ನವದೆಹಲಿ: ಲೋಕಸಭಾ ಚುನಾವಣೆಯ ಸಮಯದಲ್ಲಿ ರಫೇಲ್ ಯುದ್ಧ ವಿಮಾನ ಖರೀದಿಯ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಕೈ ನಾಯಕರು ಆರೋಪಿಸಿದ್ದರು. ಈಗ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲೇ ರಫೇಲ್ ವಿಮಾನದ ಮಾದರಿಯನ್ನು ನಿಲ್ಲಿಸಲಾಗಿದೆ.
ಹೌದು, ಕಾಂಗ್ರೆಸ್ ಕೇಂದ್ರ ಕಚೇರಿ ಎದುರೇ ರಫೇಲ್ ಮಾದರಿಯನ್ನು ನಿಲ್ಲಿಸಲಾಗಿದ್ದು, ಈ ಸಂಬಂಧ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಕಾಂಗ್ರೆಸ್ ನಾಯಕರನ್ನು ಕಾಲೆಳೆಯುತ್ತಿದ್ದಾರೆ. ಇದನ್ನೂ ಓದಿ: ರಫೇಲ್ ಡೀಲ್ – ಯಾವುದು ಅಗ್ಗ? ಯಾವುದು ದುಬಾರಿ?
Advertisement
ನವದೆಹಲಿಯ ಅಕ್ಬರ್ ರೋಡ್‍ನಲ್ಲಿ ವಾಯುಸೇನೆ ಮುಖ್ಯಸ್ಥರ ಬಿ.ಎಸ್ ಧನೋವಾ ಅವರ ಅಧಿಕೃತ ನಿವಾಸವಿದೆ. ಅವರ ಮನೆಯ ಮುಂದೆ ರಫೆಲ್ ಮಾದರಿಯನ್ನು ನಿಲ್ಲಿಸಲಾಗಿದೆ. ಬಿ.ಎಸ್ ಧನೋವಾ ಅವರ ನಿವಾಸ ಎದುರೇ ಕಾಂಗ್ರೆಸ್ ಕಚೇರಿ ಇದ್ದು, ಕಚೇರಿಯಿಂದ ಹೊರ ಬಂದರೆ ಸಾಕು ರಫೇಲ್ ಮಾದರಿ ಕಾಣುತ್ತದೆ.
Advertisement
Replica of Rafale jet erected outside Air Chief Marshal BS Dhanoa’s residence in Delhi. His residence is next to Congress Headquarters. pic.twitter.com/Icoo63G2At
— ANI (@ANI) May 31, 2019
Advertisement
1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಮುಯದಲ್ಲಿ ಬಿ.ಎಸ್.ಧನೋವಾ ಅವರು ವಾಯುಸೇನೆಯ ಗೋಲ್ಡನ್ ಆಯರೋಸ್ 17 ಸ್ಕ್ವಾರ್ಡನ್ ವಿಭಾಗವನ್ನು ಮುನ್ನಡೆಸಿದ್ದರು. ಪರೀಕ್ಷಾರ್ಥ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಬರಲಿರುವ ರಫೇಲ್ ಯುದ್ಧ ವಿಮಾನವನ್ನು ಅದೇ ವಿಭಾಗಕ್ಕೆ ಹಸ್ತಾಂತರಿಸಲಾಗುತ್ತಿದೆ. ಹೀಗಾಗಿ ಬಿ.ಎಸ್.ಧನೋವಾ ಅವರು ತಮ್ಮ ನಿವಾಸ ಮುಂದೆ ರಫೇಲ್ ಮಾದರಿ ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ.
Advertisement
ರಫೇಲ್ ಒಪ್ಪಂದದ ಪ್ರಕಾರ ಫ್ರಾನ್ಸ್ ಮೊದಲ ಹಂತದ ಯುದ್ಧ ವಿಮಾನಗಳನ್ನು ಸೆಪ್ಟೆಂಬರ್ ನಲ್ಲಿ ಹಸ್ತಾಂತರಿಸಲಿದೆ. ಪರೀಕ್ಷಾರ್ಥ ಹಾರಾಟದ ಬಳಿಕ ರಫೇಲ್ ಯುದ್ಧ ವಿಮಾನಗಳು 2020 ಮೇ ನಲ್ಲಿ ಅಧಿಕೃತವಾಗಿ ವಾಯುಸೇನೆ ಸೇರಲಿವೆ.
Video of the Congress HQs in Delhi which now has a #Rafale jet staring towards it for at least next few years. The Chief of Air Staff Air Chief Marshal BS Dhanoa has erected a #Rafale jet outside his residence. Proud moment for the Air Force and the country! pic.twitter.com/bHmwb44ejU
— Aditya Raj Kaul (@AdityaRajKaul) May 31, 2019
ರಫೇಲ್ ಡಿಲ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 30 ಸಾವಿರ ಕೋಟಿ ರೂ. ಕಳ್ಳತನ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದರು. ಅಷ್ಟೇ ಅಲ್ಲದೆ ನರೇಂದ್ರ ಮೋದಿ ಕಳ್ಳ ಎಂದು ಸುಪ್ರೀ ಕೋರ್ಟ್ ಹೇಳಿದೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಬಿಜೆಪಿ ಮುಖಂಡೆ ಮೀನಾಕ್ಷಿ ಲೇಖಿ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ಕ್ಲಾಸ್ ತೆಗೆದುಕೊಂಡಿತ್ತು. ಕೊನೆಗೆ ರಾಹುಲ್ ಗಾಂಧಿ ಸುಪ್ರೀಂನಲ್ಲಿ ಈ ಹೇಳಿಕೆ ಸಂಬಂಧ ಕ್ಷಮೆ ಕೋರಿದ್ದರು.