ಆಮಸ್ಟರ್‌ಡ್ಯಾಂ: ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ ಸ್ಪೇನ್‌ನ (Spain) ಟೆನಿಸ್ ದಿಗ್ಗಜ ರಫೆಲ್ ನಡಾಲ್ (Rafael Nadal) ತಮ್ಮ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.
ಕಿಂಗ್ ಆಫ್ ಕ್ಲೇ ಎಂದೇ ಪ್ರಸಿದ್ಧಿಯಾಗಿರುವ ರಫೆಲ್ ನಡಾಲ್ ನ.19 ರಂದು ನಡೆದ ನೆದರ್‌ಲ್ಯಾಂಡ್ (Netherland) ವಿರುದ್ಧದ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದರು. ಈ ಮೂಲಕ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದರು.ಇದನ್ನೂ ಓದಿ: ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಅಂಬುಲೆನ್ಸ್ ಪಲ್ಟಿ
Advertisement
Advertisement
ನಿವೃತ್ತಿ ಘೋಷಿಸಿದ ಬಳಿಕ ಸ್ಪ್ಯಾನಿಷ್ ರಾಷ್ಟ್ರಗೀತೆಯ ಸಂದರ್ಭದಲ್ಲಿ ರಫೆಲ್ ಭಾವುಕರಾದರು. ಇನ್ನೂ 10,000ಕ್ಕೂ ಹೆಚ್ಚು ಅಭಿಮಾನಿಗಳು “ರಾಫಾ, ರಾಫಾ” ಎಂದು ಕೂಗಿ ಹುರಿದುಂಬಿಸಿದರು.
Advertisement
ಈ ಕುರಿತು ರಫೆಲ್ ಮಾತನಾಡಿ, ಇಂದು ನನ್ನ ಭಾವನಾತ್ಮಕ ದಿನ, ವೃತ್ತಿಪರನಾಗಿ ಇಂದು ನನ್ನ ಕೊನೆಯ ಪಂದ್ಯ. ಕೊನೆಯ ಬಾರಿ ಈ ರೀತಿಯಾಗಿ ರಾಷ್ಟ್ರಗೀತೆಯನ್ನು ಕೇಳುವುದು ಒಂದು ವಿಶೇಷ ಭಾವನೆ ಎಂದು ತಿಳಿಸಿದರು.
Advertisement
2004ರಲ್ಲಿ ವೃತ್ತಿಜೀವನಕ್ಕೆ ಕಾಲಿಟ್ಟ ರಫೆಲ್ 30 ಡೇವಿಸ್ ಕಪ್ ಸಿಂಗಲ್ಸ್ ಪಂದ್ಯಗಳಲ್ಲಿ 29 ಪಂದ್ಯಗಳನ್ನು ಗೆದ್ದಿದ್ದಾರೆ. ಇನ್ನೂ ನೆದರ್‌ಲ್ಯಾಂಡ್ ವಿರುದ್ಧದ ಆಡಿದ ಕೊನೆಯ ಪಂದ್ಯದಲ್ಲಿ 6-4, 6-4 ಅಂತರದಲ್ಲಿ ಸೋಲನುಭವಿಸಿದರು.ಇದನ್ನೂ ಓದಿ: ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಮಹಾ ತಿರುವು- ಕಾವೇರಿ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಬಂದ ಕೀರ್ತಿ