ಉಡುಪಿ: ಹಿಜಬ್ ಕುರಿತಾಗಿ ಇಂದು ಹೈಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸುತ್ತೇನೆ ಮತ್ತು ಸಂತೋಷ ವ್ಯಕ್ತಪಡಿಸುತ್ತೇನೆ. ತ್ರೀ-ಸದಸ್ಯ ಪೀಟದ ತೀರ್ಪನ್ನ ಎಲ್ಲರೂ ಪಾಲಿಸಬೇಕು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಹೈಕೋರ್ಟ್ ತೀರ್ಪು ಬಳಿಕ ಶಾಸಕರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ಆರು ವಿದ್ಯಾರ್ಥಿನಿಯರು ಹಠ ಮಾಡದೇ ಶಾಲೆಗೆ ಬರಬೇಕು. ಅವರೆಲ್ಲರಿಗೂ ಸಮವಾದ ಶಿಕ್ಷಣ ನೀಡುತ್ತೇವೆ. ಇಷ್ಟು ದಿನ ಅವರ ಶಿಕ್ಷಣಕ್ಕೆ ಸಮಸ್ಯೆ ಆಗಿದ್ರೆ, ಅವರಿಗೆ ಪ್ರತ್ಯೇಕ ನೋಟ್ಸ್ ನೀಡಲಾಗುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
Advertisement
Advertisement
ತ್ರಿ ಸದಸ್ಯ ಪೀಠ ವಿಚಾರಣೆ ಮಾಡಿ ತೀರ್ಪು ನೀಡಿದೆ. ತ್ರಿ ಸದಸ್ಯ ಪೀಠದಲ್ಲಿ ಮುಸ್ಲಿಂ ನ್ಯಾಯಾಧೀಶರು ಇದ್ದರು. ಇದು ಐತಿಹಾಸಿಕ ತೀರ್ಪು ಆಗಿದೆ. ಸುಪ್ರೀಂಕೋರ್ಟ್‍ಗೆ ಹೋಗಲು ಅವಕಾಶ ಇದೆ. ಆದರೆ ದೇಶ ಮಟ್ಟದಲ್ಲಿ ಮತ್ತೆ ಈ ವಿಚಾರ ತೆಗೆದುಕೊಂಡು ಹೋಗಿ ಹಿಂದೂ-ಮುಸ್ಲಿಂರ ಮಧ್ಯೆ ಕಂದಕ ಮೂಡಿಸಬಾರದು ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್ ಐತಿಹಾಸಿಕ ತೀರ್ಪು
Advertisement
ಐತಿಹಾಸಿಕ ತೀರ್ಪು..?: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ.