Connect with us

Bengaluru City

ಐರಾಳ ನಗುವಿಗೆ ಮನಸೋತ ನೆಟ್ಟಿಗರು – ತಾಯಿ, ಮಗಳ ಕ್ಯೂಟ್ ವಿಡಿಯೋ ವೈರಲ್

Published

on

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ತಮ್ಮ ಅಭಿನಯದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕೇವಲ ಯಶ್, ರಾಧಿಕಾ ಮಾತ್ರವಲ್ಲ ಅವರ ಮುದ್ದಾದ ಮಗಳು ಐರಾಳಿಗೂ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ.

ಆಗಾಗ ರಾಕಿಂಗ್ ದಂಪತಿ ಐರಾಳ ವಿಡಿಯೋ ಪೋಸ್ಟ್ ಮಾಡುತ್ತಿರುತ್ತಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿರುತ್ತೆ. ಈಗ ರಾಧಿಕಾ ಹಂಚಿಕೊಂಡಿರುವ ವಿಡಿಯೋದಲ್ಲಿ ತನ್ನ ಕ್ಯೂಟ್ ನಗುವಿನಿಂದ ಐರಾ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾಳೆ. ಇದನ್ನೂ ಓದಿ: ಐರಾ ಹುಟ್ಟುಹಬ್ಬದ ಎಕ್ಸ್‌ಕ್ಲೂಸಿವ್ ವಿಡಿಯೋ ಹಂಚಿಕೊಂಡ ಯಶ್

ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ರಾಧಿಕಾ ಪಂಡಿತ್ ಐರಾಳ ಮುದ್ದಾದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಐರಾಳ ವಿಡಿಯೋಗಳನ್ನು ಶೇರ್ ಮಾಡದೆ ತುಂಬಾ ದಿನಗಳಾಗಿದೆ. ಬಹಳಷ್ಟು ಮಂದಿ ಐರಾಳ ಮುದ್ದಾದ ವಿಡಿಯೋ ಹಾಕಿ ಎಂದು ಕೇಳುತ್ತಿದ್ದರು. ನಿಮಗಾಗಿ ಐರಾಳ ಉಗುರು ಕಟ್ ಮಾಡುತ್ತಿರುವ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ. ಎಲ್ಲರಿಗೂ ಪ್ರೀತಿಯ ಫೆಬ್ರವರಿ ತಿಂಗಳ ಶುಭಾಶಯ ಎಂದು ಐರಾ ಹಾಗೂ ತಾವು ಇರುವ ವಿಡಿಯೋವನ್ನು ರಾಧಿಕಾ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಐರಾ: ವಿಡಿಯೋ

ಐರಾಳ ಮುದ್ದಿನ ವಿಡಿಯೋವನ್ನು ಈವರೆಗೆ 4 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ವಿಡಿಯೋದಲ್ಲಿ ತಾಯಿ ಮಗಳ ಪ್ರೀತಿ, ಐರಾಳ ಮುದ್ದಾದ ನಗುವಿಗೆ ಎಲ್ಲರೂ ಫಿದಾ ಆಗಿದ್ದು, ಸದ್ಯ ಐರಾಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

ಈ ಹಿಂದೆ ಯಶ್ ಹುಟ್ಟುಹಬ್ಬಕ್ಕೆ ಐರಾ ಕೇಕ್ ತಯಾರಿಸಲು ರಾಧಿಕಾ ಪಂಡಿತ್‍ಗೆ ಸಹಾಯ ಮಾಡಿದ ವಿಡಿಯೋ ಸಖತ್ ವೈರಲ್ ಆಗಿತ್ತು. ರಾಧಿಕಾ ತಮ್ಮ ಮಗಳು ಐರಾ ಜೊತೆ ಕೇಕ್ ತಯಾರಿಸುತ್ತಿರುವ ವಿಡಿಯೋವನ್ನು ಯಶ್ ಅವರ ಇನ್‍ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಅದಕ್ಕೆ, “ಸರ್ಪ್ರೈಸ್, ನಿಮ್ಮ ಜೀವನವನ್ನು ನಾವು ವಹಿಸಿಕೊಂಡಂತೆ, ನಿಮ್ಮ ಖಾತೆಯನ್ನು ಸಹ ವಹಿಸಿಕೊಂಡಿದ್ದೇವೆ. ನಿಮ್ಮ ದೊಡ್ಡ ಅಭಿಮಾನಿ ಕಡೆಯಿಂದ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿದ್ದರು.

ವಿಡಿಯೋದಲ್ಲಿ ರಾಧಿಕಾ, ಯಶ್ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ಪ್ರತಿ ವರ್ಷ ನಾನು ನಿಮ್ಮ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸುತ್ತೇನೆ. ಈ ವರ್ಷ ಕೇಕ್ ತಯಾರಿಸಲು ನನಗೆ ಸಹಾಯ ಮಾಡಲು ಐರಾ ಇದ್ದಾಳೆ. ಆದರೆ ಆಕೆ ಕೇಕ್ ತಯಾರಿಸುವುದಕ್ಕಿಂತ ಹೆಚ್ಚಾಗಿ ತಿನ್ನುತ್ತಿದ್ದಾಳೆ. ಆದರೆ ನಾವು ಆಕೆಯ ಶ್ರಮವನ್ನು ಮೆಚ್ಚಲೇಬೇಕು. ನಿಮಗೋಸ್ಕರ ನಾನು ಒಂದು ಪೀಸ್ ಕೇಕ್ ಅನ್ನು ತೆಗೆದಿಟ್ಟಿರುತ್ತೇನೆ ಎಂದು ಹೇಳಿ ರಾಕಿಂಗ್ ಸ್ಟಾರ್‍ಗೆ ಸ್ಪೆಷಲ್ ಸರ್ಪ್ರೈಸ್ ನೀಡಿದ್ದರು.

Click to comment

Leave a Reply

Your email address will not be published. Required fields are marked *

www.publictv.in