ಕಳಚಿ ಬಿದ್ದ ರೇಡಿಯೋ ಕಾಲರ್ – ತೆರಿಗೆ ಹಣ ಪೋಲಾಗುತ್ತಿದೆಂದು ಸ್ಥಳೀಯರ ಆಕ್ರೋಶ

Public TV
1 Min Read
Hassan elephant Radio collar

ಹಾಸನ: ಕಾಡಾನೆ ಚಲನ-ವಲನ ಅರಿಯಲು ಕಳೆದೆರಡು ದಿನಗಳ ಹಿಂದಷ್ಟೇ ಹಾಸನ (Hassan) ಜಿಲ್ಲೆ ಬೇಲೂರು (Beluru) ತಾಲೂಕಿನ ಬಿಕ್ಕೋಡು ಬಳಿ ಕಾಡಾನೆಯೊಂದಕ್ಕೆ (Wild Elephant) ಅಳವಡಿಸಿದ್ದ ರೇಡಿಯೋ ಕಾಲರ್ (Radio collar) ಅದರ ಕುತ್ತಿಗೆಯಿಂದ ಕಳಚಿ ಬಿದ್ದಿದೆ.

ಶುಕ್ರವಾರ ಓಲ್ಡ್ ಬೆಲ್ಟ್‌ನ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಆದರೆ ಅದು ಹಳೇಬೀಡು ಹೋಬಳಿ ಕೋಡಿಹಳ್ಳಿ ಗ್ರಾಮದ ಬಳಿ ಬಿದ್ದು ಹೋಗಿದೆ. 6 ಸಾಕಾನೆಗಳೊಂದಿಗೆ ಶುಕ್ರವಾರ ಸುದೀರ್ಘ ಕಾರ್ಯಾಚರಣೆ ನಡೆಸಿ ಓಲ್ಡ್ ಬೆಲ್ಟ್ ಹೆಸರಿನ ಗುಂಪಿನಲ್ಲಿರುವ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು.

ELEPHANT

ಚಿಕ್ಕಬಿಕ್ಕೋಡು ಬಳಿ 6 ಸಾಕಾನೆಗಳೊಂದಿಗೆ ಕಾರ್ಯಾಚರಣೆ ನಡೆಸಿ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ರೇಡಿಯೋ ಕಾಲರ್ ಅಳವಡಿಸಿದ ನಂತರ ಹೆಣ್ಣಾನೆಯನ್ನು ಅಲ್ಲೇ ಕಾಫಿ ತೋಟದೊಳಗೆ ಇದ್ದ ಹಿಂಡಿನೊಂದಿಗೆ ಬಿಡಲಾಗಿತ್ತು. ಇದೀಗ ಹೆಣ್ಣಾನೆ ರೇಡಿಯೋ ಕಾಲರನ್ನೇ ಬೀಳಿಸಿಕೊಂಡು ಹೋಗಿದ್ದು, ಶ್ರಮವಹಿಸಿ ಅಳವಡಿಸಿದ್ದ ಕಾಲರ್ ವ್ಯರ್ಥವಾಗಿದೆ. ಇದನ್ನೂ ಓದಿ: ಅಪರಿಚಿತೆಯ ಮಾತುಕೇಳಿ ವೀಡಿಯೋ ಕಾಲ್‍ನಲ್ಲಿ ನಗ್ನವಾಗಿ ಲಕ್ಷಾಂತರ ರೂ. ಕಳೆದುಕೊಂಡ!

ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. 9 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಸರ್ಕಾರ ಅನುಮತಿ ನೀಡಿದೆ. ಕಳೆದ ಶುಕ್ರವಾರ ಒಂದು ಕಾಡಾನೆಗೆ ಹತ್ತಾರು ಅಧಿಕಾರಿಗಳು, ಸಿಬ್ಬಂದಿ ಒಟ್ಟುಗೂಡಿ ರೇಡಿಯೋ ಕಾಲರ್ ಹಾಕಲಾಗಿತ್ತು.

ಆದರೆ ಅದು ಈಗ ಕಳಚಿ ಬಿದ್ದಿದೆ. ಆದರೂ ಅಧಿಕಾರಿಗಳ ಗಮನಕ್ಕೆ ಬಾರದೇ ಇರುವುದು ವಿಪರ್ಯಾಸ. ಬೆಲ್ಟ್ ಅಳವಡಿಸುವಾಗ ಭದ್ರತಾ ಕ್ರಮ ಅನುಸರಿಸದೇ ಇರುವುದು ಇದಕ್ಕೆ ಕಾರಣ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಜನ ಸಾಮಾನ್ಯರ ತೆರಿಗೆ ಹಣ ಹೀಗೆ ಪೋಲು ಮಾಡಿರುವುದು ಖಂಡನೀಯ. ಇನ್ನಾದರೂ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಡಿಸೆಂಬರ್ 4ರಿಂದ ಚಳಿಗಾಲದ ಸಂಸತ್ ಅಧಿವೇಶನ ಆರಂಭ

Share This Article