ಇನ್ನಷ್ಟೇ ತೆರೆಗೆ ಬರಲು ಸಿದ್ದವಾಗಿರುವ ವಿಭಿನ್ನ ಕಥಾಹಂದರದ “ಶಂಭೋ ಶಿವ ಶಂಕರ” ಚಿತ್ರವನ್ನು ಶಂಕರ್ ಕೋನಮಾನಹಳ್ಳಿ (Shankar Konamanahalli) ನಿರ್ದೇಶಿಸಿದ್ದಾರೆ. ಆ ಚಿತ್ರ ತೆರೆಗೆ ಬರುವ ಮುಂಚೆಯೇ ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಎರಡನೇ ಚಿತ್ರವನ್ನು ನಿರ್ದೇಶಿಸುವ ತಯಾರಿಯಲ್ಲಿದ್ದಾರೆ. ತಮ್ಮ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ರಾಗಿಣಿ ದ್ವಿವೇದಿ (Ragini) ಈ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಈ ನೂತನ ಚಿತ್ರದ ಚಿತ್ರೀಕರಣವನ್ನು ನವೆಂಬರ್ ನಲ್ಲಿ ನಡೆಯಲಿದೆ.
ಇದೀಗ ತುಪ್ಪದ ಹುಡುಗಿ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅವೆಲ್ಲವೂ ವಿಭಿನ್ನವಾದ ಪಾತ್ರಗಳಾಗಿವೆ. ಹಾಗಾಗಿಯೇ ರಾಗಿಣಿ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದಾಳೆ. ಅದಕ್ಕಾಗಿ ಹೊಸ ಫೋಟೋಶೂಟ್ (Photoshoot)ಕೂಡ ಮಾಡಿಸಿಕೊಂಡಿದ್ದಾರೆ. ಇದನ್ನೂ ಓದಿ:ಸಾನ್ಯ ಕ್ಯಾಪ್ಟೆನ್ಸಿಗೆ ಕಳಪೆ ಎಂದ ರೂಪೇಶ್ ಶೆಟ್ಟಿ
ಕೆಂಪೇಗೌಡ, ವೀರಮದಕರಿ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ರಾಗಿಣಿ, ಮಹಿಳಾ ಪ್ರಧಾನ ಸಿನಿಮಾಗಳನ್ನೂ ಮಾಡಿದರು. ಅದರಲ್ಲಿ ಯಶಸ್ಸೂ ಕಂಡರು. ಸುದೀಪ್ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಕೂಡ ಇವರದ್ದು. ಹಾಗಾಗಿ ರಾಗಿಣಿ ಕೂಡ ಸ್ಟಾರ್ ನಟಿಯಾಗಿಯೇ ಮಿಂಚಿದವರು.
ಗಾಂಧಿಗಿರಿ, ಒನ್ ಟು ಒನ್, ಕರ್ವ 3, ಜಾನಿವಾಕರ್ ಸೇರಿದಂತೆ ಹಲವು ಚಿತ್ರಗಳನ್ನು ಒಪ್ಪಿಕೊಂಡಿರುವ ಇವರು, ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ತೆಲುಗು ಸಿನಿಮಾದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಸಂತಾನಂ ಈ ಸಿನಿಮಾದ ಹೀರೋ. ನಾಯಕಿಯಾಗಿ ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ.
ಹಿಂದಿ, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ತಯಾರಾಗುತ್ತಿರುವ ಸಾರಿ ಕರ್ಮ ರಿಟನರ್ಸ್ ಸಿನಿಮಾದಲ್ಲಿ ರಾಗಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೊಂದು ಸಸ್ಪನ್ಸ್ ಮತ್ತು ಥ್ರಿಲ್ಲರ್ ಆಧರಿಸಿದ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಅವರು ವಿಶೇಷ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರಂತೆ.
ಕೋವಿಡ್ ವೇಳೆಯಲ್ಲಿ ಸಮಾಜಮುಖಿ ಕೆಲಸಗಳನ್ನೂ ಮಾಡಿದ್ದ ರಾಗಿಣಿ, ಡ್ರಗ್ಸ್ ಕೇಸಿನಲ್ಲಿ ಪಡಬಾರದ ಕಷ್ಟ ಪಟ್ಟರು. ಜೈಲಿಗೂ ಹೋಗಿ ಬಂದರು. ಜೈಲಿನಿಂದ ವಾಪಸ್ಸಾದ ನಂತರ ಮತ್ತೆ ಅವರು ಸಿನಿಮಾ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೇ, ಸಿನಿಮಾ ರಂಗದಲ್ಲೂ ಬ್ಯುಸಿಯಾಗಿದ್ದಾರೆ.