ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಸಿನಿಮಾಗಳಿಂದ ಬ್ರೇಕ್ ಪಡೆದು, ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ರಾಧಿಕಾ ಈಗ ಐರಾ ಮತ್ತು ಯಥರ್ವ್ನ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ಸಖತ್ ವೈರಲ್ ಆಗುತ್ತಿದೆ.
ಯಶ್ ಮತ್ತು ರಾಧಿಕಾ ದಂಪತಿಗೆ ಐರಾ ಮತ್ತು ಯಥರ್ವ್ ಎಂಬ ಮುದ್ದಾದ ಮಕ್ಕಳಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಮಕ್ಕಳ ಜೊತೆ ಸಮಯ ಕಳೆಯೋಕೆ ಮೀಸಲಿಡುತ್ತಾರೆ. ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಕ್ಕಳು ಮಾಡುವ ಕೀಟಲೆಯನ್ನು ಆಗಾಗ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಇದೀಗ ಮುದ್ದು ಮಕ್ಕಳ ಮುದ್ದಾದ ಫೋಟೋವನ್ನು ನಟಿ ರಾಧಿಕಾ ಹಂಚಿಕೊಂಡಿದ್ದಾರೆ. ಕೆಜಿಎಫ್ 2 ಚಿತ್ರದ 50ನೇ ದಿನಕ್ಕೆ ಯಶ್ ನಟನೆಯ ಹೊಸ ಸಿನಿಮಾ ಅನೌನ್ಸ್?
View this post on Instagram
ಸಹೋದರ ಯಥರ್ವ್ ಜೊತೆಯಿರೋ ಐರಾ ಕ್ಯಾಮೆರಾ ಕಣ್ಣಿಗೆ ಮುದ್ದಾದ ನಗು ಬೀರಿದ್ದಾಳೆ. ಈ ಫೋಟೋ ಜೊತೆ ಮಂಡೇ ಬ್ಲ್ಯೂಸ್ ಎನ್ನುವ ಕ್ಯಾಪ್ಷನ್ ನೀಡಿದ್ದಾರೆ. ಒಟ್ನಲ್ಲಿ ಐರಾ ಕ್ಯೂಟ್‌ನೆಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 2016ರಲ್ಲಿ ಯಶ್ ಜೊತೆ ರಾಧಿಕಾ ಹಸೆಮಣೆ ಏರಿದ್ದರು. ಬಳಿಕ 2019ರಲ್ಲಿ `ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲಿ ರಾಧಿಕಾ ನಾಯಕಿಯಾಗಿ ಮಿಂಚಿದ್ದರು. ಆ ನಂತರ ಮಕ್ಕಳ ಆರೈಕೆಯಲ್ಲಿರುವ ರಾಧಿಕಾ, ಈಗ ಮತ್ತೆ ಸಿನಿಮಾಗೆ ವಾಪಸ್ ಆಗುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಸೂಕ್ತ ಕಥೆ ಜೊತೆ ರಾಧಿಕಾ ಬೆಳ್ಳಿಪರದೆಯಲ್ಲಿ ಮಿಂಚೋದು ಗ್ಯಾರೆಂಟಿ.