ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಪ್ರಕರಣದಲ್ಲಿ ಭಾರೀ ಸದ್ದು ಮಾಡಿದ್ದ ನಟಿ ರಾಗಿಣಿ ದ್ವಿವೇದಿ ಇದೀಗ ಬಾಲಿವುಡ್ ಆಲ್ಬಂ ಸಾಂಗ್‍ವೊಂದರಲ್ಲಿ ನೃತ್ಯ ಮಾಡುತ್ತಿದ್ದಾರೆ. ಈ ಹಾಡಿನ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಈ ಕುರಿತ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡದ ಹಲವಾರು ಐಟಂ ಸಾಂಗ್‍ಗಳಲ್ಲಿ ಸೊಂಟ ಬಳುಕಿಸಿದ್ದ ರಾಗಿಣಿ ದ್ವಿವೇದಿ ಇದೇ ಮೊದಲ ಬಾರಿಗೆ ಪಂಜಾಬಿ ಆಲ್ಬಂ ಸಾಂಗ್‍ವೊಂದಕ್ಕೆ ಹೆಜ್ಜೆ ಹಾಕಿದ್ದು, ಶೂಟಿಂಗ್ ವೇಳೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಜೊತೆಗೆ ತಮ್ಮ ಅನುಭವವನ್ನು ಇನ್‍ಸ್ಟಾಗ್ರಾಮ್ ಶೇರ್ ಮಾಡಿಕೊಂಡಿದ್ದಾರೆ. ಸೋನಿಯಾ ಎಂಬ ಆಲ್ಬಂ ಸಾಂಗ್‍ಗೆ ಕ್ವೇಕ್ (ಅರ್ಜುನ್ ಶರ್ಮಾ) ಜೊತೆಗೆ ರಾಗಿಣಿ ನೃತ್ಯ ಮಾಡುತ್ತಿದ್ದು, ಫೋಟೋದಲ್ಲಿ ರಾಗಿಣಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಕನ್ನೇರಿ ಚಿತ್ರದ ಮನಮುಟ್ಟುವ ಹಾಡು ಬಿಡುಗಡೆ ಮಾಡಿದ ಖ್ಯಾತ ನಟಿ ಶ್ರುತಿ
ಫೋಟೋ ಜೊತೆಗೆ, ಅರ್ಜುನ್ ಶರ್ಮಾ ಜೊತೆಗಿನ ಚಿತ್ರೀಕರಣದ ಅನುಭವ ಬಹಳ ಅದ್ಭುತವಾಗಿತ್ತು. ಎಷ್ಟು ಸೊಗಸಾಗಿ ಹಾಡನ್ನು ರಚಿಸಿ, ಹಾಡಿದ್ದಾರೆ. ನೀವು ನಿಜಕ್ಕೂ ಪ್ರತಿಭಾವಂತ ಮತ್ತು ನಿಮ್ಮ ಈ ಜರ್ನಿಯಲ್ಲಿ ಭಾಗಿಯಾಗಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ಈ ಸಾಂಗ್ ಅನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವವರೆಗೂ ಕಾಯಲು ಆಗುತ್ತಿಲ್ಲ. ಇದು ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿಯ ಹೃದಯಬಡಿತವಾಗಿದೆ. ಈ ಹಾಡನ್ನು ಹೆಸರಾಂತ ನೃತ್ಯ ಸಂಯೋಜಕ ವಿಷ್ಣು ಪ್ರಭು ಕೊರಿಯೋಗ್ರಾಫ್ ಮಾಡಿದ್ದಾರೆ. ಮುಂಬೈನ ಸುತ್ತಮುತ್ತ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಅಲ್ಲದೇ ಈ ಹಾಡಿಗಾಗಿ ರುದ್ರಾಕ್ಷ್ ದ್ವಿವೇದಿ ವಸ್ತ್ರ ವಿನ್ಯಾಸ ಮಾಡಿದ್ದಾರೆ ಎಂದು ತಿಳಿಸುತ್ತಾ ಕೊನೆಯಲ್ಲಿ ನಮ್ಮನ್ನು ಮತ್ತು ಈ ಹಾಡನ್ನು ಸುಂದರವಾಗಿ ಕಾಣುವಂತೆ ಮಾಡಿದ್ದಕ್ಕಾಗಿ ಧ್ಯನವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕಾಡಿನ ಥೀಮ್ ನಡುವೆ ರಾಯನ್ ಬರ್ತ್‍ಡೇ ಸೆಲೆಬ್ರೆಶನ್ – ಫೋಟೋ, ವೀಡಿಯೋ ವೈರಲ್
View this post on Instagram
ವೀರ ಮದಕರಿ ಸಿನಿಮಾದ ಮೂಲಕ ಸ್ಯಾಂಲಡ್‍ವುಡ್‍ಗೆ ಎಂಟ್ರಿ ಕೊಟ್ಟ ರಾಗಿಣಿ ಸ್ವಿವೇದಿ ವಿಕ್ಟರ್-2 ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಸಾಂಗ್‍ನಲ್ಲಿ ಕಾಣಿಸಿಕೊಂಡು. ನಂತರ ಕಳ್ಳ, ಮಳ್ಳ, ಸುಳ್ಳ ಸಿನಿಮಾದ ತುಪ್ಪ ಬೇಕಾ ತುಪ್ಪ ಐಟಂ ಸಾಂಗ್‍ನಲ್ಲಿ ಕುಣಿದುಕುಪ್ಪಳಿಸಿದ್ದರು. ಈ ಹಾಡು ಸಖತ್ ಫೇಮಸ್ ಕೂಡ ಆಗಿತ್ತು. ಹೀಗೆ ಹಲವಾರು ಐಟಣ ಸಾಂಗ್‍ನಲ್ಲಿ ಕಾಣಿಸಿಕೊಂಡಿದ್ದ ರಾಗಿಣಿ ಇದೀಗ ಕೊಂಚ ವಿಭಿನ್ನ ಲುಕ್‍ನಲ್ಲಿ ಆಲ್ಬಂ ಸಾಂಗ್‍ನತ್ತ ಮುಖಮಾಡಿದ್ದು, ಮುಂದಿನ ದಿನಗಳಲ್ಲಿ ಈ ಸಾಂಗ್ ಹೇಗೆ ಹಿಟ್ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.