DistrictsKarnatakaLatestMain PostRaichur

ಮಂತ್ರಾಲಯದಲ್ಲಿ ಕಾರ್ತಿಕ ಮಾಸಾಚರಣೆ – ವಿಶೇಷ ವನಭೋಜನ

ರಾಯಚೂರು: ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಾನ ಮಂತ್ರಾಲಯ (Mantralaya) ರಾಯರ ಮಠದಲ್ಲಿ (Raghavendra Mutt) ಕಾರ್ತಿಕ ಮಾಸದ ಆಚರಣೆ ಸಂಭ್ರಮ ಜೋರಾಗಿದೆ. ಅಭಯ ಆಂಜನೇಯ ಸ್ವಾಮಿ ಸನ್ನಿಧಾನದಲ್ಲಿ ವನ ಭೋಜನ ಅಂಗವಾಗಿ ಶ್ರೀ ಬ್ರಹ್ಮ ಕರಾರ್ಚಿತ ಮೂಲರಾಮದೇವರ ಪೂಜೆಯನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ (Subudhendra Teertha Swamiji) ನೆರವೇರಿಸಿದರು.

ಸಂಸ್ಥಾನ ಪೂಜೆಯ ನಂತರ ಶ್ರೀ ಅಭಯ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವನ ಭೋಜನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಶ್ರೀ ಮಠದ ಸಿಬ್ಬಂದಿ ಮತ್ತು ಮಂತ್ರಾಲಯದ ಸ್ಥಳೀಯರು ಭಾಗವಹಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿದರು. ಇದನ್ನೂ ಓದಿ: `ಕಾಂತಾರ’ ಸಿನಿಮಾ ನನ್ನದೇ: ರಿಷಬ್ ಸಿನಿಮಾ ಬಗ್ಗೆ ಯಶ್ ಪ್ರತಿಕ್ರಿಯೆ

ನವೆಂಬರ್ 8 ಮಂಗಳವಾರ ಕಾರ್ತಿಕ ಪೌರ್ಣಿಮಾ ದಿನ ನಡೆಯಬೇಕಿದ್ದ ತುಂಗಾ ಆರತಿ ಕಾರ್ಯಕ್ರಮವನ್ನು ಚಂದ್ರಗ್ರಹಣ ಇರುವುದರಿಂದ ಇಂದು ಮಂತ್ರಾಲಯದಲ್ಲಿ ಆಚರಿಸಲಾಯಿತು. ಇಂದು ರಾತ್ರಿ ವೇಳೆ ನಡೆಯುವ ಕಾರ್ಯಕ್ರಮಕ್ಕಾಗಿ ಮಠದಲ್ಲಿ ಅಗತ್ಯ ಸಿದ್ಧತೆಗಳನ್ನು ನಡೆಸಲಾಗಿದೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪ ಈಗ 10 ಟನ್ ಚಿನ್ನ, 15 ಸಾವಿರ ಕೋಟಿಯ ಒಡೆಯ

Live Tv

Leave a Reply

Your email address will not be published. Required fields are marked *

Back to top button