ಹಳೇ ಫೋಟೋ ಹಾಕಿ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ ಮಿಸಸ್ ರಾಮಾಚಾರಿ- ಪತ್ನಿ ಜೊತೆಗಿರಲು ಅಮೆರಿಕಗೆ ಹಾರಿದ್ರು ಯಶ್

Public TV
1 Min Read
YASH RADHIKA 1

ಬೆಂಗಳೂರು: ತೆರೆಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಲವ್ ಮಾಡಿ, ಮದುವೆ ಆದವರು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್. `ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಅಂತಲೇ ಕರೆಯಿಸಿಕೊಳ್ಳುವ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷದ ಮೇಲಾಗಿದೆ.

ಧಾರಾವಾಹಿಯಲ್ಲಿ ತೆರೆ ಹಂಚಿಕೊಂಡ ಈ ಜೋಡಿ, ಬಳಿಕ ಬೆಳ್ಳಿತೆರೆ ಮೇಲೂ ಯಶಸ್ವಿಯಾಗಿದ್ದಾರೆ. ಈ ಜೋಡಿ ವರ್ಷಗಳ ಕಾಲ ಪ್ರೇಮ ಪಾಶದಲ್ಲಿ ಸಿಲುಕಿದ್ದವರು. ದಂಪತಿಯಾಗಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಗೆ `ಪ್ರೇಮಿಗಳ ದಿನ’ ಅಂದರೆ ತುಂಬಾ ಸ್ಪೆಷಲ್. ಆದ್ದರಿಂದ ಈ ಬಾರಿ ಪ್ರೇಮಿಗಳ ದಿನವನ್ನ ಯಶ್ ಹಾಗೂ ರಾಧಿಕಾ ಪಂಡಿತ್ ಅಮೆರಿಕದ ಚಿಕಾಗೋದಲ್ಲಿ ಆಚರಿಸಿದ್ದಾರೆ.

3 radhika pandit yashcopy 1518595621

ಪ್ರೇಮಿಗಳ ದಿನದಂದು ರಾಧಿಕಾ ಪಂಡಿತ್ ಒಂದು ಅಪರೂಪದ ಫೋಟೋವನ್ನ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ದಶಕದ ಹಿಂದೆ ಅಂದರೆ 2006 ರಲ್ಲಿ ಕ್ಲಿಕ್ ಆದ ಈ ಫೋಟೋವನ್ನ ರಾಧಿಕಾ ಪಂಡಿತ್ `ವ್ಯಾಲೆಂಟೈನ್ಸ್ ಡೇ’ ಪ್ರಯುಕ್ತ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

“ಈ ಫೋಟೋ ತೆಗೆದಿದ್ದಾಗ ನಾನು ಮತ್ತು ಯಶ್ ಒಳ್ಳೆಯ ಸ್ನೇಹಿತರಾಗಿದ್ದೆವು. ಆದರೆ ಈ ಫೋಟೋನ ಈಗ ನೋಡಿದರೆ ಆಗಲೇ ನಮ್ಮ ಪ್ರೀತಿ ಹೃದಯಾಳದಲ್ಲಿ ಅಡಗಿತ್ತು. ಅದು ನಮ್ಮ ಅರಿವಿಗೆ ಬಂದಿರಲಿಲ್ಲವೇನೋ ಎಂಬ ಭಾವನೆ ಮೂಡುತ್ತದೆ” ಎಂದು ಫೇಸ್ ಬುಕ್ ನಲ್ಲಿ ಬರೆದು ಫೋಟೋ ಜೊತೆ ಪೋಸ್ಟ್ ಮಾಡಿದ್ದಾರೆ.

radhika 1 1

ಸದ್ಯಕ್ಕೆ ರಾಧಿಕಾ ಪಂಡಿತ್ ಅಮೆರಿಕಾದ ಚಿಕಾಗೋದಲ್ಲಿದ್ದಾರೆ. ಪ್ರೇಮಿಗಳ ದಿನದಂದು ಪತ್ನಿಯ ಜೊತೆಗಿರಲು ಯಶ್ ಕೂಡ ಅಮೆರಿಕಗೆ ಹೋಗಿದ್ದಾರೆ. ರಾಧಿಕಾ ಪಂಡಿತ್ ಸಹೋದರನಿಗೆ ಹೆಣ್ಣು ಮಗುವಾಗಿದೆ. ರಾಧಿಕಾ ಸಹೋದರ ನೆಲೆಸಿರುವುದು ಚಿಕಾಗೋದಲ್ಲಿ. ಕುಟುಂಬಕ್ಕೆ ಹೊಸ ಅತಿಥಿಯ ಆಗಮನ ಆಗಿರುವುದರಿಂದ ಕೆಲ ದಿನಗಳ ಹಿಂದೆಯಷ್ಟೇ ರಾಧಿಕಾ ಅಮೆರಿಕಗೆ ಹಾರಿದ್ದರು. ಈಗ ಯಶ್ ಕೂಡ ಚಿಕಾಗೋಗೆ ಹೋಗಿದ್ದು, ಯಶ್ ಜೊತೆಗಿನ ಫೋಟೋವನ್ನೂ ಕೂಡ ರಾಧಿಕಾ ಹಂಚಿಕೊಂಡಿದ್ದಾರೆ.

radhika 2 1

radhika 3 1

Capture 1

Share This Article
Leave a Comment

Leave a Reply

Your email address will not be published. Required fields are marked *