– ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ
ನವದೆಹಲಿ: ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಮತ್ತೆ ಸುದ್ದಿಯಲ್ಲಿದ್ದು ಭಾರತ ದೇಶದ ಬಗ್ಗೆ ನೀಡಿದ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಸಂವಾದ ಕಾರ್ಯಕ್ರಮದಲ್ಲಿ ರಘುರಾಮ್ ರಾಜನ್ ಸಭಿಕರ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಮುಂದಿನ ದಶಕದಲ್ಲಿ ಹಣಕಾಸು ಸಚಿವರಾಗಿ ಅಥವಾ ಪ್ರಧಾನ ಮಂತ್ರಿಯಾಗಿ ನಿಮ್ಮನ್ನು ನೋಡಬಹುದೇ ಎಂದು ಪ್ರಶ್ನೆ ಕೇಳಲಾಯಿತು. ಇದನ್ನೂ ಓದಿ: ಮೋಸ್ಟ್ ವಾಂಟೆಡ್ ಖಲಿಸ್ತಾನಿ ಉಗ್ರ ಕೆನಡಾದಲ್ಲಿ ಗುಂಡಿನ ದಾಳಿಗೆ ಬಲಿ
Raghuram Rajan: "I don't care about India being a superpower, to me that's not the point. It's about what the father of the nation wanted."
Being a superpower means lesser poverty, healthier lives, longer life spans, less suffering for a Billion people but of course Rajan… pic.twitter.com/PxzFF9uBjI
— Cogito (@cogitoiam) June 18, 2023
ಈ ಪ್ರಶ್ನೆಗೆ, ಭಾರತವು ಸೂಪರ್ ಪವರ್ ಆಗಿರುವ ಬಗ್ಗೆ ನನಗೆ ಕಾಳಜಿ ಇಲ್ಲ. ಅದು ನನಗೆ ವಿಷಯವಲ್ಲ. ರಾಷ್ಟ್ರದ ಪಿತಾಮಹ ಬಯಸಿದಂತೆ ಪ್ರತಿಯೊಬ್ಬ ಭಾರತೀಯನನ್ನು ಸಂತೋಷಪಡಿಸುವುದೇ ಅದು ನನ್ನ ವಿಷಯ ಎಂದು ಉತ್ತರಿಸಿದರು. ಈ ಹೇಳಿಕೆಯ ಬಗ್ಗೆ ಈಗ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
Raghuram Rajan left a legacy memory of which is that it nearly made India bankrupt pic.twitter.com/hioDxALIi7
— DelhiMuse (@DelhiMuse) June 19, 2023
ರಾಘುರಾಮ್ ರಾಜನ್ ಹೇಳಿಕೆಗಳು ಚರ್ಚೆಗೆ ಗ್ರಾಸವಾಗುತ್ತಿರುವುದು ಇದು ಮೊದಲೆನಲ್ಲ. ಈ ಹಿಂದೆ ಸ್ಮಾರ್ಟ್‌ಫೋನ್ ಹೂಡಿಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಆರಂಭಿಸಿದ್ದ ಉತ್ಪಾದನೆ ಆಧಾರಿತ ಪ್ರೋತ್ಸಾಹಧನನ್ನು (Production Linked Incentive) ಟೀಕಿಸಿದ್ದರು. ಸ್ಮಾರ್ಟ್‌ಫೋನ್ ಪಿಎಲ್‌ಐ ಯೋಜನೆಯಲ್ಲಿ ಮೌಲ್ಯವರ್ಧನೆ ಕಡಿಮೆಯಾಗಿದೆ. ಇಲ್ಲಿ ಕೇವಲ ಜೋಡಣೆಯಾಗುತ್ತಿದೆಯೇ ಹೊರತು ಉತ್ಪಾದನೆಯಾಗುತ್ತಿಲ್ಲ. ಮೊಬೈಲ್ ಫೋನ್‌ಗಳ ಸಣ್ಣ ಭಾಗಗಳನ್ನು ಸಹ ಭಾರತದಲ್ಲಿ ತಯಾರಿಸಲಾಗುತ್ತಿಲ್ಲ ಎಂದು ಹೇಳಿದ್ದರು.
ಕೋವಿಡ್ ಲಾಕ್‌ಡೌನ್ ಬಳಿಕ ದೇಶದ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ರಘುರಾಮ್ ರಾಜನ್ ನೀಡಿದ ಸಲಹೆಯೂ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ರೀತಿಯ ಅಸಾಮಾನ್ಯ ಸಂದರ್ಭದಲ್ಲಿ ಹಣ ಮುದ್ರಿಸುವುದರಿಂದ ಹಣಕಾಸು ಬಿಕ್ಕಟ್ಟನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಬಹುದು. ಈ ರೀತಿಯ ಕ್ರಮ ವಿನಾಶಕಾರಿ ಆಗುವುದಿಲ್ಲ. ಮುದ್ರಣಗೊಂಡ ಹೆಚ್ಚುವರಿ ಹಣವನ್ನು ತಪ್ಪು ಮಾರ್ಗದಲ್ಲಿ ಬಳಸಿದರೆ ಮಾತ್ರ ಸಮಸ್ಯೆ ಸೃಷ್ಟಿಯಾಗಬಹುದು. ಹೆಚ್ಚುವರಿ ಹಣ ಮುದ್ರಿಸುವುದನ್ನು ತುಂಬ ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕೆಂದು ರಘುರಾಂ ರಾಜನ್ ತಮ್ಮ ಲಿಂಕ್‌ಇನ್ ಖಾತೆಯಲ್ಲಿ ಬರೆದುಕೊಂಡಿದ್ದರು.