ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ (Radhika Pandit) ಮದುವೆಯಾದ ಬಳಿಕ ಅಭಿನಯದಿಂದ ದೂರ ಉಳಿದಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆ್ಯಕ್ಟೀವ್ ಇರುವ ರಾಧಿಕಾ ಆಗಾಗ ಪರ್ಸನಲ್ ಫೋಟೋಗಳನ್ನ ಶೇರ್ ಮಾಡ್ತಾ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿದ್ದಾರೆ.
ಯಶ್ ಪತ್ನಿಯಾಗಿ ಇಬ್ಬರು ಮಕ್ಕಳ ತಾಯಿಯಾಗಿ ವೈಯಕ್ತಿಕ ಬದುಕಿನಲ್ಲಿ ಬ್ಯುಸಿ ಇರುವ ರಾಧಿಕಾಗೆ ಸದಾ ಮತ್ತೆ ಅಭಿನಯಕ್ಕೆ ಮರಳುವುದು ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಇದೀಗ ನಯಾ ಲುಕ್‌ನಲ್ಲಿ ರಾಧಿಕಾ ಮಿಂಚಿದ್ದು ವಯಸ್ಸು ಬರೀ ನಂಬರ್ ಅಷ್ಟೇ ಅನ್ನೋದಕ್ಕೆ ಸಾಕ್ಷಿ ಹೇಳುವಂತಿದೆ ಲುಕ್.
ಸಾಂಪ್ರದಾಯಿಕ ಲುಕ್ ಫೋಟೋಶೂಟ್‌ನಲ್ಲಿ (New Photo Shoot) ಮಿಂಚಿದ ರಾಧಿಕಾ ಪಂಡಿತ್ ಲೆಹಂಗಾ ಹಾಗೂ ಸೀರೆ ಧರಿಸಿ, ಆಭರಣಗಳಲ್ಲಿ ಸಿಂಗರಿಸಿಕೊಂಡು ಆಕರ್ಷಕವಾಗಿ ಕಾಣುತ್ತಾರೆ. ಸಾಮಾನ್ಯವಾಗಿ ನಟನೆಗೆ ಬ್ರೇಕ್ ಪಡೆದಿರುವಾಗ ನಟಿಯರು ಫಿಟ್ನೆಸ್ ಕಡೆ ಗಮನ ಕೊಡುವುದು ವಿರಳ. ಆದರೆ ರಾಧಿಕಾ ಪಂಡಿತ್ ಮಾತ್ರ ಈಗಲೂ ಅಭಿನಯಕ್ಕೆ ಮರಳುವಂತೆ ಸೌಂದರ್ಯ ಕಾಪಾಡಿಕೊಂಡಿದ್ದು ಅವರ ಅಭಿಮಾನಿಗಳಲ್ಲಿ ಹರ್ಷ ಉಂಟುಮಾಡಿದೆ.
ಹೀಗಾಗಿ ಇನ್ಸ್ಟಾನಲ್ಲಿ ರಾಧಿಕಾ ಫೋಟೋಗಳನ್ನ ಪೋಸ್ಟ್ ಮಾಡುತ್ತಿದ್ದಂತೆ ಕಾಮೆಂಟ್‌ಗಳ ಸುರಿಮಳೆ ಬಂದಿದ್ದು ಯಾವಾಗ ಸಿನಿಮಾ ಎಂದು ಫ್ಯಾನ್ಸ್ ಪ್ರಶ್ನೆ ಕೇಳುತ್ತಿದ್ದಾರೆ, ಸಿನಿಮಾಗಳಲ್ಲಿ ಅಪರೂಪವಾಗಿರುವ ಮೊಗ್ಗಿನ ಮನಸ್ಸು ಬ್ಯೂಟಿ ಆಗಾಗ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಆಕರ್ಷಕ ಫೋಟೋಗಳೊಂದಿಗೆ ಬಂದು ಗಮನ ಸೆಳೆಯುತ್ತಾರೆ. ಅಂದಹಾಗೆ ರಾಧಿಕಾ ಹೀಗೆ ಫೋಟೋಶೂಟ್‌ನಲ್ಲಿ ಕಾಣಿಸ್ಕೊಂಡಿದ್ದು ಆಭರಣ ಜಾಹೀರಾತುವೊಂದರ ರಾಯಭಾರಿಯಾಗಿರುವುದಕ್ಕಾಗಿದೆ.