LatestBengaluru CityCinemaDistrictsKarnatakaMain PostSandalwood

ನಟ ರಾಘವೇಂದ್ರ ರಾಜ್‍ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ.

ragavendra rajkumar

ಈ ಕುರಿತಂತೆ ರಾಘವೇಂದ್ರ ರಾಜ್‍ಕುಮಾರ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪ್ರಶಸ್ತಿ ಸ್ವೀಕರಿಸಿದ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ಚಂದನವನದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಅವರ ಜರ್ನಿಯನ್ನು ವಿವರಿಸಲಾಗಿದೆ. ಇದನ್ನೂ ಓದಿ: ವೈನ್ ಸ್ಟೋರ್ ಫ್ಯಾಮಿಲಿಯನ್ನು ಭೇಟಿಯಾದ ವೈಷ್ಣವಿ

ragavendra rajkumar

ವೀಡಿಯೋ ಜೊತೆಗೆ, ನಿನ್ನೆ ಬೆಂಗಳೂರಿನಲ್ಲಿ ನಡೆದ ಇನ್ನೋವೆಟಿವ್‌  ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ‘ದಾದಾ ಸಾಹೇಬ್ ಫಾಲ್ಕೆ ಎಂಎಸ್‍ಕೆ ಟ್ರಸ್ಟ್’ ವತಿಯಿಂದ ‘ಜೀವಮಾನ ಸಾಧನೆ ಪ್ರಶಸ್ತಿಯನ್ನು ನನಗೆ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿಯು ಅಪ್ಪಾಜಿ, ಅಮ್ಮ, ಕುಟುಂಬ ವರ್ಗ ಹಾಗೂ ನನ್ನೆಲ್ಲಾ ಅಭಿಮಾನಿ ದೇವರುಗಳಿಗೆ ಅರ್ಪಿಸುತ್ತಿದ್ದೇನೆ. ತುಂಬು ಹೃದಯದ ಧನ್ಯವಾದಗಳು ಎಂದು ಕಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ, ಮತಭಿಕ್ಷೆ ನೀಡಿ: ಹೆಚ್‍ಡಿಡಿ

Raghavendra Rajkumar

ವರನಟ ಡಾ. ರಾಜ್‍ಕುಮಾರ್‌ರವರ ಪ್ರೀತಿಯ ಸುಪುತ್ರರಲ್ಲಿ ರಾಘವೇಂದ್ರ ರಾಜ್‍ಕುಮಾರ್ ಅವರು ದ್ವಿತೀಯ ಪುತ್ರರಾಗಿದ್ದಾರೆ. ರಾಘವೇಂದ್ರರಾಜ್‍ಕುಮಾರ್ ಕನ್ನಡ ಚಿತ್ರರಂಗದಲ್ಲಿ ಗಾಯಕ ಹಾಗೂ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 1974ರಲ್ಲಿ ಡಾ. ರಾಜ್‍ಕುಮಾರ್ ಅಭಿನಯಿಸಿದ್ದ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಬಾಲನಟರಾಗಿ ನಟಿಸಿದ್ದರು. ನಂತರ ಚಿರಂಜೀವಿ ಸುಧಾಕರ ಸಿನಿಮಾದ ಮೂಲಕ ನಾಯಕ ನಟನಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ನಂತರ 1989ರಲ್ಲಿ ಬಿಡುಗಡೆಗೊಂಡ ನಂಜುಂಡಿ ಕಲ್ಯಾಣ ಸಿನಿಮಾ ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಬಹುದೊಡ್ಡ ಹಿಟ್ ಜೊತೆಗೆ ನೇಮ್ ಹಾಗೂ ಫ್ರೇಮ್ ತಂದುಕೊಟ್ಟಿತ್ತು.

ಇಲ್ಲಿಯವರೆಗೂ ರಾಘವೇಂದ್ರ ರಾಜ್‍ಕುಮಾರ್ ಅವರು 23 ಸಿನಿಮಾಗಳಲ್ಲಿ ಅಭಿನಯಿಸಿದ್ದು, ಸಾಕಷ್ಟು ಗೀತೆಗಳನ್ನು ಹಾಡಿದ್ದಾರೆ ಮತ್ತು 5 ಸಿನಿಮಾಗಳನ್ನು ನಿರ್ಮಿಸಿದ್ದಾರೆ. 2019ರಲ್ಲಿ ತೆರೆ ಕಂಡ ಅಮ್ಮನ ಮನೆ ಸಿನಿಮಾಕ್ಕಾಗಿ ರಾಘವೇಂದ್ರ ರಾಜ್‍ಕುಮಾರ್ ಅವರು ಉತ್ತಮ ನಟರಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿದ್ದಾರೆ. ಇದನ್ನೂ ಓದಿ: ಅ.21ರಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ – ಶಿಕ್ಷಣ ಇಲಾಖೆಯಿಂದ ಎಸ್‍ಒಪಿ ಜಾರಿ

ragavendra rajkumar

ಇದೀಗ ರಾಘವೇಂದ್ರ ರಾಜ್‍ಕುಮಾರ್ ಅವರ ಸಾಧನೆ ಮೆಚ್ಚಿ ‘ದಾದಾ ಸಾಹೇಬ್ ಫಾಲ್ಕೆ ಎಂಎಸ್‍ಕೆ ಟ್ರಸ್ಟ್’ ವತಿ ಜೀವಮಾನ ಸಾಧನೆ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ.

Related Articles

Leave a Reply

Your email address will not be published. Required fields are marked *