ನೆನ್ನೆ (ಫೆ.24)ಯಷ್ಟೇ ರಘು ದೀಕ್ಷಿತ್ ಅವರ ತಾಯಿ ಮೈಸೂರಿನಲ್ಲಿ ನಿಧನ ಹೊಂದಿದ್ದರು. ತಾಯಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ರಘು, ತಾಯಿಯ ನಿಧನದ ದಿನ ಅವರ ಜತೆ ಇರಲಿಲ್ಲ. ಮೈಸೂರಿನಲ್ಲಿ ತಾಯಿ ಕೊನೆಯುಸಿರೆಳೆದಿದ್ದರೆ, ಅತ್ತ ರಘು ಒಪ್ಪಿಕೊಂಡಿದ್ದ ಕಾರ್ಯಕ್ರಮಕ್ಕಾಗಿ ದುಬೈನಲ್ಲಿದ್ದರು. ವಿಷಯ ತಿಳಿಯುತ್ತಿದಂತೆ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಮೈಸೂರಿಗೆ ಆಗಮಿಸಿದರು. ನೆನ್ನೆಯೇ ತಾಯಿಯ ಅಂತ್ಯ ಸಂಸ್ಕಾರ ಮಾಡಿರುವ ರಘು, ಇವತ್ತು ಮತ್ತೆ ದುಬೈಗೆ ಹಾರುತ್ತಿದ್ದಾರೆ.
Thanks to everyone who called, texted and sent condolence messages. I am so grateful for all the love. Amma’s last rites were completed by the river Cauvery and her soul has now joined the divine light.
Now heading back to play a concert. The show must go on!
— Raghu Dixit (@Raghu_Dixit) February 25, 2022
Advertisement
ಒಪ್ಪಿಕೊಂಡ ಕಾರ್ಯಕ್ರಮವನ್ನು ರದ್ದುಗೊಳಿಸುವುದು ಕಷ್ಟವಾಗಿದ್ದರಿಂದ, ತಾಯಿ ಕಳೆದುಕೊಂಡ ನೋವಿನಲ್ಲೇ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಕೆಲಸದ ಮೂಲಕವೇ ತಾಯಿಗೆ ನಮನ ಸಲ್ಲಿಸುವುದಾಗಿ ಅವರು ಸಂಕಲ್ಪ ಮಾಡಿದ್ದಾರೆ. ಇದನ್ನೂ ಓದಿ : ಪುನೀತ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರ ನಿರ್ದೇಶಕನಿಗೆ ಟಾಲಿವುಡ್ ನಿಂದ ಮೆಗಾ ಆಫರ್
Advertisement
Advertisement
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಘು, “ತಾಯಿಯ ಸಂತಾಪ ಸಂದೇಶಗಳನ್ನು ಕಳುಹಿಸಿದ ಮತ್ತು ಕರೆ ಮಾಡಿ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅಮ್ಮನ ಅಂತಿಮ ವಿಧಿ ವಿಧಾನಗಳನ್ನು ಕಾವೇರಿ ನದಿಯಲ್ಲಿ ಪೂರ್ಣಗೊಳಿಸಿದ್ದೇನೆ. ಈಗ ಅಮ್ಮನ ಆತ್ಮವು ದೈವಿಕ ಬೆಳಕನ್ನು ಸೇರಿದೆ. ದಿ ಶೋ ಮಸ್ಟ್ ಗೊ ಆನ್” ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಫೆ.27ಕ್ಕೆ ಡಾ.ಅಂಬರೀಶ್ ಸ್ಮಾರಕ ಶಂಕು ಸ್ಥಾಪನೆ : ಸಿಎಂ ಬಸವರಾಜ ಬೊಮ್ಮಾಯಿ ಭಾಗಿ
Advertisement
ಪ್ರತಿ ವರ್ಷವೂ ರಘು ಆರು ತಿಂಗಳು ಭಾರತದಲ್ಲಿದ್ದರೆ, ಇನ್ನಾರು ತಿಂಗಳು ಬೇರೆ ಬೇರೆ ದೇಶಗಳಲ್ಲಿ ಕಾರ್ಯಕ್ರಮ ಕೊಡಲು ಮೀಸಲಿಡುತ್ತಾರೆ. ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳಿಂದ ಅವರು ವಿದೇಶದಲ್ಲಿ ಯಾವುದೇ ಕಾರ್ಯಕ್ರಮ ನೀಡಿರಲಿಲ್ಲ. ಇದೀಗ ತಾನೆ ಕಾರ್ಯಕ್ರಮ ಶುರು ಮಾಡಿದ್ದರು. ಅಷ್ಟರಲ್ಲಿ ಅವರ ಬದುಕಿನಲ್ಲಿ ಇಂಥದ್ದೊಂದು ಘಟನೆ ನಡೆದು ಹೋಗಿದೆ.