ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಅವರ ತಂದೆ-ತಾಯಿ, ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಸೊಸೆ ರಾಧಿಕಾ ಪಂಡಿತ್ ಪ್ರೀತಿಯ ಅತ್ತೆ-ಮಾವನಿಗೆ ಶುಭಕೋರಿದ್ದಾರೆ.
ನಟಿ ರಾಧಿಕಾ ಪಂಡಿತ್ ಅವರು ತಮ್ಮ ಅತ್ತೆ-ಮಾವನ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷವಾಗಿ ವಿಶ್ ಮಾಡಿದ್ದಾರೆ. ಶನಿವಾರ ರಾತ್ರಿಯೇ ಯಶ್ ಮತ್ತು ರಾಧಿಕಾ ಕೇಕ್ ತಂದು ಕಟ್ ಮಾಡಿಸಿ ಆಚರಿಸಿದ್ದಾರೆ. ಯಶ್ ಅವರ ಅಪ್ಪ ತಮ್ಮ ಪತ್ನಿಗೆ ಕೇಕ್ ತಿನ್ನಿಸುತ್ತಿರುವ ಫೋಟೋವನ್ನು ತೆಗೆದು ಅದನ್ನು ಫೇಸ್‍ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಸ್ಯಾಂಡಲ್ ವುಡ್ ಸಿಂಡ್ರೆಲಾ ಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ.
ಪೋಸ್ಟ್ ನಲ್ಲೇನಿದೆ?
“ನನ್ನ ಪ್ರೀತಿಯ ಅತ್ತೆ-ಮಾವನಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ನನ್ನ ಜೀವನದಲ್ಲಿ ನಿಮ್ಮಿಬ್ಬರನ್ನು ಪಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ. ನೀವು ನನಗೆ ಕೊಟ್ಟಿರುವ ಉತ್ತಮ ಉಡುಗೊರೆಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು. ನಿಮ್ಮ ಮಗನೇ ನನಗೆ ಪ್ರಪಂಚ” ಎಂದು ಬರೆದು ವಿಶ್ ಮಾಡಿದ್ದಾರೆ.
ರಾಧಿಕಾ ಅವರು ವಿಶ್ ಮಾಡಿ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಯಶ್ ಪೋಷಕರಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.
https://www.instagram.com/p/BwNSl4OBIYq/