ಉಡುಪಿ: ಹಿಜಬ್ ಹೋರಾಟಗಾರ್ತಿಯರಿಗೆ ಎರಡು ಮೂರು ದಿನಗಳ ಕಾಲ ಗುಪ್ತ ಸ್ಥಳದಲ್ಲಿ ಅಡ್ವಾನ್ಸ್ ಟ್ರೈನಿಂಗ್ ನೀಡಲಾಗಿದೆ ಎಂದು ಶಾಸಕ ರಘುಪತಿ ಭಟ್ ಸ್ಫೋಟಕ ಆರೋಪ ಮಾಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಿಜಬ್‍ಗಾಗಿ ಹೋರಾಟ ಮಾಡುವ ಆರು ಮಕ್ಕಳ ಜೊತೆ ಕಾಲೇಜು ಆಡಳಿತ ಮಂಡಳಿಯವರು ಮಾತನಾಡಿದ್ದೇವೆ. ಧಾರ್ಮಿಕ ತರಬೇತಿ ನೀಡಿ ರೂಪುರೇಷೆ ತಯಾರು ಮಾಡಲಾಗಿದೆ. ಹಿಂದೂ ಹೆಣ್ಣು ಮಕ್ಕಳನ್ನು ನೋಡಿದಾಗ ಆಕ್ರೋಶ ಬರುವಂತೆ ಮಾಡಿದ್ದಾರೆ. ಈ ಬಗ್ಗೆ ಟ್ರೈನಿಂಗ್ ಮುಗಿಸಿ ಬಂದ ವಿದ್ಯಾರ್ಥಿನಿ ಮಾಹಿತಿ ನೀಡಿದ್ದಾಳೆ ಎಂದು ತಿಳಿಸಿದರು.
Advertisement
Advertisement
ಆರು ಜನಕ್ಕೆ ಮತ್ತೆ ಅಡ್ವಾನ್ಸ್ ಟ್ರೈನಿಂಗ್ ನಡೆದಿದೆ. ಸಂಪೂರ್ಣ ತರಬೇತಿ ನಂತರ ಹಿಜಬ್ ಹೋರಾಟ ಶುರುವಾಗಿದೆ. ಈ ವಿಚಾರ ಸರ್ಕಾರ, ಪೊಲೀಸ್ ಮಟ್ಟದ ತನಿಖೆ ಆಗಲಿದೆ. ವಿದ್ಯಾರ್ಥಿಯ ಸಂಪರ್ಕ, ಹಣಕಾಸು ವ್ಯವಹಾರ, ಮೊಬೈಲ್ ಸಿಡಿಆರ್ ಪರಿಶೀಲನೆ ನಡೆಯಲಿದೆ. ತನಿಖೆ ಮಾಡುವಾಗ ಎಲ್ಲಾ ವಿಚಾರ ಗೊತ್ತಾಗಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಬಿಕಿನಿ, ಜೀನ್ಸ್, ಹಿಜಬ್ ಹೀಗೆ ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು : ಪ್ರಿಯಾಂಕಾ ಗಾಂಧಿ
Advertisement
ಹಿಜಬ್ ಬಗ್ಗೆ ಬೇಡಿಕೆ ಬಂದಾಗ ನಾವದನ್ನು ವಿರೋಧಿಸಿದೆವು. ಇಂದು ಈ ಹಂತಕ್ಕೆ ಬಂದು ತಲುಪಿದೆ. ಘಟನೆ ರಾಷ್ಟ್ರಮಟ್ಟಕ್ಕೆ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಕಾಲೇಜಿನಲ್ಲಿ ಎಲ್ಲಾ ಕೋಮಿನವರು ಸಮಾನರು. ಎಲ್ಲಾ ಸಮಾನರು ಎಂದು ಹಿಂದೂ ವಿದ್ಯಾರ್ಥಿಗಳು ಹೇಳ್ತಿದ್ದಾರೆ. ಈ ವಿವಾದವನ್ನು ಆರಂಭ ಮಾಡಿದವರು ಯಾರು ಎಂದು ನೋಡಬೇಕು. ನನಗೆ ಮಾಹಿತಿ ಇದೆ. ಹಿಜಬ್‍ಗಾಗಿ 12 ವಿದ್ಯಾರ್ಥಿಗಳು ಆರಂಭದಲ್ಲಿ ಮನವಿ ಕೊಟ್ಟಿದ್ದರು. ಕಾಲೇಜು ಮನವೊಲಿಕೆ ಮಾಡಿದ ನಂತರ 6 ಮಂದಿ ಹೋರಾಟದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಿದರು.
Advertisement
ಹಿಜಬ್ ಪ್ರಕರಣದ ಕುರಿತು ಪಾಕಿಸ್ತಾನ ಟಿವಿ, ಇಸ್ಲಾಮಿಕ್ ಟಿವಿಗೆ ಉಡುಪಿ ಸುದ್ದಿ ಮೊದಲು ಹೋದದ್ದು ಹೇಗೆ?, ವಿಚಾರ ಅಲ್ಲಿಗೆ ತೆಗೆದುಕೊಂಡು ಹೋದವರು ಯಾರು? ಇದನ್ನೆಲ್ಲಾ ಗಮನಿಸಿದಾಗ ಭಾರತಕ್ಕೆ ಕೆಟ್ಟ ಹೆಸರು ತರುವ ಷಡ್ಯಂತ್ರ ನಡೆದಿದೆ ಎಂಬುದು ಗೊತ್ತಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದುಬಿಟ್ರೆ ಇಡೀ ರಾಜ್ಯದ ಜನರಿಗೆ ಹಿಜಬ್ ಹಾಕಿಸುತ್ತಾರೆ: ಸುನಿಲ್ ಕುಮಾರ್
ಕೋರ್ಟ್ ಆದೇಶದ ಮೇಲೆ ನಮಗೆ ನಂಬಿಕೆ ಇದೆ. ಹೈಕೋರ್ಟ್ ತೀರ್ಪಿನ ಪ್ರಕಾರ ಸರ್ಕಾರ ಮತ್ತು ನಾವು ನಡೆದುಕೊಳ್ಳುತ್ತೇವೆ. ಸಮವಸ್ತ್ರಕ್ಕೆ ವ್ಯತಿರಿಕ್ತವಾಗಿ ತೀರ್ಪು ಬಂದರೆ ನಾವು ಮೇಲ್ಮನವಿ ಹೋಗಬಹುದು ಎಂದು ಹೇಳಿದರು.
ಸುಪ್ರೀಂಕೋರ್ಟ್ ಅಥವಾ ಡಬಲ್ ಬೆಂಚ್‍ಗೆ ನಾವು ಹೋಗಬಹುದು. ಕೋರ್ಟ್ ಆದೇಶವನ್ನು ಸರ್ಕಾರ ಮತ್ತು ನಮ್ಮ ಸರ್ಕಾರಿ ಕಾಲೇಜು ಪಾಲಿಸಬೇಕು. ಹಿಜಬ್ ಪರವಾದ ಆದೇಶ ಬಂದರೆ ಕೇಸರಿ ಶಾಲ್‍ಗೂ ಅವಕಾಶ ಕೊಡಬೇಕಾಗುತ್ತದೆ. ಕೋರ್ಟ್ ಆದೇಶಕ್ಕೆ ಎಲ್ಲರೂ ಬೆಲೆ ಕೊಡಬೇಕು. ಕೋರ್ಟ್‍ಗಿಂತ ಮೇಲೆ ಯಾರು ಇಲ್ಲ ಎಂದು ಸೂಚನೆ ನೀಡಿದರು.