ನವದೆಹಲಿ: ಬಹುಕೋಟಿ ರಫೆಲ್ ಯುದ್ಧ ವಿಮಾನ ಖರೀದಿಗಾಗಿ ಮಧ್ಯವರ್ತಿ ಸುಸೇನ್ ಗುಪ್ತಾಗೆ ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ 64 ಕೋಟಿ ರೂಪಾಯಿ ಲಂಚ ನೀಡಿತ್ತು ಎಂಬ ಸ್ಫೋಟಕ ವರದಿಯನ್ನು ಫ್ರಾನ್ಸ್ ನ ಮೀಡಿಯಾಪಾರ್ಟ್ ಸಂಸ್ಥೆ ಬಿಚ್ಚಿಟ್ಟಿದೆ.
Advertisement
ಈ ಲಂಚ ಸಂದಾಯದ ಬಗ್ಗೆ ಮಾರಿಷಸ್‍ನ ಅಟಾರ್ನಿ ಜನರಲ್ ಅವರೇ ಖುದ್ದು ಪತ್ರ ಬರೆದಿದ್ದರೂ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿಲ್ಲ ಎಂಬ ಅಂಶ ವರದಿಯಲ್ಲಿ ಉಲ್ಲೇಖವಾಗಿದೆ. 36 ರಫೆಲ್ ಯುದ್ಧ ವಿಮಾನಗಳ ಡೀಲ್ ಕುದುರಿಸುವ ಸಲುವಾಗಿ 2009ರಿಂದ 2012ರ ಅವಧಿಯಲ್ಲಿ ಮಾರಿಷಸ್‍ನಲ್ಲಿರುವ ಗುಪ್ತಾಗೆ ಸೇರಿದ ಕಂಪನಿ ಇಂಟರ್‍ಸ್ಟೆಲರ್ ಮೂಲಕ ಕಮಿಷನ್ ಪಾವತಿ ಮಾಡಲಾಗಿತ್ತು ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: 60 ಸಾವಿರ ಕೋಟಿ ರಫೇಲ್ ಡೀಲ್‍ನಲ್ಲಿ ಕೋಟಿ ಕೋಟಿ ಗಿಫ್ಟ್ ಸಿಕ್ಕಿದ್ಯಾರಿಗೆ – ಕಾಂಗ್ರೆಸ್ ಪ್ರಶ್ನೆ
Advertisement
Advertisement
ಬೋಗಸ್ ಬಿಲ್‍ಗಳ ಮೂಲಕ ಈ ಹಣ ವರ್ಗಾವಣೆ ಮಾಡಲಾಗಿತ್ತು. ರಫೆಲ್ ಡೀಲ್ ಮೇಲೆ ಪ್ರಭಾವ ಬೀರುವ ಸಲುವಾಗಿ ಫ್ರಾನ್ಸ್ ಥೇಲ್ಸ್ ಕಂಪನಿ ಕೂಡಾ ಗುಪ್ತಾಗೆ ಕಮಿಷನ್ ಸಂದಾಯ ಮಾಡಿತ್ತು. 2018ರಲ್ಲೇ ಈ ಅಕ್ರಮದ ಬಗ್ಗೆ ದಾಖಲೆಗಳಿದ್ದರೂ ಸಿಬಿಐ ಮತ್ತು ಇಡಿ ತನಿಖೆ ನಡೆಸಲಿಲ್ಲ ಎಂದು ಮೀಡಿಯಾ ಪಾರ್ಟ್ ವರದಿಯಲ್ಲಿ ಉಲ್ಲೇಖೆಸಿದೆ. ಇದನ್ನೂ ಓದಿ: ರಫೇಲ್ ಡೀಲ್‍ನಲ್ಲಿ ನಿಮಗೆ ಎಷ್ಟು ಕಮೀಷನ್ ಸಿಕ್ಕಿದೆ: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ
Advertisement
ಈ ಹಿಂದೆ ಕೂಡ ಮೀಡಿಯಾಪಾರ್ಟ್ ವರದಿ ಮಾಡಿರುವ ಪ್ರಕಾರ, 2016ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಯುದ್ಧ ವಿಮಾನ ಖರೀದಿ ವ್ಯವಹಾರ ನಡೆದಿತ್ತು. ಆ ವೇಳೆ ಫ್ರಾನ್ಸಿನ ಡಸಾಲ್ಟ್ ಏವಿಯೇಷನ್ ಭಾರತದ ಓರ್ವ ಮಧ್ಯವರ್ತಿಗೆ 1.1 ಮಿಲಿಯನ್ ಯುರೋ ಗಿಫ್ಟ್ ರೂಪದಲ್ಲಿ ನೀಡಿದೆ. 2017ರ ಡಸಾಲ್ಟ್ ಸಮೂಹದ ಲೆಕ್ಕ ಪತ್ರಗಳನ್ನ ಪರಿಶೀಲಿಸಿದಾಗ ಮಧ್ಯವರ್ತಿ ಗ್ರಾಹಕರಿಗೆ ಗಿಫ್ಟ್ ರೂಪದಲ್ಲಿ 1.1 ಮಿಲಿಯನ್ ವರ್ಗಾವಣೆ ಆಗಿರೋದು ಬೆಳಕಿಗೆ ಬಂದಿದೆ ಎಂದು ತಿಳಿಸಿತ್ತು. ಇದನ್ನೂ ಓದಿ: ಕೈ ಅವರದು, ಕಾಲು ಅವರದು, ಎಲ್ಲಾದರೂ ಇಟ್ಟುಕೊಳ್ಳಲಿ: ಹ್ಯಾರಿಸ್