– ಹಾಡು ಹೇಳು, ಡ್ಯಾನ್ಸ್ ಮಾಡು.. 4 ವರ್ಷ ಇಲ್ಲೇ ಇರ್ತೀಯಾ ಹುಷಾರ್ ಅಂತ ಧಮ್ಕಿ
ವಿಜಯಪುರ: ನಗರದ ಅಥಣಿ ರಸ್ತೆಯ ಅಲ್ ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್ ನಡೆದಿರುವ ಆರೋಪ ಕೇಳಿ ಬಂದಿದೆ.
Advertisement
ಮಂಗಳವಾರ ಸಂಜೆ ಕ್ರಿಕೆಟ್ ಆಟದ ವೇಳೆ ರ‍್ಯಾಗಿಂಗ್ ನಡೆದಿದೆ ಎನ್ನಲಾಗಿದೆ. 2022 ರ ಬ್ಯಾಚ್‌ನ ಜಮ್ಮು-ಕಾಶ್ಮೀರದ ಹಮೀಮ್ ಎಂಬ ಎಂಬಿಬಿಎಸ್ ವಿದ್ಯಾರ್ಥಿಗೆ ರ‍್ಯಾಗಿಂಗ್ ಮಾಡಿದ ಆರೋಪ ಕೇಳಿಬಂದಿದೆ. ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ವಿದ್ಯಾರ್ಥಿ ಇವನಾಗಿದ್ದು, 2019 ರ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್ ಆಗಿದೆ ಎಂದು ಆರೋಪಿಸಲಾಗಿದೆ.
Advertisement
ರ‍್ಯಾಗಿಂಗ್ ಬಗ್ಗೆ ಹಮೀಮ್ ಪರಿಚಯದ ವ್ಯಕ್ತಿ ನಾಸಿರ್ ಹುಸೇನಿ ಟ್ವೀಟ್ ಮಾಡಿದ್ದಾನೆ. ನಿನ್ನೆ ಸಂಜೆ ಮೆಡಿಕಲ್ ಕಾಲೇಜು ಆವರಣದಲ್ಲಿ ಕ್ರಿಕೆಟ್ ನಡೆದಿತ್ತು. ಹಮೀಮ್ 2012 ರ ಬ್ಯಾಚ್‌ನ ಕ್ಯಾಪ್ಟನ್ ಆಗಿದ್ದ. ಮ್ಯಾಚ್ ವೇಳೆ ಹಿರಿಯ ವಿದ್ಯಾರ್ಥಿಗಳ ಜೊತೆ ಗಲಾಟೆ ಆಯ್ತು. ಇದಾದ ಬಳಿಕ ಸಂಜೆ ಹಾಸ್ಟೆಲ್‌ಗೆ ತೆರಳಿ ಆತನೊಂದಿಗೆ ಹಿರಿಯ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್ ನಡೆದಿದೆ ಎಂದು ಆರೋಪಿಸಿದ್ದಾನೆ.
Advertisement
ಹಾಡು ಹಾಡಲು, ಡ್ಯಾನ್ಸ್ ಮಾಡುವಂತೆ ರ‍್ಯಾಗಿಂಗ್ ಮಾಡಿದ್ದಾರೆ. ಬಳಿಕ ಇನ್ನೂ ನಾಲ್ಕು ವರ್ಷ ಇಲ್ಲೇ ಇರ್ತಿಯಾ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆಂದು ಆರೋಪಿಸಿದ್ದಾನೆ. ಈ ಬಗ್ಗೆ ನಾಸಿರ್ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಹಾಗೂ ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಟ್ವೀಟ್ ಮಾಡಿದ್ದಾನೆ.