ನಟಿ ಪರಿಣಿತಿ- ರಾಘವ್ ಚಡ್ಡಾ ಎಂಗೇಜ್‌ಮೆಂಟ್‌ ಗ್ಯಾಲರಿ

Public TV
1 Min Read
parineethi chopra

ಬಾಲಿವುಡ್ (Bollywood) ಅಂಗಳದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಬ್ಬರ ಹಿಂದೆ ಮತ್ತೊಬ್ಬರು ಹಸೆಮಣೆ ಏರುತ್ತಿದ್ದಾರೆ. ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ, ಸಿದ್- ಕಿಯಾರಾ ಜೋಡಿ ಇತ್ತೀಚಿಗೆ ಮದುವೆಯಾಗಿದ್ದರು. ಇದೀಗ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದರು. ಇದೀಗ ಎಂಗೇಜ್‌ಮೆಂಟ್ ಸಂಭ್ರಮ ಹೇಗಿತ್ತು ಎಂಬ ಮತ್ತೊಂದಿಷ್ಟು ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.

Parineeti Chopra 2

ನಟಿ ಪರಿಣಿತಾ ಚೋಪ್ರಾ (Parineeti Chopra) ಬಾಲಿವುಡ್‌ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಸೌಂದರ್ಯ- ಪ್ರತಿಭೆ ಎರಡು ಇದ್ದರೂ ಒಳ್ಳೆಯ ಸಿನಿಮಾಗಳು ಪರಿಣಿತಿ ಚೋಪ್ರಾಗೆ ಸಿಗುತ್ತಿಲ್ಲ. ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ.

 

View this post on Instagram

 

A post shared by @parineetichopra

ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಇಬ್ಬರು ಲಂಡನ್‌ನಲ್ಲಿ ಒಟ್ಟಿಗೆ ಓದಿದ್ದರು. ಹಾಗಾಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಮೇ 13ರಂದು ದೆಹಲಿಯಲ್ಲಿ ಎಂಗೇಜ್‌ಮೆಂಟ್ (Engagement) ಮಾಡಿಕೊಂಡರು. ಈ ಸಂಭ್ರಮದಲ್ಲಿ ಸಹೋದರಿ ಪ್ರಿಯಾಂಕಾ ಚೋಪ್ರಾ (Priyanka Chopra) ಕೂಡ ಭಾಗಿಯಾಗಿದ್ದರು.

 

View this post on Instagram

 

A post shared by @parineetichopra

ಸದ್ಯ ರಾಘವ್- ಪರಿಣಿತಿ ಚೋಪ್ರಾ ನಿಶ್ಚಿತಾರ್ಥದ ಫೋಟೋಗಳು ಎಲ್ಲೆಡೆ ಸದ್ದು ಮಾಡ್ತಿದೆ. ಹೊಸ ಜೋಡಿಗೆ ಫ್ಯಾನ್ಸ್ ಶುಭಹಾರೈಸಿದ್ದಾರೆ.

Share This Article