ಮೂಲಂಗಿ ನೋಡಿದರೆ ಮೂಗು ಮುರಿಯುವವರೇ ಹೆಚ್ಚಾಗಿದ್ದಾರೆ. ಮೂಲಂಗಿ ವಾಸನೇ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಆದರೆ ಮೂಲಂಗಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ವಿಚಾರ ಎಷ್ಟೋ ಜನರಿಗೆ ತಿಳಿದಿರುವುದಿಲ್ಲ. ನಾರಿನಂಶ ಮತ್ತು ವಿಟಮಿನ್ ಅಧಿಕವಿದ್ದು, ಮಲಬದ್ಧತೆ ಮತ್ತು ಮಲವ್ಯಾಧಿಯಂತಹ ಕಾಯಿಲೆಗಳನ್ನು ಗುಣಪಡಿಸಲು ಮೂಲಂಗಿ ಸಹಕಾರಿಯಾಗಿದೆ. ಇದನ್ನೂ ಓದಿ: ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?
Advertisement
* ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.
Advertisement
* ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ಮಾಡುತ್ತದೆ. ಇದನ್ನೂ ಓದಿ: ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್ ಖಾತೆ ಹ್ಯಾಕ್
Advertisement
Advertisement
* ಮೂಲಂಗಿ ಸೊಪ್ಪಿನ ರಸವನ್ನು ಸೇವಿಸಿದರೆ ಮೂತ್ರ ಕಟ್ಟಿಕೊಳ್ಳುವ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.
*ಹಸಿ ಮೂಲಂಗಿ ಹಾಕಿ ಸಲಾಡ್ ಮಾಡಿ ತಿಂದರೆ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುವುದು. ಇದನ್ನೂ ಓದಿ: ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು
* ಮೂಲಂಗಿ ಎಲೆಗಳಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಕಂಡುಬರುತ್ತದೆ. ಮೂಲಂಗಿ ಎಲೆಗಳಿಂದ ತಯಾರಿಸಿದ ಜ್ಯೂಸ್ ಸೇವಿಸಿದರೆ ಜೀರ್ಣಕ್ರಿಯೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದಾಗಿದೆ.
* ತೂಕ ಇಳಿಸಿಕೊಳ್ಳಲು ಬಯಸಿದರೆ, ಮೂಲಂಗಿ ಎಲೆ ಎಲ್ಲರಿಗೂ ಉತ್ತಮ ಆಯ್ಕೆಯಾಗಿದೆ. ಹೌದು, ಮೂಲಂಗಿ ಎಲೆಗಳಿಂದ ತಯಾರಿಸಿದ ಜ್ಯೂಸ್ ಸೇವಿಸುವ ಮೂಲಕ ನೀವು ಸುಲಭವಾಗಿ ತೂಕವನ್ನು ಕಡಿಮೆ ಮಾಡಬಹುದು
ಮೂಲಂಗಿ ಜ್ಯೂಸ್ ಮಾಡುವುದು ಹೇಗೆ?: ಮೂಲಂಗಿ ಎಲೆಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಬಳಿಕ ಸಣ್ಣ ತುಂಡುಗಳಾಗಿ ಕತ್ತರಿಸಿ, ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಂತೆ ಉಪ್ಪು, ಚಿಟಿಕೆ ಕರಿಮೆಣಸಿನ ಪುಡಿ ಮತ್ತು ನಿಂಬೆ ರಸವನ್ನು ಸೇರಿಸಿದರೆ ಮೂಲಂಗಿ ಎಲೆಗಳ ಜ್ಯೂಸ್ ಸವಿಯಲು ಸಿದ್ಧವಾಗುತ್ತದೆ.