– ಮತ್ತೆ ಅರಳಿತು ಮೊಗ್ಗಿನ ಮನಸು!
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾದ ಬಳಿಕ ಮರೆಯಾದಂತಿದ್ದ ಮೊಗ್ಗಿನ ಮನಸಿನ ಹುಡುಗಿ ಮತ್ತೆ ಬಂದಿದ್ದಾರೆ. ಮದುವೆಯ ಬಳಿಕ ಚಿತ್ರ ರಂಗದಿಂದ ಸಂಪೂರ್ಣವಾಗಿ ದೂರವಾದಂತಿದ್ದ ರಾಧಿಕಾ ಪಂಡಿತ್ ಮತ್ತೆ ನಾಯಕಿಯಾಗಿ ಮರಳಿದ್ದಾರೆ. ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿಗೆ ರಾಧಿಕಾ ನಾಯಕಿಯಾಗಲಿದ್ದಾರೆಂಬುದು ಲೇಟೆಸ್ಟ್ ಸುದ್ದಿ!
ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಒಟ್ಟಾಗಿ ನಟಿಸಲಿರುವ ಈ ಚಿತ್ರಕ್ಕೆ ಇನ್ನೂ ಹೆಸರು ಫಿಕ್ಸಾಗಿಲ್ಲ. ಆದರೆ ಈ ಚಿತ್ರವನ್ನು ಪ್ರಿಯಾ ವಿ ನಿರ್ದೇಶನ ಮಾಡಲಿದ್ದಾರೆಂಬ ವಿಚಾರ ಮಾತ್ರ ಜಾಹೀರಾಗಿದೆ. ಇದೀಗ ಈ ಚಿತ್ರಕ್ಕೆ ಸಕಲ ತಯಾರಿಗಳೂ ಭರದಿಂದ ಸಾಗುತ್ತಿವೆ. ಇನ್ನೇನು ತಿಂಗಳ ಅಂತರದಲ್ಲಿಯೇ ಚಿತ್ರೀಕರಣ ಶುರು ಮಾಡಲಿರೋ ಈ ಚಿತ್ರವನ್ನು ಈ ವರ್ಷದ ಕಡೆಯ ಹೊತ್ತಿಗೆ ತೆರೆ ಕಾಣಿಸುವ ಗುರಿಯೂ ಚಿತ್ರ ತಂಡಕ್ಕಿದೆ.
Advertisement
Advertisement
ಅಲ್ಲಿಗೆ ತಮ್ಮಿಷ್ಟದ ತಾರೆ ಮದುವೆಯಾದ ನಂತರ ಚಿತ್ರ ರಂಗದಿಂದ ದೂರಾಗುತ್ತಾರೆಂಬ ಕಸಿವಿಸಿಯಿಂದಿದ್ದ ರಾಧಿಕಾ ಪಂಡಿತ್ ಅಭಿಮಾನಿಗಳು ಈ ಸುದ್ದಿಯಿಂದ ಖುಷಿಗೊಂಡಿದ್ದಾರೆ. ರಾಧಿಕಾ ನಟಿಸುತ್ತಿರೋ ಈ ಚಿತ್ರದ ಕಥೆಯೇನೆಂಬುದರಿಂದ ಹಿಡಿದು ಎಲ್ಲ ವಿಚಾರಗಳನ್ನೂ ಚಿತ್ರ ತಂಡ ಗೌಪ್ಯವಾಗಿಟ್ಟಿದೆ. ಆದರೆ ರಾಧಿಕಾ ಅಳೆದೂ ತೂಗಿ ಈ ಕಥೆಯ ಕಸುವು ನೋಡಿಯೇ ಒಪ್ಪಿಕೊಂಡಿದ್ದಾರೆಂಬುದು ಮಾತ್ರ ಸತ್ಯ. ಯಾಕೆಂದರೆ ಮದುವೆ ಗೌಜಿನ ನಂತರದಲ್ಲಿ ರಾಧಿಕಾ ಮುಂದೆ ಸಾಕಷ್ಟು ಕಥೆಗಳು ಬಂದಿದ್ದವಂತೆ. ಆದರೆ ಅದ್ಯಾವುದನ್ನೂ ಒಪ್ಪಿಕೊಳ್ಳದ ರಾಧಿಕಾ ಈ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆಂದರೆ ಕಥೆ ಚೆನ್ನಾಗಿದೆ ಅಂತಲೇ ಅರ್ಥ.
Advertisement
ಮೊಗ್ಗಿನ ಮನಸು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರಾಧಿಕಾ ಆ ನಂತರದಲ್ಲಿ ನಂಬರ್ ಒನ್ ನಟಿಯಾಗಿ ಹೊರ ಹೊಮ್ಮಿದ್ದು ತನ್ನ ನಟನೆಯ ಕಾರಣದಿಂದಲೇ. ವಿವಾದ ತಗಾದೆಗಳಿಂದ ಸದಾ ದೂರವಿರುವ ರಾಧಿಕಾ ಅನೂಪ್ ಭಂಡಾರಿಗೆ ಜೊತೆಯಾಗಿ ರೀ ಎಂಟ್ರಿ ಕೊಟ್ಟಿರೋದು ಸಹಜವಾಗಿಯೇ ಚಿತ್ರ ರಂಗದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.