`ರಾ’ಗಿಣಿ ಕರ್ಮ ರಿಟರ್ನ್ಸ್: ರಾಗಿಣಿ ಹುಟ್ಟುಹಬ್ಬಕ್ಕೆ ಭಗವದ್ಗೀತೆ ಗಿಫ್ಟ್

Public TV
1 Min Read
ragini 4

ಸ್ಯಾಂಡಲ್‌ವುಡ್ ನಟಿ ರಾಗಿಣಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಡ್ರಗ್ಸ್ ಪ್ರಕರಣದ ನಂತರ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಿರುವ ರಾಗಿಣಿ ಈಗ ತಮ್ಮ ಹೊಸ ಸಿನಿಮಾದ ಲುಕ್ ರಿವೀಲ್ ಮಾಡಿರೋದರ ಜೊತೆಗೆ ಹೊಸ ಚಿತ್ರ ಅನೌನ್ಸ್ ಮಾಡಿದ್ದಾರೆ.

ragini 2 1

ಮೀರ ಮದಕರಿ. ಕೆಂಪೇಗೌಡ ಸಿನಿಮಾಗಳ ಮೂಲಕ ಮೋಡಿ ಮಾಡಿರೋ ನಟಿ ರಾಗಿಣಿ ಇದೀಗ 32ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಡ್ರಗ್ಸ್ ಪ್ರಕರಣ ಮತ್ತು ಸಾಕಷ್ಟು ಸವಾಲುಗಳನ್ನು ಎದರಿಸಿದ ನಂತರ ಮತ್ತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ರಾಗಿಣಿ ಹುಟ್ಟು ಹಬ್ಬದಂದು `ಸಾರಿ ಕರ್ಮ ರಿಟನ್ಸ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ವೇಳೆ ರಾಗಿಣಿಗೆ ಭಗವದ್ಗೀತೆ ನೀಡಿ ಸನ್ಮಾನಿಸಲಾಯಿತು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾ

ragini 1 2

ನಟಿ ರಾಗಿಣಿ ಕಳೆದ ವರ್ಷ ಜೈಲಿನಿಂದ ಬಂದ ನಂತರ ಹುಟ್ಟುಹಬ್ಬ ಆಚರಿಸಿರಲಿಲ್ಲ. ಈ ವರ್ಷ ಸಾಲು ಸಾಲು ಸಿನಿಮಾಗಳ ಜೊತೆ ಕಮ್ ಬ್ಯಾಕ್ ಆಗಿದ್ದಾರೆ. ಹೊಸ ಸಿನಿಮಾಗಳ ಅನೌನ್ಸ್ ಮಾಡ್ತಿದ್ದಾರೆ. ಜೈಲಿಂದ ಬಂದ ನಂತರ ರಾಗಿಣಿಯ ಲಕ್‌ಯೇ ಬದಲಾಗಿದೆ. ಒಳ್ಳೆಯ ಕಥೆಗಳು ಅರಸಿ ಬರೋದರ ಜತೆಗೆ ಪರಭಾಷೆಗಳಿಂದಲೂ ನಟಿಗೆ ಬುಲಾವ್ ಬರುತ್ತಿದೆ. ಸದ್ಯ `ಗಾಂಧಿಗಿರಿ’, ತಮಿಳಿನ ಒಂದು ಪ್ರಾಜೆಕ್ಟ್ ಜೊತೆ ಹೆಸರಿಡದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *