CinemaDistrictsKarnatakaLatestMain PostSandalwoodSouth cinema

ತಮಿಳು ನಟ ಸಂತಾನಂ ಜೊತೆ ಹಾಟ್ ಹಾಟ್ ಆಗಿ ಕಾಣಿಸಿಕೊಳ್ತಾರಂತೆ ರಾಗಿಣಿ

ಪ್ರಶಾಂತ್ ರಾಜ್ ನಿರ್ದೇಶನದ ಚೊಚ್ಚಲು ತಮಿಳು ಸಿನಿಮಾದಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕೂಡ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಗ್ಲಾಮರೆಸ್ ಆಗಿ ಕಾಣಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ತಮಿಳು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ಈ ಸಿನಿಮಾ ತಯಾರಾಗುತ್ತಿದ್ದು, ರಾಗಿಣಿಗಾಗಿಯೇ ಈ ಸಿನಿಮಾದಲ್ಲಿ ವಿಶೇಷ ಹಾಡು ಕೂಡ ಇದೆಯಂತೆ. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

ತಮಿಳು ನಟ ಸಂತಾನಂ ಜೊತೆ ಹಾಟ್ ಹಾಟ್ ಆಗಿ ಕಾಣಿಸಿಕೊಳ್ತಾರಂತೆ ರಾಗಿಣಿ

ಪ್ರಶಾಂತ್ ರಾಜ್ ಇದೇ ಮೊದಲ ಬಾರಿಗೆ ತಮಿಳಿಗೆ ಹಾರಿದ್ದು, ಸಂತಾನಂ ಅವರು ಚಿತ್ರದಲ್ಲಿ ನಾಯಕನ ಪಾತ್ರ ಮಾಡುತ್ತಿದ್ದಾರೆ. ಬಸಣ್ಣಿ ಬಾ ಖ್ಯಾತಿಯ ತಾನ್ಯ ಹೋಪ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ತಿಂಗಳು ಕೊನೆಯ ವಾರದಿಂದ ಸಿನಿಮಾದ ಶೂಟಿಂಗ್ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

ತಮಿಳು ನಟ ಸಂತಾನಂ ಜೊತೆ ಹಾಟ್ ಹಾಟ್ ಆಗಿ ಕಾಣಿಸಿಕೊಳ್ತಾರಂತೆ ರಾಗಿಣಿ

ಪ್ರಶಾಂತ್ ರಾಜ್ ನಿರ್ದೇಶನದ ಬಹುತೇಕ ಸಿನಿಮಾಗಳು ಕ್ಯೂಟ್ ಲವ್ ಸ್ಟೋರಿಯನ್ನೇ ಒಳಗೊಂಡಿವೆ. ಈವರೆಗೂ ಅವರ ಸಿನಿಮಾಗಳು ಕಲರ್ ಫುಲ್ ಆಗಿಯೇ ಮೂಡಿ ಬಂದಿವೆ. ಹಾಗಾಗಿ ಈ ಸಿನಿಮಾ ಕೂಡ ಒಂದೊಳ್ಳೆ ರೊಮ್ಯಾಂಟಿಕ್ ಲವ್ ಸ್ಟೋರಿಯನ್ನೇ ಒಳಗೊಂಡಿದೆ. ಹಾಗಾಗಿ ಕ್ಯೂಟ್ ಕಪಲ್ ಇಟ್ಟುಕೊಂಡು ಹೊಸ ಸಿನಿಮಾ ಮಾಡಲು ಹೊರಟಿದ್ದಾರೆ ನಿರ್ದೇಶಕರು.  ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

ತಮಿಳು ನಟ ಸಂತಾನಂ ಜೊತೆ ಹಾಟ್ ಹಾಟ್ ಆಗಿ ಕಾಣಿಸಿಕೊಳ್ತಾರಂತೆ ರಾಗಿಣಿ

ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಈಗಾಗಲೇ ಹಾಡುಗಳಿಗೆ ರಾಗ ಸಂಯೋಜನೆ ಶುರು ಮಾಡಿದ್ದಾರಂತೆ ಜನ್ಯ. ಸಾಮಾನ್ಯವಾಗಿ ಪ್ರಶಾಂತ್ ರಾಜ್ ನಿರ್ದೇಶನದ ಬಹುತೇಕ ಚಿತ್ರಗಳ ಹಾಡುಗಳು ಗೆದ್ದಿವೆ. ಸೂಪರ್ ಹಿಟ್ ಸಾಲುಗಳಲ್ಲಿ ಕಾಣಿಸಿಕೊಂಡಿವೆ. ಈ ಸಿನಿಮಾದ ಹಾಡುಗಳು ಕೂಡ ಕೇಳುಗರಿಗೆ ಇಷ್ಟವಾಗಲಿವೆ ಎಂದಿದ್ದಾರೆ ನಿರ್ದೇಶಕರು.

Leave a Reply

Your email address will not be published. Required fields are marked *

Back to top button