Bengaluru CityCinemaKarnatakaLatestSandalwood

ಕೊನೆಗೂ ಯಶ್ ಮಗಳ ಹೆಸರು ರಿವೀಲ್ ಆಯ್ತು

Advertisements

ಬೆಂಗಳೂರು: ನಟ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ತಮ್ಮ ಮುದ್ದು ಮಗಳ ನಾಮಕರಣವನ್ನು ಸರಳವಾಗಿ ಮಾಡಿದ್ದು, `ಬೇಬಿ ವೈಆರ್’ ಹೆಸರಲ್ಲಿ ಪರಿಚಯ ಮಾಡಿದ್ದ ಮಗಳಿಗೆ ‘ಐರಾ ಯಶ್’ ಎಂದು ನಾಮಕರಣ ಮಾಡಿದ್ದಾರೆ.

ಯಶ್ ಹಾಗೂ ರಾಧಿಕಾ ಅವರು ತಾಜ್ ವೆಸ್ಟ್ ಎಂಡ್ ನಲ್ಲಿ ತಮ್ಮ ಪುತ್ರಿಯ ನಾಮಕರಣ ಕಾರ್ಯಕ್ರಮವನ್ನು ಮಾಡಿದ್ದು, ಒಕ್ಕಲಿಗರ ಸಂಪ್ರದಾಯದಂತೆ ನಾಮಕರಣ ನೆರವೇರಿಸಿದ್ದಾರೆ. ಶತಭಿಷಾ ನಕ್ಷತ್ರ, ಸಿಂಹ ಲಗ್ನದಲ್ಲಿ ನಾಮಕರಣ ಶಾಸ್ತ್ರ ನಡೆದಿದ್ದು, ಕಾರ್ಯಕ್ರಮದಲ್ಲಿ ಸಂಬಂಧಿಕರು ಮತ್ತು ಆಪ್ತರು ಮಾತ್ರ ಭಾಗವಹಿಸಿ ಮಗುವಿಗೆ ಆಶೀರ್ವಾದ ಮಾಡಿದ್ದಾರೆ. ಐರಾ ಅಂದರೆ ಲಕ್ಷ್ಮಿ ಅರ್ಥ ಬರುವ ಹಿನ್ನೆಲೆಯಲ್ಲಿ ಈ ಹೆಸರನ್ನು ಇರಿಸಿದ್ದಾರೆ.

ನಾಮಕರಣದ ನಂತರ ಕ್ಯಾಮೆರಾ ಮ್ಯಾನ್ ರಾಘವೇಂದ್ರ ಬಿ. ಕೋಲಾರ ತಂಡದಿಂದ ಫೋಟೋಶೂಟ್ ಮಾಡಿಸಿದ್ದಾರೆ.

ಎರಡು ದಿನಗಳ ಹಿಂದೆಯೇ ಯಶ್ ಮತ್ತು ರಾಧಿಕಾ ಅವರು ಇಂದು ತಮ್ಮ ಬೇಬಿ ವೈಆರ್‍ಗೆ ನಾಮಕರಣ ಮಾಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದರು.

ನಟ ಯಶ್ ಮತ್ತು ರಾಧಿಕಾ ಇಬ್ಬರು, “ಹಾಯ್..ನಂಗೆ ಹೆಸರಿಡುವ ಸಮಯ ಬಂದಿದೆ. ನೀವೆಲ್ಲಾ ತುಂಬಾ ಚೆನ್ನಾಗಿರುವ ಹೆಸರುಗಳನ್ನ ನನಗೋಸ್ಕರ ಆಯ್ಕೆ ಮಾಡಿದ್ರಿ. ಅದನ್ನೆಲ್ಲಾ ಮನಸಲ್ಲಿ ಇಟ್ಟುಕೊಂಡು ನನ್ನ ತಂದೆ ತಾಯಿ ನನಗೊಂದು ಮುದ್ದಾದ ಹೆಸರನ್ನ ಇಡುತ್ತಿದ್ದಾರೆ. ಅದೇನು ಅಂತ ತಿಳಿದುಕೊಳ್ಳಬೇಕು ಅಂದರೆ ನಾವೆಲ್ಲರೂ ಜೂನ್ 23 ತನಕ ಕಾಯಬೇಕು ಪ್ರೀತಿಯಿಂದ ನಿಮ್ಮ ಬೇಬಿ ವೈಆರ್” ಎಂದು ಬರೆದು ಮಗಳ ಫೋಟೋ ಅಪ್ಲೋಡ್ ಮಾಡಿದ್ದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Leave a Reply

Your email address will not be published.

Back to top button