲವೊಮ್ಮೆ ಕೆಲಸ ಬಿಟ್ಟು ಬಿಡೋಣ ಅನಿಸಿದೆ. ಒಬ್ಬಳೆ ಜೋರಾಗಿ ಅತ್ತಿರುವೆ. ವೈದ್ಯರನ್ನು ಸಂಪರ್ಕಿಸಿರುವೆ. ನನ್ನನ್ನು ನಾನು ಹೀಲಿಂಗ್ ಮಾಡಿಕೊಂಡು ಗುರುಗಳನ್ನು ಭೇಟಿ ಮಾಡಿರುವೆ. ಈ ರೀತಿ ಸಮಯ ಎದುರಾದರೆ ನಾವು ನಮ್ಮ ಜನರ ಜೊತೆ ಮಾತನಾಡಬೇಕು.ಕುಟುಂಬದ ಸಹಾಯ ಮತ್ತು ಶಕ್ತಿಯಿಂದ ನಾನು ಚೇತರಿಸಿಕೊಂಡಿರುವೆ ಎಂದು ರಾಗಿಣಿ ಹೇಳಿದ್ದಾರೆ.
ಸಾಮಾನ್ಯವಾಗಿ ಮಹಿಳೆಯರು ಅವರನ್ನು ಅವರೇ ಕಡೆಗಣಿಸಿಕೊಳ್ಳುತ್ತಾರೆ. ನಮಗೆ ನಾವು ಹೆಚ್ಚಿನ ಪ್ರಮುಖ್ಯತೆ ನೀಡುವ ಬದಲು ಮತ್ತೊಬ್ಬರಿಗೆ ಪ್ರಮುಖ್ಯತೆ ನೀಡುತ್ತೇವೆ. ನಮ್ಮನ್ನು ನಾನು ಮೊದಲು ಪ್ರೀತಿಸಬೇಕು ನಮ್ಮನ್ನು ನಾವು ಕೇರ್ ಮಾಡಬೇಕು. ಮಹಿಳೆಯರು ಮತ್ತೊಮ್ಮೆ ಮಹಿಳೆ ಪರವಾಗಿ ನಿಲ್ಲಬೇಕು. ಒಬ್ಬ ನಾಯಕನ ಪರವಾಗಿ ಇನ್ನಿತರ ನಾಯಕರು ನಿಲ್ಲುವುದನ್ನು ನೋಡಬಹುದು. ಆದರೆ ನಾಯಕಿಯರು ಹಾಗೆ ಮಾಡುವುದನ್ನು ನಾನು ನೋಡಿಲ್ಲ. ಒಂದು ಸಲ ಒಬ್ಬರ ಪರವಾಗಿ ನಿಂತುಕೊಂಡರೆ ಖಂಡಿತಾ ಬದಲಾವಣೆ ಕಾಣಬಹುದು ಎಂದು ರಾಗಿಣಿ ಮಾತನಾಡಿದ್ದಾರೆ.
90 ದಿನಗಳ ಕಾಲ ಜೈಲಿನಲ್ಲಿ ಇರುವಾಗ ಜೀವನದಲ್ಲಿ ದೊಡ್ಡ ಪಾಠ ಕಲಿತಿರುವೆ. ಆ ರೀತಿ ಕಷ್ಟ ನನ್ನ ಶತ್ರುಗೂ ಬೇಡ ಎಂದು ಪ್ರಾರ್ಥಿಸುವೆ. ಹಾಗಂತ ಸೈಲೆಂಟ್ ಆಗಿ ಕೂರುವ ವ್ಯಕ್ತಿ ನಾನಲ್ಲ. 90 ದಿನಗಳ ಕಾಲ ಬರೆಯುತ್ತಿದ್ದೆ. ಪ್ರತಿಯೊಂದು ಕ್ಷಣ ಪ್ರತಿಯೊಂದು ನಿಮಿಷ ಹೇಗಿತ್ತು ಎಂದು ನಾನು ಬರೆಯುತ್ತಿದ್ದೆ ನನ್ನ ಭಾವನೆಗಳನ್ನು ವ್ಯಕ್ತ ಪಡಿಸುತ್ತಿದ್ದೆ. ಇದನ್ನು ಪುಸ್ತಕವಾಗಿ ಕನ್ವರ್ಟ್ ಮಾಡಬೇಕು ಅನ್ನೋದು ನನ್ನ ಆಸೆ ಆಗಿದೆ. ಓದಲು ತುಂಬಾ ಇಂಟ್ರೆಸ್ಟಿಂಗ್ ಆಗಿರುತ್ತದೆ ಏಕೆಂದರೆ 100% ಸತ್ಯ ಹೇಳುತ್ತದೆ. ನಾನು ಇಷ್ಟು ದಿನಗಳ ಕಾಲ ಮೌನವಾಗಿದ್ದೆ ಅಂದ್ರೆ ಅದಕ್ಕೊಂದು ಕಾರಣ ಇದೆ ಶೀಘ್ರದಲ್ಲಿ ಕಾರಣ ತಿಳಿಯಲಿದೆ ಎಂದು ರಾಗಿಣಿ ಹೇಳಿದ್ದಾರೆ. ಈ ಮೂಲಕ ಜೈಲಿನಲ್ಲಿ 90 ದಿನಗಳು ಕಳೆದ ಬಗ್ಗೆ ಪುಸ್ತಕ ಬರೋದಾಗಿ ನಟಿ ಸುಳಿವು ನೀಡಿದ್ದಾರೆ.