Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Election News

ಗಾಂಧಿ ಕುಟುಂಬಕ್ಕೆ ರಾಯ್‌ಬರೇಲಿ ನಂಟು – ಇಲ್ಲಿದೆ ಕುತೂಹಲಕಾರಿ ಘಟ್ಟಗಳು

Public TV
Last updated: May 3, 2024 3:44 pm
Public TV
Share
3 Min Read
indira gandhi sonia gandhi rahul gandhi Raebareli
SHARE

ನವದೆಹಲಿ: ಗಾಂಧಿ ಕುಟುಂಬದ ಭದ್ರಕೋಟೆ ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ (Raebareli) ರಾಹುಲ್ ಗಾಂಧಿ (Rahul Gandhi) ಸ್ಪರ್ಧಿಸಿದ್ದಾರೆ. ಇಂದು ಸೋನಿಯ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಬರ್ಟ್ ವಾದ್ರಾ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ರಾಯ್‌ಬರೇಲಿ ಮತ್ತು ಅಮೇಥಿಯಿಂದ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಸಾಕಷ್ಟ ಚರ್ಚೆಯಾಗಿತ್ತು. ಅಂತಿಮವಾಗಿ ಇಂದು ಬೆಳಗ್ಗೆ ರಾಯ್‌ಬರೇಲಿಯಿಂದ ರಾಹುಲ್ ಗಾಂಧಿ, ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾ ಅವರ ಹೆಸರನ್ನು ಎಐಸಿಸಿ ಕಡೆಯಿಂದ ಘೋಷಿಸಲಾಯಿತು‌.

ರಾಹುಲ್ ಗಾಂಧಿ ರಾಯ್ ಬರೇಲಿಯಿಂದ ಸ್ಪರ್ಧಿಸುತ್ತಿರುವ ಗಾಂಧಿ ಕುಟುಂಬದ ಎಂಟನೇ ಸದಸ್ಯರಾಗಿದ್ದಾರೆ. ರಾಯ್‌ಬರೇಲಿಯಲ್ಲಿ ಮೊದಲ ಲೋಕಸಭೆ ಚುನಾವಣೆಯಿಂದ ಈವರೆಗೂ ಹಲವು ಏಳುಬೀಳುಗಳನ್ನು ನೋಡಿದೆ. ಆದಾಗ್ಯೂ ಕ್ಷೇತ್ರದ ಜನರು ಬಹುತೇಕ ಸಂದರ್ಭದಲ್ಲಿ ಗಾಂಧಿ ಕುಟುಂಬದ್ದೇ ಮೇಲುಗೈ ಮಾಡಿದ್ದಾರೆ. ಇದನ್ನೂ ಓದಿ: ರಾಯ್‌ಬರೇಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ರಾಹುಲ್‌ ಗಾಂಧಿ

rahul gandhi Raebareli

ರಾಯ್‌ಬರೇಲಿ ಲೋಕಸಭೆ ಚುನಾವಣಾ ಇತಿಹಾಸ ಸಾಕಷ್ಟು ಕುತೂಹಲಕಾರಿ ಘಟ್ಟಗಳನ್ನು ನೋಡಿದೆ. 1951-52 ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ರಾಯ್‌ಬರೇಲಿ ಮತ್ತು ಪ್ರತಾಪಗಢ ಜಿಲ್ಲೆಗಳನ್ನು ಒಳಗೊಂಡ ಒಂದು ಲೋಕಸಭಾ ಸ್ಥಾನವಿತ್ತು. ಇಂದಿರಾ ಗಾಂಧಿ ಅವರ ಪತಿ ಫಿರೋಜ್ ಗಾಂಧಿ ಅವರು ಇಲ್ಲಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 1957 ರಲ್ಲಿ ರಾಯ್‌ಬರೇಲಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ ಫಿರೋಜ್ ಗಾಂಧಿ ಮತ್ತೊಮ್ಮೆ ಇಲ್ಲಿಂದ ಸಂಸದರಾದರು. ಇಂದಿರಾ (Indira Gandhi) ಮತ್ತು ಫಿರೋಜ್ ಗಾಂಧಿ 1942 ರ ಮಾರ್ಚ್ 26 ರಂದು ವಿವಾಹವಾದರು.

1960 ರಲ್ಲಿ ಫಿರೋಜ್ ಗಾಂಧಿಯವರು ರಾಯ್‌ಬರೇಲಿಯಿಂದ ನಾಲ್ಕು ಚುನಾವಣೆಗಳಿಗೆ ಸ್ಪರ್ಧಿಸಿದರು. ನಂತರ ನಡೆದ ಉಪಚುನಾವಣೆ ಹಾಗೂ 1962 ರ ಚುನಾವಣೆಗಳಲ್ಲಿ ಗಾಂಧಿ ಕುಟುಂಬದ ಯಾರೂ ಇಲ್ಲಿಂದ ಸ್ಪರ್ಧಿಸಿರಲಿಲ್ಲ. 1962 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬೈಜನಾಥ ಕುರಿಲ್‌ ಜನಸಂಘದ ಅಭ್ಯರ್ಥಿ ತಾರಾವತಿ ಅವರನ್ನು ಸೋಲಿಸಿದ್ದರು. ಫಿರೋಜ್ ಗಾಂಧಿಯವರ ಮರಣದ ನಾಲ್ಕು ವರ್ಷಗಳ ನಂತರ ಇಂದಿರಾ ಗಾಂಧಿ 1964 ರಲ್ಲಿ ರಾಜ್ಯಸಭೆಯನ್ನು ತಲುಪಿದರು. ಇಂದಿರಾ 1967 ರವರೆಗೆ ರಾಜ್ಯಸಭಾ ಸಂಸದರಾಗಿದ್ದರು. 1966 ರಲ್ಲಿ ಇಂದಿರಾ ದೇಶದ ಮೊದಲ ಮಹಿಳಾ ಪ್ರಧಾನಿಯಾದಾಗಲೂ ರಾಜ್ಯಸಭಾ ಸದಸ್ಯೆಯಾಗಿದ್ದರು. 1967 ಇಂದಿರಾ ರಾಯ್‌ಬರೇಲಿ ಕ್ಷೇತ್ರದಿಂದ ಚುನಾವಣಾ ರಾಜಕೀಯ ಪ್ರವೇಶಿಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಇಂದಿರಾ ಅವರು ಸ್ವತಂತ್ರ ಅಭ್ಯರ್ಥಿ ಬಿ.ಸಿ.ಸೇಠ್ ಅವರನ್ನು 91,703 ಮತಗಳಿಂದ ಸೋಲಿಸಿದ್ದರು. ಇದನ್ನೂ ಓದಿ: ಅಮೇಥಿಯಲ್ಲಿ ಗಾಂಧಿ ಕುಟುಂಬಯೇತರ ಅಭ್ಯರ್ಥಿ – ಯಾರಿದು ಕಿಶೋರಿ ಲಾಲ್ ಶರ್ಮಾ?

SONIA GANDHI

1971ರ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದಿಂದ ಕಣದಲ್ಲಿದ್ದು, ಸಂಯುಕ್ತ ಸಮಾಜವಾದಿ ಪಕ್ಷದ ರಾಜ್ ನಾರಾಯಣ್ ಅವರನ್ನ 1,11,810 ಮತಗಳ ಅಂತರದಿಂದ ಸೋಲಿಸಿದರು. ಆದರೆ, ಇಂದಿರಾ ಗಾಂಧಿ ಅವರು ಸರ್ಕಾರಿ ಯಂತ್ರಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಚುನಾವಣಾ ರಿಗ್ಗಿಂಗ್ ಮಾಡಿದ್ದಾರೆ ಎಂದು ಆರೋಪಿಸಿ ರಾಜನಾರಾಯಣ್ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿದರು. ಅರ್ಜಿಯ ತೀರ್ಪನ್ನು ನೀಡುವಾಗ, ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರ ಚುನಾವಣೆ ಅಕ್ರಮ ಎಂದು ಘೋಷಿಸಿತು. ಇಂದಿರಾ ಅವರು ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಕೆಲವು ದಿನಗಳ ನಂತರ, ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.

ತುರ್ತು ಪರಿಸ್ಥಿತಿಯ ಅವಧಿ ಮುಗಿದ ನಂತರ 1977 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಂದಿರಾ ಗಾಂಧಿ ಸೋಲನುಭವಿಸಬೇಕಾಯಿತು. ಅವರನ್ನು ಭಾರತೀಯ ಲೋಕದಳದ ಅಭ್ಯರ್ಥಿ ರಾಜನಾರಾಯಣ್ 55,202 ಮತಗಳಿಂದ ಸೋಲಿಸಿದರು. 1984ರ ಲೋಕಸಭೆ ಚುನಾವಣೆಯಲ್ಲಿ ಅರುಣ್ ನೆಹರೂ ಕೂಡ ಈ ಕ್ಷೇತ್ರದಿಂದ ಗೆದ್ದಿದ್ದರು. ಇದಾದ ಕೆಲವು ವರ್ಷ ಬಿಜೆಪಿ ಮತ್ತು ಲೋಕದಳ ಇಲ್ಲಿ ಸ್ಪರ್ಧಿಸಿ ಗೆದ್ದಿದ್ದವು. ಇದನ್ನೂ ಓದಿ: ಹೆದರಬೇಡಿ, ಹೆದರಿ ಓಡಿಹೋಗ್ಬೇಡಿ – ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ ಮೋದಿ

2004 ರಲ್ಲಿ ರಾಹುಲ್ ಗಾಂಧಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದಾಗ, ಸೋನಿಯಾ ಗಾಂಧಿ ಅವರಿಗೆ ಅಮೇಥಿ ಸ್ಥಾನವನ್ನು ಬಿಟ್ಟುಕೊಟ್ಟು ರಾಯ್‌ಬರೇಲಿಯಿಂದ ಸ್ಪರ್ಧಿಸಲು ಪ್ರಾರಂಭಿಸಿದರು. 2004ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ಎಸ್‌ಪಿಯ ಅಶೋಕ್ ಕುಮಾರ್ ಸಿಂಗ್ ಅವರನ್ನು ಸೋಲಿಸಿದರು. 2009ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಚುನಾವಣೆಯಲ್ಲಿ ಸೋನಿಯಾ ಅವರು ಬಿಎಸ್‌ಪಿ ಟಿಕೆಟ್‌ನಲ್ಲಿದ್ದ ಆರ್‌ಎಸ್‌ ಕುಶ್ವಾಹಾ ವಿರುದ್ಧ ದೊಡ್ಡ ಗೆಲುವು ದಾಖಲಿಸಿದರು. 2014 ರಲ್ಲಿ ಸೋನಿಯಾ ಗಾಂಧಿ ಅವರು ಈ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದರು. ಬಿಜೆಪಿಯ ಅಜಯ್ ಅಗರ್ವಾಲ್ ಅವರನ್ನು 3,52,713 ಮತಗಳಿಂದ ಸೋಲಿಸಿದರು. ಕಳೆದ ಚುನಾವಣೆಯಲ್ಲಿ ಅಂದರೆ 2019 ರಲ್ಲಿ ಸೋನಿಯಗಾಂಧಿ ಗೆದ್ದರೂ ಗೆಲುವಿನ ಅಂತರ ಕಡಿಮೆಯಾಗಿದೆ. ಈ ಬಾರಿ ರಾಹುಲ್ ಗಾಂಧಿ ಸ್ಪರ್ಧೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

TAGGED:congressIndira GandhiRaebareliRahul GandhiSonia Gandhiಇಂದಿರಾ ಗಾಂಧಿಕಾಂಗ್ರೆಸ್ರಾಯ್‍ಬರೇಲಿರಾಹುಲ್ ಗಾಂಧಿಸೋನಿಯಾ ಗಾಂಧಿ
Share This Article
Facebook Whatsapp Whatsapp Telegram

Cinema Updates

Vishal
47ನೇ ವಯಸ್ಸಲ್ಲಿ ಖ್ಯಾತ ನಟಿಯನ್ನು ಮದುವೆಯಾಗಲಿದ್ದಾರೆ ನಟ ವಿಶಾಲ್‌ – ಯಾರು ಗೊತ್ತಾ ಆ ಬೆಡಗಿ?
10 hours ago
Sanjjanaa Galrani 1
ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗಲ್ರಾನಿ
11 hours ago
twinkle khanna
ಅಕ್ಷಯ್, ವಿಕ್ಕಿ ಕೌಶಲ್ ‘ಆಪರೇಷನ್ ಸಿಂಧೂರ’ ಸಿನಿಮಾಗಾಗಿ ಫೈಟ್ ಮಾಡ್ತಿಲ್ಲ: ಟ್ವಿಂಕಲ್ ಖನ್ನಾ
12 hours ago
Upendra 2
ಐಪಿಎಲ್ ಕುರಿತಾದ ಕ್ರೀಡಾ ಪ್ರಧಾನ ಚಿತ್ರದಲ್ಲಿ ಉಪ್ಪಿ-‘ಕರ್ವ’ ಡೈರೆಕ್ಟರ್ ಆ್ಯಕ್ಷನ್ ಕಟ್
13 hours ago

You Might Also Like

WEATHER 2
Bengaluru City

ಮುಂದಿನ 3 ಗಂಟೆಯಲ್ಲಿ ಬೆಂಗಳೂರು ಸೇರಿದಂತೆ 5 ಜಿಲ್ಲೆಗಳಲ್ಲಿ ಭಾರೀ ಮಳೆ

Public TV
By Public TV
24 minutes ago
daily horoscope dina bhavishya
Astrology

ದಿನ ಭವಿಷ್ಯ 20-05-2025

Public TV
By Public TV
48 minutes ago
Turkey america
Latest

ಭಾರತದ ಮೇಲೆ ಪಾಕ್‌ ಹಾರಿಸಿದ್ದ ಅತ್ಯಾಧುನಿಕ AMRAAM ಮಿಸೈಲ್‌ ಟರ್ಕಿಗೆ ಪೂರೈಸಲು ಅಮೆರಿಕ ಡೀಲ್‌!

Public TV
By Public TV
7 hours ago
IPL 3
Cricket

ಹೈದರಾಬಾದ್‌ಗೆ 6 ವಿಕೆಟ್‌ಗಳ ಅಮೋಘ ಜಯ – ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದ ಲಕ್ನೋ!

Public TV
By Public TV
8 hours ago
Trump and Putin
Latest

ಉಕ್ರೇನ್ ಸಂಘರ್ಷ ಕೊನೆಗೊಳಿಸಲು ರಷ್ಯಾ ಸಿದ್ಧ – 2 ಗಂಟೆಗೂ ಹೆಚ್ಚುಕಾಲ ಟ್ರಂಪ್‌-ಪುಟಿನ್‌ ಮಾತುಕತೆ

Public TV
By Public TV
8 hours ago
Raichuru Crime
Latest

CRPF ಯೋಧನ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿಗಳು ಅರೆಸ್ಟ್

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?