– ಯದುವೀರ್ ಒಡೆಯರ್‌ಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ
ರಾಯಚೂರು: ಮಂತ್ರಾಲಯದಲ್ಲಿ (Mantralayam) ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಹಿನ್ನೆಲೆ ಇಂದು ರಾಯರ ಉತ್ತರಾರಾಧನೆ ಸಂಭ್ರಮ ಮನೆ ಮಾಡಿದೆ. ಬೆಳಿಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯಗಳು ನಿರಂತರವಾಗಿ ಸಾಗಿವೆ. ಇಂದು ಮಠದ ಅಂಗಳದಲ್ಲಿ ಮಹಾರಥೋತ್ಸವ ನಡೆಯಲಿದೆ.
Advertisement
ಆರಾಧನಾ ಮಹೋತ್ಸವದ ಕೊನೆಯ ಘಟ್ಟ ಈಗ ತಲುಪಿದ್ದು ರಾಯರು ವೃಂದಾವನಸ್ಥರಾದ ಮರುದಿನವನ್ನ ಉತ್ತರರಾಧನೆಯಾಗಿ ಆಚರಣೆ ಮಾಡಲಾಗಿತ್ತಿದೆ. ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ಜರುಗಲಿದ್ದು, ಅಂತಿಮ ಸಿದ್ದತೆಗಳು ನಡೆದಿವೆ. ಮಹಾರಥೋತ್ಸವಕ್ಕೂ ಮುನ್ನ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಮಠದ ಎಲ್ಲಾ ವೃಂದಾವನಗಳಿಗೆ ಗುಲಾಲ್ ಎರಚುವ ಮೂಲಕ ವಸಂತೋತ್ಸವ ಆಚರಿಸುತ್ತಾರೆ. ಬಳಿಕ ಉತ್ಸವ ಮೂರ್ತಿ ಪ್ರಹ್ಲಾದ ರಾಜರ ಮೆರವಣಿಗೆ ನಡೆಯುತ್ತದೆ. ಮೆರವಣಿಗೆ ಬಳಿಕ ಮಹಾರಥೋತ್ಸವ ನಡೆಯಲಿದೆ. ರಥಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಟಿವೃಷ್ಠಿ ಮಾಡಲಾಗುತ್ತದೆ. ಇದನ್ನೂ ಓದಿ: MUDA Scam| ಇವತ್ತು ಸಿಎಂ ಬ್ಯಾಕ್ ಟು ಬ್ಯಾಕ್ ಸಭೆ – ಒಂದೇ ಉದ್ದೇಶ, ಒಂದೇ ಸಂದೇಶ
Advertisement
Advertisement
ಈ ಬಾರಿ ಮಹಾರಥೋತ್ಸವದಲ್ಲಿ ಸಂಸದ, ಮೈಸೂರು ಮಹಾರಾಜ ಯದುವೀರ್ ಒಡೆಯರ್ (Yaduveer Wadiyar) ಭಾಗಿಯಾಲಿದ್ದಾರೆ. ಇದೇ ವೇಳೆ ಸಂಸದ ಯದುವೀರ್ ಒಡೆಯರ್‌ಗೆ ಮಠದ ವತಿಯಿಂದ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಮೂಲಕ ಆರಾಧನಾ ಮಹೋತ್ಸವದ ಮುಖ್ಯ ಮೂರು ದಿನಗಳು ಇಂದಿಗೆ ಮುಕ್ತಾಯವಾಗಲಿವೆ. ಆಗಸ್ಟ್ 23 ಹಾಗೂ 24 ರಂದು ಆರಾಧನಾ ಮಹೋತ್ಸವ ಅಂಗವಾಗಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಇದನ್ನೂ ಓದಿ: ಕಾರಿಗೆ ಬೈಕ್ ತಾಗಿದ್ದಕ್ಕೆ ಅಪಘಾತವೆಸಗಿ ಡೆಲಿವರಿ ಬಾಯ್ ಹತ್ಯೆ – ದುಷ್ಕರ್ಮಿಗಳು ಅರೆಸ್ಟ್
Advertisement
ರಾತ್ರಿಯೇ ಮಂತ್ರಾಲಯಕ್ಕೆ ಆಗಮಿಸಿರುವ ಸಂಸದ ಯದುವೀರ್ ಒಡೆಯರ್ ಗುರು ರಾಯರ ಮೂಲ ವೃಂದಾವನ ದರ್ಶನ ಪಡೆದಿದ್ದಾರೆ, ರಾತ್ರಿ ಗಜ ವಾಹನ ಉತ್ಸವ, ಶಿಲಾಮಂಟಪಕ್ಕೆ ಚಿನ್ನದ ಕವಚ ಉದ್ಘಾಟನೆಯಲ್ಲಿ ಭಾಗವಹಿಸಿದ್ದಾರೆ. ಮಠದ ವತಿಯಿಂದ ಕೊಡಮಾಡುವ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಬಳಿಕ ಮಹಾರಥೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಶ್ರೀಗಳ ಜೊತೆ ಹೆಲಿಕಾಪ್ಟರ್‌ನಿಂದ ರಥಕ್ಕೆ ನಡೆಯುವ ಪುಷ್ಪವೃಷ್ಠಿಯಲ್ಲಿ ಒಡೆಯರ್ ಭಾಗವಹಿಸಲಿದ್ದಾರೆ.