ಬೆಂಗಳೂರು: ದಿ. ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಕಿರುತೆರೆ ಕಲಾವಿದರು, ತಂತ್ರಜ್ಞರು ಕಾರ್ಯಕ್ರಮವೊಂದನ್ನು ಆಯೋಜಸಿ ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಈ ವೇಳೆ ರಾಘವೇಂದ್ರ ರಾಜ್‍ಕುಮಾರ್ ಅವರು ಅಪ್ಪು ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
Advertisement
ರಾಘಣ್ಣ ಮಾತಾಡಿ, ಅಪ್ಪು ಏಕೆ ಇಷ್ಟು ಬೇಗ ಹೋದ 1 ತಿಂಗಳಿಂದ ಎಲ್ಲರಿಗೂ ಪ್ರಶ್ನೆಯಾಗಿದೆ. ಕೋಟ್ಯಾಧಿಪತಿ ಆರಂಭದ ವೇಳೆ ನನಗೆ ಭಯವಾಗುತ್ತೆ ಕಾರ್ಯಕ್ರಮ ಬಿಟ್ಟುಬಿಡ್ತಿನಿ ಅಂತಾ ಹೇಳಿದ್ದ. ಅಪ್ಪು ಹೆಚ್ಚು ಖ್ಯಾತಿ ಟಿವಿಯೂ ಕಾರಣ. ಅಪ್ಪು ಮ್ಯಾರಥಾನ್ ಓಡಬೇಕಿದ್ದವನು 100 ಮೀ ರೇಸ್‍ಗೆ ಎಲ್ಲವನ್ನ ಮುಗಿಸಬಿಟ್ಟ. ಕೋಟ್ಯಂತರ ದುಡ್ಡು, ಕಾರು ಇದ್ದರು ಎಕ್ಸಟ್ರಾ 5 ನಿಮಿಷ ಹೆಚ್ಚಾಗಿ ಇರಲಿಲ್ಲ. ಆಂಬ್ಯುಲೇನ್ಸ್ ಕರೆಸಿದ್ದರೆ ಲೇಟ್ ಆಗುತ್ತೆ ಅಂತಾ ಕಾರಲ್ಲಿ ಹೊರಟಿದ್ದೇವು. ಅಂಬ್ಯುಲೇನ್ಸ್ ಡಿಜಿಟಲ್ ಕಾರಣ ಆಗಬೇಕು. ಹಂದಿಯಾಗಿ ಬದುಕುವ ಬದಲು ಕೆಲವು ವರ್ಷ ನಂದಿಯಾಗಿ ಬದುಕಬೇಕು ಅಂತಾ ತೋರಿಸಿದ್ದಾನೆ. ಈಗಾಗಲೇ ಮತ್ತೊಂದು ಕಡೆ ಅಪ್ಪು ಹುಟ್ಟಿದ್ದಾನೆ ಅಂತ ಅನ್ನಿಸುತ್ತಿದೆ ಎಂದಿದ್ದಾರೆ. ಕರ್ನಾಟಕ ರತ್ನ ಅಪ್ಪು ಅಗಲಿ ನಾಳೆಗೆ 1 ತಿಂಗಳು- ಸಮಾಧಿಗೆ ಕುಟುಂಬಸ್ಥರಿಂದ ಪೂಜೆ
Advertisement
ಅಪ್ಪು ನಮ್ಮ ತಂದೆಯಂತೆ, ನನಗಿಲ್ಲದ ಹಲವು ಒಳ್ಳೆ ಗುಣಗಳು ಇವನಲಿತ್ತು. ಅಪ್ಪು ಸಾವನ್ನಪ್ಪಿದ್ದಕ್ಕೆ ನಾಲ್ಕರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವಾರು ಜನ ಹಲವು ರೀತಿ ವಿಭಿನ್ನವಾಗಿ ಆ ವೇಳೆ ನಡೆದುಕೊಂಡಿದ್ದಾರೆ. ಇದೆನ್ನಲ್ಲ ನೋಡಿದರೆ ಜನ ಅವನನ್ನ ಎಷ್ಟು ಪ್ರೀತಿಸುತ್ತಿದ್ದಾರೆ ಅಂತಾ ತಿಳಿಯುತ್ತದೆ. ಈಗಾಗಲೇ ಮತ್ತೊಂದು ಕಡೆ ಅಪ್ಪು ಹುಟ್ಟಿದ್ದಾನೆ ಅಂತ ಅನ್ನಿಸುತ್ತಿದೆ. ಇನ್ನೊಂದು ಎರಡು ವರ್ಷ ಇದ್ದರೆ ಏನೆಲ್ಲ ಮಾಡುತ್ತಿದ್ದನೋ. ಇಬ್ಬರು ಅಣ್ಣಂದರಿಗೆ ಒಳ್ಳೆ ಕಾರ್ಯಗಳನ್ನ ಮಾಡಿ ಅಂತ ನಮಗೆ ದಾರಿ ತೋರಿಸಿ ಹೋಗಿದ್ದೇನೆ. ನಾನು ಅಪ್ಪುವನ್ನು ತಬ್ಬಿಕೊಳ್ಳುತ್ತಿದ್ದೆ, ಆದರೆ ಇನ್ನು ಮುಂದೆ ಅಪ್ಪುವಿಗೆ ಸೆಲ್ಯೂಟ್ ಮಾಡುತ್ತೇನೆ ಎಂದು ಹೇಳುತ್ತಾ ಭಾವುಕರಾಗಿದ್ದಾರೆ. ಇದನ್ನೂ ಓದಿ: ಕಟೀಲ್ ಅಸಂಬದ್ಧ ಹೇಳಿಕೆ ನೀಡ್ತಾನೆ: ಏಕವಚನದಲ್ಲಿ ಸತೀಶ್ ಜಾರಕಿಹೊಳಿ ವಾಗ್ದಾಳಿ