ಪುನೀತ್ ರಾಜ್‌ಕುಮಾರ್(Puneeth Rajkumar) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ (Karnataka Ratna Prashati) ನೀಡಿದ್ದಕ್ಕಾಗಿ ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸುವುದರ ಜೊತೆಗೆ ಈ ಸಂದರ್ಭಕ್ಕೆ ಹೆಮ್ಮೆ ಪಡಬೇಕು ಎಂದು ಮಾತನಾಡಿದ್ದಾರೆ.
Advertisement
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ಕಾಲ ತಮ್ಮ ಸಿನಿಮಾಗಳ ಮೂಲಕ ಅಪ್ಪು ರಂಜಿಸಿದ್ದರು. ಅಷ್ಟೇ ಅಲ್ಲ, ಸಮಾಜಮುಖಿ ಕಾರ್ಯಗಳ ಮೂಲಕ ಸಾಕಷ್ಟು ಜನರಿಗೆ ಆದರ್ಶ ವ್ಯಕ್ತಿಯಾಗಿದ್ದರು. ಪುನೀತ್ ಪ್ರತಿಭೆ, ಕಲಾಸೇವೆಯನ್ನ ಗುರುತಿಸಿ ನವೆಂಬರ್ 1 ಕನ್ನಡ ಹಬ್ಬದಂದು ಪುನೀತ್ ರಾಜ್‌ಕುಮಾರ್ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನ ಪತ್ನಿ ಅಶ್ವಿನಿ ನೀಡಿ ಗೌರವಿಸಲಾಯಿತು. ಈ ಕುರಿತು ರಾಘಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
Advertisement
Advertisement
ಈ ಸಂದರ್ಭಕ್ಕೆ ಹೆಮ್ಮೆ ಪಡಬೇಕು. ನಮ್ಮ ತಂದೆ ಕರ್ನಾಟಕ ರತ್ನ ಪಡೆದುಕೊಳ್ಳುವಾಗ 30 ವರ್ಷದ ಹಿಂದೆ ನಮ್ಮನ್ನು ಕರೆಸಿಕೊಂಡು ಬಂದಿದ್ದರು. ಈಗ ನನ್ನ ತಮ್ಮ ಅಪ್ಪು ಕರೆಸಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಗೂ ಒಂದು ಶಕ್ತಿ ಇರುತ್ತದೆ ಎಂದು ಅಪ್ಪು ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:‘ಕರ್ನಾಟಕ ರತ್ನ’ದ ಅರ್ಥನೇ ಪುನೀತ್ ರಾಜ್ ಕುಮಾರ್ : ಜ್ಯೂನಿಯರ್ ಎನ್.ಟಿ.ಆರ್
Advertisement
`ಗಂಧದಗುಡಿ’ ಯಾಕೆ ಆ ಚಿತ್ರ ಮಾಡಿದ ಪ್ರಾಣಿ ಕಾಡಿನ ಬಗ್ಗೆ ಅವನಿಗಿದ್ದ ಕಾಳಜಿ, ಪ್ಲಾಸ್ಟಿಕ್ ಬಳಸಬೇಡಿ ಎಂಬ ಸಂದೇಶವಿತ್ತು. ಚಿಕ್ಕ ಮಕ್ಕಳಿಗೂ ಅದನ್ನ ಕಲಿಸಬೇಕು ಅದು ನಿಜವಾದ ಅವಾರ್ಡ್ ಎಂದು ರಾಘಣ್ಣ ಮಾತನಾಡಿದ್ದಾರೆ. ಅಭಿಮಾನಿ ದೇವರುಗಳು ಮಳೆಯಲ್ಲಿ ನಿಂತು ಕಾರ್ಯಕ್ರಮ ನೋಡಿದ್ದೀರ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಎಂದು ರಾಘಣ್ಣ ಧನ್ಯವಾದಗಳನ್ನ ತಿಳಿಸಿದ್ದಾರೆ.