ಸ್ಯಾಂಡಲ್ವುಡ್ಗೆ `ಕೆಂಪೇಗೌಡ’, `ವೀರಮದಕರಿ’ ಚಿತ್ರಗಳ ಮೂಲಕ ಸಂಚಲನ ಮೂಡಿಸಿದ ನಟಿ ರಾಗಿಣಿ ದ್ವಿವೇದಿ.ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯೂಟಿ ಜೊತೆ ಪ್ರತಿಭೆಯಿರೋ ರಾಗಿಣಿಗೆ ಕನ್ನಡ ಚಿತ್ರಗಳು ಮಾತ್ರವಲ್ಲದೇ ಪರಭಾಷಾ ಸಿನಿಮಾಗಳಿಂದಲೂ ಬುಲಾವ್ ಬರುತ್ತಿದೆ.
Advertisement
`ಜುಮ್ ಜುಮ್ ಮಾಯಾ’ ಎಂಬ ಹಾಡಿನ ಮೂಲಕ ಸ್ಯಾಂಡಲ್ವುಡ್ನಲ್ಲಿ ಹೊಸ ಅಲೆ ಸೃಷ್ಠಿಸಿದ ತುಪ್ಪದ ಬೆಡಗಿ ರಾಗಿಣಿ ಸಾಕಷ್ಟು ಚಿತ್ರಗಳ ಮೂಲಕ ಕಮಾಲ್ ಮಾಡಿದ್ರು. ಭಿನ್ನ ಪಾತ್ರಗಳ ಮೂಲಕ ಮನರಂಜಿಸಿರೋ ರಾಗಿಣಿ ಕಡೆಯದಾಗಿ ಕಾಣಿಸಿಕೊಂಡಿದ್ದ ಚಿತ್ರ ನಟ ಶರಣ್ ಜೊತೆಗಿನ `ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದಲ್ಲಿ, ಇದೀಗ ಮತ್ತೆ ರಾಗಿಣಿ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ.
Advertisement
Advertisement
ರಾಗಿಣಿ ಈ ಬಾರಿ ಪವರ್ಫುಲ್ ಪಾತ್ರಗಳ ಮೂಲಕ ಕಂಬ್ಯಾಕ್ ಆಗಿದ್ದಾರೆ. ವಿಶಾಲ್ ಶೇಖರ್ ನಿರ್ದೇಶನದ `ಕರ್ವ 3′ ನಲ್ಲಿ ಡಿಫರೆಂಟ್ ಪಾತ್ರಕ್ಕೆ ಜೀವ ತುಂಬ್ತಿದ್ದಾರೆ. ವೇದಿಕ್ ನಿರ್ದೇಶನದ `ಜಾನಿವಾಕರ್’ ಚಿತ್ರದಲ್ಲಿ ತನಿಖಾ ಅಧಿಕಾರಿಯ ಪಾತ್ರದಲ್ಲಿ ಕಾಣಸಿಕೊಳ್ತಿದ್ದಾರೆ. ಇನ್ನೊಂದು ಭಿನ್ನ ಕಥೆ `ಗಾಂಧಿಗಿರಿ’ ಚಿತ್ರದಲ್ಲೂ ನಟಿಸ್ತಿದ್ದಾರೆ. ಇದನ್ನು ಓದಿ:`ಕೆಜಿಎಫ್ 2′ ಟೀಮ್ನಿಂದ ಪ್ರಭಾಸ್ ಫ್ಯಾನ್ಸ್ಗೆ ಗುಡ್ ನ್ಯೂಸ್
Advertisement
ಬ್ರಹ್ಮ ನಿರ್ದೇಶನದ `ಸಾರಿ ಕರ್ಮ ರಿಟನ್ಸ್’ ಚಿತ್ರ ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ರಿಲೀಸ್ ಆಗುತ್ತಿದೆ. ಕ್ರಿಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿ ಸಿದ್ದವಾಗ್ತಿರೋ ಈ ಚಿತ್ರದಲ್ಲಿ ರಾಗಿಣಿ ಎರಡು ಭಿನ್ನ ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕಾಲಿವುಡ್ನ `ಒನ್ ಟು ಒನ್’ ಚಿತ್ರಕ್ಕೆ ರಾಗಿಣಿ ಸಹಿ ಹಾಕಿದ್ದಾರೆ. ಫ್ಯಾಮಿಲಿ ಡ್ರಾಮ ಜೊತೆ ಸಸ್ಪೆನ್ಸೆ ಕಥೆಯಲ್ಲಿ ರಾಗಿಣಿ ಹೋಮ್ಲಿ ಲುಕ್ನಲ್ಲಿ ಮಿಂಚಲಿದ್ದಾರೆ. ಸಿನಿಮಾ, ಫೋಟೋಶೂಟ್ ಮಾಡಿಸೋದ ಜೊತೆಗೆ ಸಮಾಜ ಮುಖಿ ಕಾರ್ಯಗಳಿಂದಲೂ ಸೈ ಎನಿಸಿಕೊಂಡಿದ್ದಾರೆ.