ಉಡುಪಿ: ಹಿಜಬ್ ವಿವಾದದ ಹಿಂದೆ ಕ್ಯಾಂಪಸ್ ಫ್ರೆಂಟ್ ಆಫ್ ಇಂಡಿಯಾ, NSUI, SDPIನ ಕುಮ್ಮಕ್ಕು ಇದೆ. ಮಕ್ಕಳ ಭವಿಷ್ಯ, ಶಿಕ್ಷಣ ದೃಷ್ಟಿಯಿಂದ ಶಾಲೆಯ ನಿಯಮ ಪಾಲಿಸಿ ಎಂದು ಶಾಸಕ ರಘುಪತಿ ಭಟ್ ಮನವಿ ಮಾಡಿಕೊಂಡಿದ್ದಾರೆ.
Advertisement
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಹಿಜಬ್‍ಗೆ ಅವಕಾಶ ಕೊಟ್ಟರೆ ನಮ್ಮ ಅಭ್ಯಂತರ ಇಲ್ಲ. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಬ್ ವಿವಾದ ಕುರಿತಾಗಿ ಮುಸ್ಲಿಂ ಮುಖಂಡರ ಜೊತೆಗೆ ಎರಡು ಬಾರಿ ಮಾತುಕತೆ ನಡೆದಿದೆ. ಖಾಜಿಯವರು, ಮದ್ರಸಾ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದಾರೆ. ಉಡುಪಿ ಜಿಲ್ಲೆಯ ಮುಸ್ಲಿಂ ಮುಖಂಡರಿಗೆ ಮನವರಿಕೆ ಮಾಡಲಾಗಿದೆ. ಯಾವುದೇ ಸರ್ಕಾರಿ ಶಾಲೆಯಲ್ಲಿ ಹಿಜಾಬ್ ಧರಿಸಿ ಪಾಠ ಕೇಳುವುದಕ್ಕೆ ಅವಕಾಶ ಇಲ್ಲ. ಆರು ಮಕ್ಕಳಿಗೆ ಹಿಜಾಬ್ ಧರಸುವುದಕ್ಕೆ ಅವಕಾಶ ನೀಡಲು ಆಗುತ್ತಾ? ಆಗ ಉಳಿದ ಧರ್ಮದವರು ಕೇಸರಿ ಶಾಲಿಗೆ ಅವಕಾಶ ಕೇಳುತ್ತಾರೆ. ಹೀಗಾದರೆ ಶಾಲೆ ಶಿಕ್ಷಣ ಕೇಂದ್ರವಾಗದೆ ಧಾರ್ಮಿಕ ಸಂಘರ್ಷದ ಕೇಂದ್ರ ಆಗಲಿದೆ ಎಂದರು. ಇದನ್ನೂ ಓದಿ: ಆನ್‍ಲೈನ್ ಎಂಬ ತಾರತಮ್ಯದ ಕ್ಲಾಸ್ ಬೇಡ – ಹಿಜಬ್ ಹಾಕಿಯೇ ಕ್ಲಾಸಿಗೆ ಹೋಗುತ್ತೇವೆ
Advertisement
Advertisement
ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ. ಸರ್ಕಾರ ಹಿಜಬ್‍ಗೆ ಅವಕಾಶ ಕೊಟ್ರೆ ನಮ್ಮ ವಿರೋಧ ಇಲ್ಲ. ಅನ್‍ಲೈನ್ ಕ್ಲಾಸ್‍ಗೆ ಶಾಲಾ ಆಡಳಿತ ಮಂಡಳಿ ಅವಕಾಶ ನೀಡಿದೆ. ಈ ಕಾಲೇಜಿನಲ್ಲಿ 1985 ರಿಂದ ಯೂನಿಫಾರಂ ಕೋಡ್ ಇದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಇರಬೇಕು ಉದ್ದೇಶದಿಂದ ಮಾಡಲಾಗಿದೆ. ಭೇದ ಭಾವ ಬರಬಾರದು ಸಮಾನತೆಗಾಗಿ ಸಮವಸ್ತ್ರ ಮಾಡಲಾಗಿದೆ. ಆದರೆ ಇಲ್ಲಿ ಎಸ್‍ಡಿಪಿಐ ಗೆದ್ದ ಕೂಡಲೇ ಹಿಜಬ್ ವಿವಾದ ಶುರುವಾಗಿದೆ. ಈ ಮಕ್ಕಳು ಕಳೆದ ಒಂದು ವರ್ಷ ಹಿಜಬ್ ಧರಿಸದೆ ಪಾಠ ಕೇಳಿದ್ದಾರೆ. ಕಳೆದ ವರ್ಷ ಡಿಸೆಂಬರ್ 30 ರಂದು ಕಾಪುವಿನಲ್ಲಿ ಎಸ್‍ಡಿಪಿಐ ಮೂರು ಸ್ಥಾನ ಗೆದ್ದಿದೆ ಡಿ. 31 ಕ್ಕೆ ಮಕ್ಕಳು ಹಿಜಾಬ್ ಧರಿಸುವುದಕ್ಕೆ ಅವಕಾಶ ಕೇಳಿದ್ದಾರೆ ಮೂರು ಸೀಟು ಗೆಲ್ಲುವವರೆಗೆ ಮಕ್ಕಳಿಗೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಎಸ್‍ಡಿಪಿಐ ಕುಮ್ಮಕ್ಕಿನ ಬಗ್ಗೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಸ್ಟೂಡೆಂಟ್ ಪೊಲೀಸ್ ಕೆಡೆಟ್‌ನಲ್ಲಿ ಹಿಜಬ್ ಧರಿಸಲು ಅವಕಾಶವಿಲ್ಲ: ಕೇರಳ ಸರ್ಕಾರ
Advertisement