– ನಾವಿಬ್ಬರು ಅವನನ್ನು ಕಳುಹಿಸಿಕೊಡಬೇಕಾಯ್ತು
ಬೆಂಗಳೂರು: ಪುನೀತ್‍ರಾಜ್‍ಕುಮಾರ್ ಅವರನ್ನು ಕಳೆದುಕೊಂಡಿರುವುದು ಅಭಿಮಾನಿಗಳು ಸೇರಿದಂತೆ ರಾಜ್‍ಕುಟುಂಬಕ್ಕೆ ಮರೆಯಲಾಗದ ನೋವಾಗಿದೆ. ನಿನ್ನೆ ನಡೆದ ಪುನೀತ್ ನುಡಿ ನಮನ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಭಾವನಾತ್ಮಕವಾಗಿ ಮಾತನಾಡಿ ಕಣ್ಣೀರು ಹಾಕಿದ್ದಾರೆ.
Advertisement
ಫಿಲ್ಮ್ ಚೇಂಬರ್ ಆಯೋಜಿಸಿದ್ದ ಪುನೀತ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವೆಲ್ಲರೂ ಸೇರಿ ನನಗೊಂದು ಸಹಾಯ ಮಾಡಿ. ನನ್ನನ್ನು ಕಳಿಸಿಕೊಟ್ಟು ಅವನನ್ನು ವಾಪಸ್ ಕರೆಸಿಕೊಳ್ಳಿ ಪ್ಲೀಸ್. ಪುನೀತ್ ಅವರನ್ನು ಹೂತಿಲ್ಲ, ಬಿತ್ತಿದ್ದೇವೆ. ಮುಂದೆ ಪುನೀತ್ ರೀತಿ ಇರುವ ನೂರಾರು ಜನ ಹುಟ್ಟಿ ಬರುತ್ತಾರೆ. ಹುಟ್ಟುವಾಗ ನನ್ನ ತಮ್ಮನಾಗಿ ಬಂದ. ವಾಪಸ್ ಹೋಗುವಾಗ ತಂದೆಯಾಗಿ ಹೋದ. ಹೇಗೆ ಬದುಕಬೇಕು ಎಂಬುದನ್ನು ನನಗೂ ಮತ್ತು ಶಿವಣ್ಣನಿಗೂ ತಿಳಿಸಿಕೊಟ್ಟು ಹೋದ. ದಯವಿಟ್ಟು ಬಂದುಬಿಡು ಕಂದಾ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ- ಸಿಎಂ ಘೋಷಣೆ
Advertisement
Advertisement
ಇಷ್ಟು ದಿನ ಈ ನೋವನ್ನು ತಡೆದುಕೊಂಡಿದ್ದೆ. ನಾನು ಕಣ್ಣೀರು ಹಾಕಿದರೆ ಅಪ್ಪು ಪತ್ನಿ ಅಶ್ವಿನಿ, ಮಕ್ಕಳು ನೊಂದುಕೊಳ್ಳುತ್ತಾರೆ. ನನಗೆ ಮತ್ತು ಶಿವಣ್ಣನಿಗೆ ಮುಖ ನೋಡಿಕೊಳ್ಳಲು ನಾಚಿಕೆಯಾಗುತ್ತಿದೆ. ನಾವು ಅವನನ್ನು ಕಳುಹಿಸಿ ಕೊಡಬೇಕಾಯಿತಲ್ಲ. ಇಂಥಹ ಒಂದು ದಿನ ಬೇಕಾ? ಎಂದು ನಮಗೆ ಬೇಸರವಾಯಿತು. ನಮ್ಮ ದುಃಖವನ್ನು ಹೇಳಿಕೊಳ್ಳೋಣ ಎಂದರೆ ಅಪ್ಪುನನ್ನು ಅಪ್ಪ, ಅಮ್ಮನ ಹತ್ತಿರವೇ ಮಲಗಿಸಿ ಬಿಟ್ಟೆವು. ನಿನ್ನ ಜಾಗಕ್ಕೆ ನಾನು ಬರುತ್ತೇನೆ ವಾಪಸ್ ಬಂದು ಬಿಡು. ಈ ನೋವು ಮರೆಯುವ ಶಕ್ತಿ ಕೊಡು ಅಂತ ದೇವರಲ್ಲಿ ಕೇಳಲ್ಲ. ಈ ನೋವಿನ ಜೊತೆಗೆ ಬದುಕುವ ಶಕ್ತಿ ಕೊಡು ಅಂತ ಕೇಳುತ್ತೇನೆ. ಅವನು ನನ್ನ ಎದೆಯೊಳಗೆ ಇದ್ದಾನೆ ಎಂದು ರಾಘವೇಂದ್ರ ರಾಜ್‍ಕುಮಾರ್ ಹೇಳಿದರು. ಈ ಮಾತನ್ನು ಕೇಳುತ್ತಿದ್ದ ಶಿವರಾಜ್‍ಕುಮಾರ್ ಅವರು ಬಿಕ್ಕಿ ಬಿಕ್ಕಿ ಅತ್ತರು. ಇದನ್ನೂ ಓದಿ: ʼಅಪ್ಪುʼಗೆ ನನ್ನ ದೃಷ್ಟಿಯೇ ತಾಗಿತೇನೊ ಅನಿಸುತ್ತೆ: ತಮ್ಮನ ನೆನೆದು ಶಿವಣ್ಣ ಕಣ್ಣೀರು