ಚೆನ್ನೈ: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಈಗಾಗಲೇ ಅನೇಕ ನಟ-ನಟಿಯರು ಹಣದ ಸಹಾಯವನ್ನು ಮಾಡಿದ್ದಾರೆ. ಇದೀಗ ನೃತ್ಯ ನಿರ್ದೇಶಕ, ನಟ, ರಾಘವ್ ಲಾರೆನ್ಸ್ ತಮಗೆ ಮುಂಗಡವಾಗಿ ಬಂದಿದ್ದ ಮೂರು ಕೋಟಿ ಹಣವನ್ನು ಕೋವಿಡ್-19 ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.
ರಾಘವ ಲಾರೆನ್ಸ್ ಅವರು ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಅನೇಕ ಸಮಾಜಮುಖಿ ಕೆಲಸ ಹಾಗೂ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಟ್ರಸ್ಟ್ 15ನೇ ವರ್ಷಕ್ಕೆ ಕಾಲಿಟ್ಟುತ್ತಿದೆ. ಇದನ್ನು ಸಂಭ್ರಮಿಸಲು ಮಂಗಳಮುಖಿಯರಿಗಾಗಿ ಮನೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಟ್ರಸ್ಟ್ ಮೂಲಕ ಮಂಗಳಮುಖಿಯರಿಗಾಗಿ ಮನೆ ಕಟ್ಟಲು ಭೂಮಿಯನ್ನು ನೀಡಿದ್ದಾರೆ. ಇಷ್ಟೆಲ್ಲಾ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ರಾಘವ ಈಗ ಕೊರೊನಾ ಪರಿಹಾರ ನಿಧಿಗೂ ದೇಣಿಗೆ ನೀಡುವ ಮೂಲಕ ಮಾನವೀಯತೆ ಮರೆದಿದ್ದಾರೆ.
Advertisement
Advertisement
ನಟ ರಾಘವ್ ಲಾರೆನ್ಸ್ ತಮಗೆ ಅಡ್ವಾನ್ಸ್ ಆಗಿ ಬಂದಿದ್ದ ಮೂರು ಕೋಟಿ ಹಣವನ್ನು ಕೊರೊನಾ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ. ನಟ ರಾಘವ ಲಾರೆನ್ಸ್‌ಗೆ ರಜನಿಕಾಂತ್ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ರಾಘವ ‘ಚಂದ್ರಮುಖಿ-2’ ಸಿನಿಮಾದಲ್ಲಿ ರಜನಿಕಾಂತ್ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಅಡ್ವಾನ್ಸ್ ರೂಪದಲ್ಲಿ ರಾಘವ ಲಾರೆನ್ಸ್‌ಗೆ ಮೂರು ಕೋಟಿ ಹಣ ನೀಡಲಾಗಿತ್ತು. ಇದೀಗ ಅದೇ ಹಣವನ್ನು ರಾಘವ ಕೊರೊನಾ ವಿರುದ್ಧ ಹೋರಾಟಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಈ ಬಗ್ಗೆ ರಾಘವ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.
Advertisement
“ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮೆಲ್ಲರೊಂದಿಗೆ ಸಂತೋಷದ ಸುದ್ದಿ ಹಂಚಿಕೊಳ್ಳಲು ನಾನು ಬಯಸುತ್ತೇನೆ. ನನ್ನ ಮುಂದಿನ ಪ್ರಾಜೆಕ್ಟ್‌ನಲ್ಲಿ ರಜನಿಕಾಂತ್ ಅವರ ‘ಚಂದ್ರಮುಖಿ 2’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ಈ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಹೀಗಾಗಿ ಈ ಸಿನಿಮಾಗಾಗಿ ಮುಂಗಡವಾಗಿ ಪಡೆದುಕೊಂಡಿರುವ ಮೂರು ಕೋಟಿ ಹಣವನ್ನು ನಾನು ಕೊರೊನಾ ವೈರಸ್ ಪರಿಹಾರ ನಿಧಿಗೆ ನೀಡುತ್ತಿದ್ದೇನೆ” ಎಂದು ಹೇಳಿದ್ದಾರೆ.
Advertisement
https://www.facebook.com/offllawrence/photos/a.784659494979754/2618139101631775/?type=3&theater
ಪಿಎಂ ಕೇರ್ಸ್ ನಿಧಿಗೆ 50 ಲಕ್ಷ, ತಮಿಳುನಾಡಿನ ಸಿಎಂ ಪರಿಹಾರ ನಿಧಿಗೆ 50 ಲಕ್ಷ, ಸಿನಿಮಾ ಒಕ್ಕೂಟಕ್ಕೆ 50 ಲಕ್ಷ, ನನ್ನ ಡ್ಯಾನ್ಸರ್ ಒಕ್ಕೂಟಕ್ಕೆ 50 ಲಕ್ಷ, ಅಂಗವಿಕಲ ಮಕ್ಕಳ ಕಲ್ಯಾಣಕ್ಕೆ 25 ಲಕ್ಷ ಮತ್ತು ನನ್ನ ಹುಟ್ಟೂರು ರಾಯಪುರಂ, ದೇಸಿಯನಗರಕ್ಕೆ 75 ಲಕ್ಷ ನೀಡಲು ಬಯಸುತ್ತೇನೆ. ಈ ಹಣದಿಂದ ಅಲ್ಲಿನ ದೈನಂದಿನ ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ ಅಗತ್ಯವಾದ ಆಹಾರ ಪದಾರ್ಥಗಳನ್ನು ಪೊಲೀಸರ ಸಹಾಯದಿಂದ ತಲುಪಿಸಲಾಗುವುದು ಎಂದು ಬರೆದುಕೊಂಡಿದ್ದಾರೆ.