ಬೆಂಗಳೂರು: ಅಪ್ಪನ ಆಸೆಯಂತೆ ಕೃಷಿಯಲ್ಲಿ ಓದಿ ಚಿನ್ನದ ಪದಕ ಪಡೆದ್ರು. ಆದ್ರೆ ಈ ಸಾಧನೆಯನ್ನು ಕಣ್ತುಂಬಿಕೊಳ್ಳಬೇಕಿದ್ದ ತಂದೆಯೇ ಇಹಲೋಕ ತ್ಯಜಿಸಿದ್ದಾರೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ಪಡೆದ ಸಾಧಕನ ಕಥೆ ಇದು.
Advertisement
ಹೌದು. ಮಂಡ್ಯದ ವಿಸಿ ಫಾರ್ಮ್‍ನ ಕೃಷಿ ಕಾಲೇಜು ವಿದ್ಯಾರ್ಥಿ ರಘುವೀರ್ ಬರೋಬ್ಬರಿ 11 ಚಿನ್ನದ ಪದಕ ಪಡೆದು ಕಾಲೇಜು ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. ಕೃಷಿ ವಿಶ್ವವಿದ್ಯಾಲಯದ 51ನೇ ಘಟಿಕೋತ್ಸವದಲ್ಲಿ ಇವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯ್ತು.
Advertisement
Advertisement
ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ರಘುವೀರ್ ರೈತ ಮಾದಪ್ಪ ಅವರ ಪುತ್ರ. ರಘುವೀರ್ ಅವರನ್ನ ಕೃಷಿ ಪದವೀಧರನನ್ನಾಗಿ ಮಾಡಬೇಕೆಂಬ ಆಸೆ ತಂದೆ ಮಾದಪ್ಪರಲ್ಲಿ ಇತ್ತು. ಅಪ್ಪನ ಆಸೆಯಂತೆ ಕಷ್ಟ ಪಟ್ಟು ಓದಿದ ರಘುವೀರ್, ಮೊದಲ ಶ್ರೇಯಾಂಕ ಪಡೆದು 11 ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ. ಆದ್ರೆ ವಿಧಿಯ ಆಟ ಮಗನ ಸಾಧನೆ ನೋಡಲು ಇಂದು ತಂದೆ ಇಲ್ಲ. ಅಪ್ಪನ ಸಾವಿನ ನಡುವೆ ಸಾಧನೆಯ ಕೃಷಿ ಮಾಡಿದ ಖುಷಿ ರಘುವೀರ್ ಅವರದ್ದು.
Advertisement
ಈ ಘಟಿಕೋತ್ಸವದಲ್ಲಿ 953 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯ್ತು. ಚಿಂತಾಮಣಿಯ ರೇಷ್ಮೆ ಕಾಲೇಜಿನ ಸಿ.ಪ್ರೀತಿ, ಜಿಕೆವಿಕೆಯ ಅರ್ಚನಾ 6 ಚಿನ್ನದ ಪದಕ ಪಡೆದ್ರೆ, ಸ್ನಾತಕೋತ್ತರ ವಿಭಾಗದಲ್ಲಿ ಆರತಿ 7 ಚಿನ್ನದ ಪದಕ ಪಡೆದಿದ್ದಾರೆ.
ಒಟ್ಟಿನಲ್ಲಿ ಸಾಧನೆಗೆ ಛಲ ಇದ್ರೆ ಸಾಕು ಅನ್ನೋ ಮಾತನ್ನ ರೈತ ಮಾದಪ್ಪ ಅವರ ಮಗ ರಘವೀರ್ ಸಾಧಿಸಿ ತೋರಿಸಿದ್ದಾರೆ. ಇವರ ಈ ಸಾಧನೆ ಮತ್ತಷ್ಟು ವಿದ್ಯಾರ್ಥಿಗಳಿಗೆ ಮಾದರಿ.